ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಸದ್ಯಶೋಧನೆಯಲ್ಲಿ ಮಜಾ

ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಗ್ರಾಮೀಣ ಪ್ರದೇಶಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಮಕ್ಕಳ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಒಂದಕ್ಕಿಂತ ಹೆಚ್ಚು ತರಗತಿಗಳಿಗೆ ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಬೋಧನೆ ದೊರೆಯುತ್ತಿಲ್ಲ.

Readers Colony: ಸದ್ಯಶೋಧನೆಯಲ್ಲಿ ಮಜಾ

-

Profile
Ashok Nayak Jun 22, 2026 7:36 PM

ಓದುಗರ ಓಣಿ

ಜೂ.20ರ ‘ಸಂಪಾದಕರ ಸದ್ಯಶೋಧನೆ’ಯಿಂದ ಎರಡು ಪ್ರಮುಖ ವಿಷಯಗಳ ಬಗ್ಗೆ ತಿಳಿಯು ವಂತಾಯಿತು. 52 ವರ್ಷಗಳ ಹಿಂದೆ, ಮುರಾರ್ಜಿ ದೇಸಾಯಿ ಅವರು ಕೇಂದ್ರ ಹಣಕಾಸು ಸಚಿವ ರಾಗಿದ್ದರೂ, ಎಷ್ಟೊಂದು ಶಾಂತವಾಗಿರುತ್ತಿದ್ದರು ಎಂದರೆ ರಾತ್ರಿ 10 ಅಥವಾ 10.30ಕ್ಕೇ ಮಲಗು ವುದು. ವಿಮಾನದಲ್ಲೂ ಗಾಢ ನಿದ್ದೆ, ಹೊರ ಪ್ರಪಂಚದ ಗೋಜೇ ಇಲ್ಲದ ಮನಸ್ಥಿತಿ, ಎಷ್ಟೊಂದು ಗಂಭೀರ ಸ್ಥಿತಿ ಇದ್ದಾಗಲೂ, ಒಬ್ಬ ಕೇಂದ್ರ ಸಚಿವರನ್ನು ಎಬ್ಬಿಸಬೇಕೆನ್ನುವ ಅವಶ್ಯ ಕತೆಯೂ ಕಾಣದ ಅಲ್ಲಿ ಸಿಬ್ಬಂದಿಗಳ ಮಾನಸಿಕ ಸ್ಥಿತಿ, ಎಷ್ಟೇ ಅವಸರದಲ್ಲಿದ್ದರೂ ಮಂತ್ರಿ ವರ್ಯರು ಒಂದಿಷ್ಟೂ ಬೊಬ್ಬೆ ಇಡದೆ, ತನಗಾಗಿ ಪ್ರತ್ಯೇಕ ವ್ಯವಸ್ಥೆಗೆ ಕೇಳುವುದು, ಹನ್ನೆರಡು ತಾಸು ತಡವಾಗಿ ತಲುಪಬೇಕಾದ ಸ್ಥಳ ತಲುಪಿದ್ದು, ಇಷ್ಟೆಲ್ಲ ನಡೆದರೂ ಏನೂ ನಡೆದೇ ಇಲ್ಲ ಎಂಬ ಮುಂದಿನ ಅವರ ವ್ಯವಹಾರ!

ಇವೆಲ್ಲವನ್ನೂ ಇಂದಿನ ನಮ್ಮ ಆಳುಗರಿಗೆ ಹೋಲಿಸಿ ನೋಡಿದರೆ, ಇದೊಂದು ಕಥೆ ಅಂತಲೇ ಅನಿಸುತ್ತದೆ. ಅಂದು ತಾಂತ್ರಿಕತೆಯೂ ಅಷ್ಟೊಂದು ಬೆಳೆದಿರಲಿಲ್ಲ ಎಂಬುದೂ ಅರಿವಾದಂತಾ ಯಿತು. ಇನ್ನೂ ಸೋಜಿಗದ ವಿಷಯವೆಂದರೆ, ಮೊರಾರ್ಜಿ ದೇಸಾಯಿ ಅವರು ಅದೇ ಮೊದಲ ಬಾರಿ ಅಮೆರಿಕಾ ಪ್ರವಾಸ ಮಾಡಿದ್ದು !

- ಶಂಕರನಾರಾಯಣ ಭಟ, ಹೊನ್ನಾವರ

ಶಿಕ್ಷಕರ ನೇಮಕ ಮಾಡಿ

ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಗ್ರಾಮೀಣ ಪ್ರದೇಶಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಮಕ್ಕಳ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಒಂದಕ್ಕಿಂತ ಹೆಚ್ಚು ತರಗತಿಗಳಿಗೆ ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಬೋಧನೆ ದೊರೆಯುತ್ತಿಲ್ಲ.

