Readers Colony: ಸರಕಾರ ಎಚ್ಚೆತ್ತುಕೊಳ್ಳಲಿ!
ಹಿಮಾಚಲ ಪ್ರದೇಶ ಸರಕಾರವು ನೌಕರರಿಗೆ ಪೂರ್ಣ ಸಂಬಳ ನೀಡಲಾರದೇ ಶೇ.30ರಷ್ಟು ಕಡಿತಗೊಳಿ ಸಿದೆ. ನಮ್ಮ ಕರ್ನಾಟಕ ಸರಕಾರ ಖಾಲಿ ಹುದ್ದೆಗಳ ನೇಮಕಾತಿ ಮಾಡಿದರೆ ನೀಡಬೇಕಾಗುವ ಸಂಬಳದ ಹಣ ಉಳಿಸಿ, ಅದನ್ನೇ ಗ್ಯಾರಂಟಿಗಳಿಗೆ ಬಳಸಲು ಕಳೆದ ಮೂರು ವರ್ಷಗಳಿಂದಲೂ ವಿವಿಧ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಸುಮಾರು 3.75 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದ ಈ ಸರಕಾರ ನಿರುದ್ಯೋಗಿ ಯುವಜನಾಂಗದ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ.
-
ಓದುಗರ ಓಣಿ
ಹಿಮಾಚಲ ಪ್ರದೇಶ ಸರಕಾರವು ನೌಕರರಿಗೆ ಪೂರ್ಣ ಸಂಬಳ ನೀಡಲಾರದೇ ಶೇ.30ರಷ್ಟು ಕಡಿತ ಗೊಳಿಸಿದೆ. ನಮ್ಮ ಕರ್ನಾಟಕ ಸರಕಾರ ಖಾಲಿ ಹುದ್ದೆಗಳ ನೇಮಕಾತಿ ಮಾಡಿದರೆ ನೀಡಬೇಕಾಗುವ ಸಂಬಳದ ಹಣ ಉಳಿಸಿ, ಅದನ್ನೇ ಗ್ಯಾರಂಟಿಗಳಿಗೆ ಬಳಸಲು ಕಳೆದ ಮೂರು ವರ್ಷಗಳಿಂದಲೂ ವಿವಿಧ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಸುಮಾರು 3.75 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದ ಈ ಸರಕಾರ ನಿರುದ್ಯೋಗಿ ಯುವಜನಾಂಗದ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ.
ಮೊನ್ನೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯ ಮೂರ್ತಿಗಳಿಂದ ನೇರಾನೇರ ಛೀಮಾರಿ ಹಾಕಿಸಿಕೊಂಡಿರುವ ಈ ಸರಕಾರ ಗ್ಯಾರಂಟಿಗಳೆಂಬ ಬಕಾಸುರನನ್ನು ನಿರ್ವಹಿಸಲು ಹೆಣಗಾಡುತ್ತಿದೆ.
ಸಂಪದ್ಭರಿತ ಕರ್ನಾಟಕವನ್ನು ಹತ್ತು ವರ್ಷ ಹಿಂದಕ್ಕೆ ತಳ್ಳಿರುವುದೇ ಈ ಸುಭದ್ರ ಕಾಂಗ್ರೆಸ್ ಸರಕಾರದ ಮಹಾನ್ ಸಾಧನೆ. ಉದ್ಯೋಗ ವಂಚಿತ ಯುವ ಸಮೂಹ ಸಿಡಿದೇಳುವ ಮುನ್ನ ಈ ನಿಷ್ಕ್ರಿಯ ನಿಷ್ಪ್ರಯೋಜಕ ಸರಕಾರ ಎಚ್ಚೆತ್ತುಕೊಳ್ಳಲಿ.
- ಎಸ್.ಎನ್.ರಮೇಶ್, ಸಾತನೂರು, ಮಂಡ್ಯ.
