ಬಾಲಕಿಯರ ಶಿಕ್ಷಣ ನಿಷೇಧ; ತಾಲಿಬಾನ್ ಆಡಳಿತ ಕ್ರಮವನ್ನು ಹೊಗಳಿದ ಧರ್ಮಪ್ರಚಾರಕ ಝಾಕಿರ್ ನಾಯಕ್!
ವಿವಾದಾತ್ಮಕ ಇಸ್ಲಾಮಿಕ್ ಧರ್ಮಪ್ರಚಾರಕ ಝಾಕಿರ್ ನಾಯಕ್ ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣದ ಮೇಲಿನ ತಾಲಿಬಾನ್‌ನ ಕಠಿಣ ನಿರ್ಬಂಧಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದು, ಈ ಹೇಳಿಕೆಗೆ ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಾಲಿಬಾನ್ ಬಾಲಕಿಯರ ಪ್ರೌಢ ಹಾಗೂ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ದೇಶದಲ್ಲಿ ಇಸ್ಲಾಮಿಕ್ ನಿಯಮಾವಳಿಗಳ ಪ್ರಕಾರ ಸೂಕ್ತ ಭದ್ರತೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣವಾಗುವವರೆಗೆ ಕೇವಲ ಮುಂದೂಡಿದೆ ಎಂದು ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ವಿವಾದಾತ್ಮಕ ಇಸ್ಲಾಮಿಕ್ ಧರ್ಮಪ್ರಚಾರಕ ಝಾಕಿರ್ ನಾಯಕ್ (Zakir Naik) ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣದ ಮೇಲಿನ ತಾಲಿಬಾನ್‌ನ (Taliban) ಕಠಿಣ ನಿರ್ಬಂಧಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದು, ಈ ಹೇಳಿಕೆಗೆ ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಭಾರತದಲ್ಲಿ ದ್ವೇಷದ ಭಾಷಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬೇಕಾಗಿರುವ ಹಾಗೂ ಪ್ರಸ್ತುತ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಝಾಕಿರ್ ನಾಯಕ್, ಇತ್ತೀಚಿನ ವೀಡಿಯೊದಲ್ಲಿ ತಾಲಿಬಾನ್ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ.
ತಾಲಿಬಾನ್ ಬಾಲಕಿಯರ ಪ್ರೌಢ ಹಾಗೂ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ದೇಶದಲ್ಲಿ ಇಸ್ಲಾಮಿಕ್ ನಿಯಮಾವಳಿಗಳ ಪ್ರಕಾರ ಸೂಕ್ತ ಭದ್ರತೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣವಾಗುವವರೆಗೆ ಕೇವಲ ಮುಂದೂಡಿದೆ ಎಂದು ಅವರು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಪಾಠ ಮಾಡಲು ಅಗತ್ಯವಿರುವಷ್ಟು ಮಹಿಳಾ ಶಿಕ್ಷಕಿಯರಿಲ್ಲ. ಸೂಕ್ತ ಶಿಕ್ಷಕಿಯರ ನೇಮಕವಾಗುವವರೆಗೆ ಶಿಕ್ಷಣ ವಿಳಂಬವಾದರೆ ತಪ್ಪೇನಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ವಿಡಿಯೋ ನೋಡಿ
It is deeply troubling and disappointing to see an Islamic scholar of such global prominence as Dr. @drzakiranaik rationalise the Taliban’s systematic exclusion of girls from education. Presenting an indefinite ban as a mere “postponement” and invoking a shortage of female teachers without explaining how that shortage can be addressed is not a credible defence. Such arguments risk legitimising the Taliban’s gender apartheid and lending religious credibility to a grave injustice. چوں كفر از كعبه برخيزد، كجا مانَد مسلماني #RecogniseGenderApartheid #ACrimeAgainstHumanity #LetAfghanGirlsLearn https://t.co/oipYuIeUpI