ಇದನ್ನೂ ಓದಿ: Readers Colony: ಶಿಕ್ಷಣ ಸಿರಿವಂತರ ಸ್ವತ್ತಾ?

ಪ್ರಾಥಮಿಕ ಹಂತವೇ ಮಕ್ಕಳ ಶಿಕ್ಷಣದ ಅಡಿಪಾಯವಾಗಿರುವುದರಿಂದ ಈ ಹಂತದಲ್ಲಿ ಶಿಕ್ಷಕರ ಕೊರತೆ ನಿವಾರಣೆ ಅತ್ಯಗತ್ಯವಾಗಿದೆ. ಸದ್ಯ ಕರ್ನಾಟಕದಲ್ಲಿ 85000 ಗಿಂತ ಅಧಿಕ ಶಿಕ್ಷಕರ ಕೊರತೆ ಇದೆ. ಅದರಲ್ಲಿಯೂ 40000ಗಿಂತ ಅಧಿಕ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಇದೆ.

ಸರಕಾರ ಸದ್ಯದ 15000 ಶಿಕ್ಷಕರ ನೇಮಕಾತಿ ಮಾಡಲು ಹೊರಟಿದೆ. ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಶಾಲೆಗಳಿಗೆ ಆದ್ಯತೆ ನೀಡಿ, ೧ರಿಂದ ೫ನೇ ತರಗತಿಗೆ ಬೋಧಿಸುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಶೀಘ್ರವಾಗಿ ಕೈಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆ.

- ಮುತ್ತು ಕುಂಟೋಜಿ, ದೇವರಹಿಪ್ಪರಗಿ

ಹಸಿರು ಕಾಂತಿಯೋ, ಗಿಮಿಕ್ಕೋ?

ಜೂನ್ 14ರಂದು ಆರಂಭವಾದ ಎಥೆನಾಲ್ ಜಾಗೃತಿ ಕೇವಲ ಕಾರ್ಪೊರೇಟ್ ಪ್ರಚಾರದ ಗಿಮಿಕ್‌ ನಂತೆ ಕಾಣುತ್ತಿದೆ. ಪೆಟ್ರೋಲ್‌ಗೆ ಶೇ.20 ಮಿಶ್ರಣದ ಗುರಿ ಮತ್ತು ಲೀಟರ್‌ಗೆ 23.56 ಕಿ.ಮೀ ಮೈಲೇಜ್ ಆಕರ್ಷಕವಾಗಿದ್ದರೂ, ಬರೋಬ್ಬರಿ ರೂ.7,23,900 ಬೆಲೆಯ ಫ್ಲೆಕ್ಸ್ ಕಾರುಗಳನ್ನು ಕೊಳ್ಳುವ ಶಕ್ತಿ ಸಾಮಾನ್ಯ ಜನರಿಗಿದೆಯೇ? ರಾಜ್ಯದಲ್ಲಿ ಎಥೆನಾಲ್ ಇಂಧನ ಕೇಂದ್ರಗಳೇ ಇಲ್ಲದಿರುವಾಗ ಇಂತಹ ವಾಹನಗಳನ್ನು ಮಾರುಕಟ್ಟೆಗೆ ತರುವುದು ಅತ್ಯಂತ ಹಾಸ್ಯಾಸ್ಪದ. ರೈತರ ಆದಾಯ ಹೆಚ್ಚಿಸುವ ಹೆಸರಿನಲ್ಲಿ ಆಡಳಿತಶಾಹಿ ಬೂಟಾಟಿಕೆ ಮಾಡುವುದನ್ನು ನಿಲ್ಲಿಸಬೇಕು. ಪರ್ಯಾಯ ಇಂಧನ, ಮೌಲ್ಯ ವರ್ಧನೆ, ಸ್ವಾವಲಂಬನೆ, ತೆರಿಗೆ ವಿನಾಯಿತಿ, ಗ್ರಾಹಕ ಜಾಗೃತಿ, ಇಂಜಿನ್ ಕಾರ್ಯವೈಖರಿ ಹಾಗೂ ಪರಿಸರಸ್ನೇಹಿ ಉತ್ಪಾದನೆಯನ್ನು ಸರಕಾರ ತಕ್ಷಣವೇ ಬಲಪಡಿಸದಿದ್ದರೆ, ಈ ಯೋಜನೆ ಕೇವಲ ಹಗಲುಗನಸಾಗಿ ಉಳಿಯಲಿದೆ.

- ಡಾ.ವಿಜಯಕುಮಾರ್ ಎಚ್.ಕೆ., ರಾಯಚೂರು