ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಸರಕಾರಿ ಹುದ್ದೆ ತುಂಬಿರಿ

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಪೂರೈಸಿದ ಬಗ್ಗೆ ಸಾಧನಾ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಇವರದೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪ್ರತೀ ವರ್ಷ ಒಂದು ಲಕ್ಷ ಸರ್ಕಾರೀ ಉದ್ಯೋಗ ನೀಡುವ ಭರವಸೆ ಸಂಪೂರ್ಣ ಸುಳ್ಳಾಗಿದೆ.

Readers Colony: ಸರಕಾರಿ ಹುದ್ದೆ ತುಂಬಿರಿ

-

Profile
Ashok Nayak May 18, 2026 2:29 PM

ಓದುಗರ ಓಣಿ

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಪೂರೈಸಿದ ಬಗ್ಗೆ ಸಾಧನಾ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಇವರದೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪ್ರತೀ ವರ್ಷ ಒಂದು ಲಕ್ಷ ಸರ್ಕಾರೀ ಉದ್ಯೋಗ ನೀಡುವ ಭರವಸೆ ಸಂಪೂರ್ಣ ಸುಳ್ಳಾಗಿದೆ.

ಹಾಗಾಗಿ ಸರ್ಕಾರದ ಈ ಸಾಧನಾ ಸಮಾವೇಶದ ಸಂಭ್ರಮ ಕಾರ್ಯಕ್ರಮದದರೂ ಖಾಲಿ ಬಿದ್ದಿರುವ 4 ಲಕ್ಷ ಸರ್ಕಾರೀ ಹುದ್ದೆ ತುಂಬುವ ಅಧಿಸೂಚನೆ ಪ್ರಕಟಿಸುವ ಮೂಲಕ ಜನಪ್ರಿಯ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಘೋಷಣೆ ಪಾಲಿಸಲಿ ಮತ್ತು ನುಡಿದಂತೆ ನಡೆಯಲಿ.

- ಎಸ್.ಎನ್ ರಮೇಶ್, ಮಂಡ್ಯ

ಸೊಳ್ಳೆ ಬತ್ತಿಗಳು ಹಾನಿಕಾರಕ

ಸೊಳ್ಳೆ ನಿವಾರಕ ಅಗರಬತ್ತಿಗಳಿಂದ ಎದುರಾಗುವ ಗಂಭೀರ ಆರೋಗ್ಯದ ಅಪಾಯಗಳ ಕುರಿತು ವರದಿಗಳಾಗಿವೆ. ಮಾರುಕಟ್ಟೆಯಲ್ಲಿರುವ ಶೇಕಡಾ 85ರಷ್ಟು ಉತ್ಪನ್ನಗಳು ಕೇಂದ್ರ ಕೀಟನಾಶಕಗಳ ನೋಂದಣಿ ಅನುಮೋದನೆ ಹೊಂದಿಲ್ಲದಿರುವುದು ಆತಂಕಕಾರಿ ಸಂಗತಿ.

ಇದನ್ನೂ ಓದಿ: Dr Raveesh N S Column: ಬದಲಾಗಬೇಕಾಗಿರುವುದು ನೀಟ್‌ ಅಲ್ಲ, ನಿಯತ್ತು

ಧೂಮಪಾನದಷ್ಟೇ ಮಾರಕವಾಗಿರುವ ಈ ಹೊಗೆಯಿಂದ ಶೇಕಡಾ 70ರಷ್ಟು ಉಸಿರಾಟದ ತೊಂದರೆಗಳನ್ನು ವೈದ್ಯರು ಗುರುತಿಸಿದ್ದಾರೆ. ಜನರು ಇವು ಸುರಕ್ಷಿತವೆಂದು ನಂಬಿರುವುದು ಜಾಗೃತಿಯ ಕೊರತೆಯನ್ನು ತೋರಿಸುತ್ತದೆ. ಸರ್ಕಾರವು ತಕ್ಷಣವೇ ಇಂತಹ ಕಾನೂನುಬಾಹಿರ ಮತ್ತು ಅಸುರಕ್ಷಿತ ಉತ್ಪನ್ನಗಳ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು. ಸಾರ್ವಜನಿಕರು ಆಯುರ್ವೇದ ಮೂಲಿಕೆಗಳು ಹಾಗೂ ಬೇವಿನ ಎಣ್ಣೆಯಂತಹ ನೈಸರ್ಗಿಕ ಪರ್ಯಾಯಗಳನ್ನು ಬಳಸಲು ಪ್ರೇರೇಪಿಸಬೇಕು.

- ಡಾ. ವಿಜಯಕುಮಾರ್ ಎಚ್.ಕೆ, ರಾಯಚೂರು

ರಾಜ್ಯ ಸರ್ಕಾರ ಬೆಲೆ ಇಳಿಸಲಿ

ಮಧ್ಯ ಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಮಿತವ್ಯಯದ ಕರೆಯ ಹಿನ್ನೆಲೆಯಲ್ಲಿ, ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಯನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 3 ರೂಪಾಯಿ ಏರಿಸಿದೆ.

ಬೆಲೆ ಏರಿಕೆಯ ಮೂಲವೇ ಪೆಟ್ರೋಲ್ ಡೀಸೆಲ್ ದರ ಏರಿಕೆ. ಪ್ರತಿಯೊಂದರ ಬೆಲೆಯೂ ಹೆಚ್ಚಾದಾಗ ಜನಸಾಮಾನ್ಯರು ಬದುಕುವುದಾದರೂ ಹೇಗೆ? ರಾಜ್ಯ ಸರ್ಕಾರವೇನೋ ಬೆಲೆ ಏರಿಕೆಯ ವಿರುದ್ಧ ಕಿಡಿ ಕಾರುತ್ತಿದೆ. ಆದರೆ ರಾಜ್ಯ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಹಿತಾಸಕ್ತಿ ಕಾಪಾ ಡಲೇಬೇಕು ಎಂದಾದರೆ ಕೇಂದ್ರವನ್ನು ದೂಷಿಸುವ ಬದಲು, ರಾಜ್ಯದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸುವ ಮೂಲಕ ಜನಸಾಮಾನ್ಯರ ಪಾಲಿಗೆ ನೆರವಾಗುವ ಮೂಲಕ ಬೆಲೆ ಏರಿಕೆಯನ್ನು ತಪ್ಪಿಸಬಹುದು. ಕೆಲ ತಿಂಗಳುಗಳ ಕಾಲ ಸರ್ಕಾರಕ್ಕೆ ಬರುವ ಆದಾಯದ ಮೂಲ ಕಡಿಮೆಯಾದರೂ ಸರಿಯೇ, ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಲಿ.

- ಮುರುಗೇಶ ಡಿ., ದಾವಣಗೆರೆ