— Ziauddin Yousafzai (@ZiauddinY) October 29, 2026
ಮಾಧ್ಯಮಗಳಲ್ಲಿ ಬರುವ ಎಲ್ಲ ಸುದ್ದಿಗಳೂ ಸತ್ಯವಾಗಿರುವುದಿಲ್ಲ. ನಾನು ತಾಲಿಬಾನ್ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇನೆ. ಸರಿಯಾದ ಶಿಕ್ಷಕರು ಸಿಗುವವರೆಗೆ ಶಿಕ್ಷಣವನ್ನು ಮುಂದೂಡಿದರೆ ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯವನ್ನು ತಾಲಿಬಾನ್ ಪ್ರತಿನಿಧಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸಿರುವುದಾಗಿ ಹೇಳಿದ್ದಾರೆ. “ನಾನು ಅವರೊಂದಿಗೆ ಖುದ್ದಾಗಿ ಮಾತನಾಡಿದ್ದೇನೆ. ಮಾಧ್ಯಮಗಳಲ್ಲಿ ಬರುವ ಎಲ್ಲವೂ ಸತ್ಯವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಾಲಿಬಾನ್ ಆಡಳಿತವು ಹೆಣ್ಣುಮಕ್ಕಳಿಗೆ ಆರನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಅವಕಾಶ ನೀಡಿದೆ. ಆದರೆ, ಸುರಕ್ಷಿತ ವಾತಾವರಣ ಇಲ್ಲದ ಕಾರಣ ಮುಂದಿನ ಹಂತದ ಶಿಕ್ಷಣವನ್ನು ತಡೆಹಿಡಿದಿದೆ ಎಂದು ಅವರು ಹೇಳಿದರು.
ಝಾಕಿರ್ ನಾಯಕ್ ಅವರ ಹೇಳಿಕೆಗಳಿಗೆ ಅಫ್ಘಾನಿಸ್ತಾನದ ಹಲವು ಗಣ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಲ್ಜಿಯಂನಲ್ಲಿ ನೆಲೆಸಿರುವ ಅಫ್ಘಾನಿಸ್ತಾನದ ಮಾಜಿ ಭದ್ರತಾ ಪಡೆ ಸಿಬ್ಬಂದಿ ಅಜೀಂ ಶಿನ್ವಾರಿ, ಮಹಿಳಾ ಶಿಕ್ಷಕರ ಕೊರತೆಯ ಬಗ್ಗೆ ನಾಯಕ್ ನೀಡಿರುವ ಸಮರ್ಥನೆಯನ್ನು ಪ್ರಶ್ನಿಸಿದ್ದಾರೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶವನ್ನೇ ನೀಡದಿದ್ದರೆ, ಅಫ್ಘಾನಿಸ್ತಾನಕ್ಕೆ ಅಗತ್ಯವಿರುವ ಅರ್ಹ ಮಹಿಳಾ ಶಿಕ್ಷಕರು ಹೇಗೆ ಸಿದ್ಧರಾಗುತ್ತಾರೆ?” ಎಂದು ಅವರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಇಸ್ಲಾಂಗೆ ಹಿಜಾಬ್ ಅನಿವಾರ್ಯವಲ್ಲ: ವಿದ್ಯಾರ್ಥಿನಿ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್
ಯಾರು ಈ ಝಾಕಿರ್ ನಾಯಕ್?
ಝಾಕಿರ್ ನಾಯಕ್ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಮುಖ್ಯಸ್ಥರಾಗಿದ್ದು, ಭಾರತದಲ್ಲಿ ಅವರ ಸಂಘಟನೆಯನ್ನು ನಿಷೇಧಿಸಲಾಗಿದೆ. ದ್ವೇಷದ ಭಾಷಣದ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿರುವ ಮತ್ತು ಉಗ್ರಗಾಮಿ ವಿಚಾರಗಳಿಗೆ ಪ್ರೇರೇಪಿಸುತ್ತಿರುವ ಆರೋಪ ಇವರ ಮೇಲಿದೆ. ಭಾರತದಿಂದ ಪಲಾಯನ ಮಾಡಿರುವ ಇವರು ಸದ್ಯ ಮಲೇಷ್ಯಾದಲ್ಲಿದ್ದುಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.