ಇದನ್ನೂ ಓದಿ: Readers Colony: ವಿದ್ಯುತ್ ದರ ಏರಿಕೆ ಶಾಕ್
ಶಂಕರಾಚಾರ್ಯರ ಜೀವನ, ಸಾಧನೆ ಅನುಕರಣೀಯ
ಗ.ನಾ.ಭಟ್ಟರ ಶಂಕರ ಜಯಂತಿ ಬಗೆಗಿನ ಲೇಖನ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಶಂಕರ ಭಗವತ್ಪಾದರ ಸಂಪೂರ್ಣ ಜೀವನಚಿತ್ರಣ ಹಾಗು ಸಾಧನೆ ಲೇಖನದಲ್ಲಿ ಮೂಡಿಬಂದಿದೆ. ಶಂಕರರ ಜನನ ಕಾಲದಲ್ಲಿ ಸನಾತನ ಧರ್ಮದ ಅಸ್ತಿತ್ವಕ್ಕೆ ಅಪಾಯ ಉಂಟಾಗುವ ಸ್ಥಿತಿಯಲ್ಲಿತ್ತು. ಇತರೆ ಧರ್ಮಗಳ ಹಾವಳಿ ಸಹ ಸಾಕಷ್ಟು ಇತ್ತು. ವೈದಿಕ ಪರಂಪರೆ ಕೊನೆಗಾಣಿಸಲು ಈಗಿನಂತೆ ಆಗಲೂ ನಾಸ್ತಿಕವಾದಿಗಳು ವಿಜೃಂಭಿಸುತ್ತಿದ್ದರು. ವಾಸ್ತವವಾಗಿ ಗಮನಿಸಿದಾಗ ಹಿಂದೂ ಧರ್ಮವನ್ನು ಕಲುಷಿತಗೊಳಿಸಲು ಆದಿಯಿಂದಲೂ ಒಳಸಂಚು ನಡೆಯುತ್ತಲೇ ಇದೆ. ಅಷ್ಟಾದರೂ ಎಲ್ಲ ಸಹಿಸಿ ಕೊಂಡು ಹಿಂದೂ ಧರ್ಮ ಬೆಳೆಯುತ್ತಲೇ ಇದೆ. ಈ ಬೆಳವಣಿಗೆಗೆ ಮೂಲ ಕಾರಣಕರ್ತರು ಶ್ರೀ ಶಂಕರರು.
ಅಂದಿನ ದಿನ ಮಾನಸದಲ್ಲಿನ ಎಲ್ಲ ಓರೆ ಕೋರೆಗಳನ್ನೂ ತಿದ್ದಿ ಹಿಂದೂ, ಜೈನ, ಬೌದ್ಧ ಧರ್ಮ ಗಳನ್ನೂ ಒಗ್ಗೂಡಿಸಿದ್ದು ಭಗವಾನ್ ಶಂಕರಾಚಾರ್ಯರ ಅಮೋಘ ಸಾಧನೆ. ಈ ನಿಟ್ಟಿನಲ್ಲಿ ಬುದ್ಧ ನನ್ನು ‘ದಶಾವತಾರ’ದ ಭಾಗವೆಂದು ಅಂದೇ ಶಂಕರಾಚಾರ್ಯರು ಘೋಷಿಸಿ ಹಿಂದೂ ಧರ್ಮದ ವಿಭಜನೆಯನ್ನು ತಪ್ಪಿಸಿದ್ದರು. ಅದ್ವೈತ ಪಂಥ ಪ್ರತಿಪಾದಕರಾದ ಶಂಕರ ಭಗವಾತ್ಪಾದರ ಜೀವನ ಸಾಧನೆ ಇಂದಿಗೂ, ಮುಂದೆಯೂ ಸಹ ಅನುಕರಣೀಯ. ಅಹಂ-ಬ್ರಹ್ಮಸ್ಮಿ.
- ರಾ. ರಾಮಾರಾಧ್ಯ, ಮೈಸೂರು.