Ajay Gogavale: 'ಪೀಟರ್'ಗಾಗಿ ಸ್ಯಾಂಡಲ್ವುಡ್ಗೆ ಬಂದ ಬಾಲಿವುಡ್ ಗಾಯಕ ಅಜಯ್ ಗೋಗವಾಲೆ; ಸೋನು ನಿಗಮ್ಗೆ ಸ್ಥಾನ ತುಂಬ್ತಾರಾ?
Peter Kannada Movie: 'ಪೀಟರ್' ಸಿನಿಮಾ ತನ್ನ ಕಂಟೆಂಟ್ ಮೂಲಕ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಹಾಡುಗಳ ಬಗ್ಗೆಯೂ ಕುತೂಹಲ ಮೂಡುತ್ತಿದೆ. ಇತ್ತೀಚೆಗಷ್ಟೇ ಮಲಯಾಳಂ ಗಾಯಕ ಪ್ರಣವಂ ಸಸಿಯಿಂದ ಹಾಡು ಹಾಡಿಸಿದ್ದ ಚಿತ್ರತಂಡವೀಗ ಮತ್ತೊಂದು ಹಾಡಿಗೆ ಬಾಲಿವುಡ್ ಗಾಯಕ ಅಜಯ್ ಗೋಗವಾಲೆ ಅವರನ್ನು ಕರೆಸಿದೆ.



'ಪೀಟರ್' ಚಿತ್ರಕ್ಕಾಗಿ ಬಾಲಿವುಡ್ ಖ್ಯಾತ ಗಾಯಕ ಹಾಗೂ ನಿರ್ದೇಶಕ ಅಜಯ್ ಗೋಗವಾಲೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಿಂದಿಯ ಪ್ರಭಾಸ್ ನಟನೆಯ ʼಆದಿ ಪುರುಷ್ʼ, ಅಮೀರ್ ಖಾನ್ ನಟನೆಯ ʼಪಿಕೆʼ, ಶಾರುಖ್ ಖಾನ್ ನಟನೆಯ ʼಝೀರೋʼ ಮುಂತಾದ ದಿಗ್ಗಜರ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿ ಹಾಡಿರುವ ಅಜಯ್ ಗೋಗವಲೆ ಈಗ ಕನ್ನಡದ ʼಪೀಟರ್ʼ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ.

ಮಡಿಕೇರಿಯ ಸುತ್ತಲ ವಾತಾವರಣದಲ್ಲಿ ನಡೆಯುವ ಸಸ್ಪೆನ್ಸ್ ಡ್ರಾಮಾ ʼಪೀಟರ್ʼ. ಚಿತ್ರಕ್ಕೆ ಸುಕೇಶ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಸನವಿದೆ. ʼಪೀಟರ್ʼ ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ತಾರಾಬಳಗದಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೋಸ್ ಬ್ಯಾನರ್ನಡಿ ʼಪೀಟರ್ʼ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ಚಿತ್ರದಲ್ಲಿ 4 ಹಾಡುಗಳಿವೆ. ಇತ್ತೀಚೆಗೆ ʼಆವೇಶಂʼ ಚಿತ್ರದ ಹಿಟ್ ಹಾಡು 'ಅರ್ಮಧಂ' ಹಾಡಿರುವ ಮಲಯಾಳಂನ ಜನಪ್ರಿಯ ಗಾಯಕ ಪ್ರಣವಂ ಸಸಿಯನ್ನು ಕರೆತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದರು. ಇದೀಗ ಇನ್ನೊಬ್ಬ ಜನಪ್ರಿಯ ಗಾಯಕ ಧ್ವನಿಯಾಗಿದ್ದಾರೆ.

ಪ್ರಣವಂ ಸಸಿ ʼಪುಷ್ಪ 2ʼ ಚಿತ್ರದ ಮಲಯಾಳಂ ಆವೃತ್ತಿಯ 'ಪೀಲಿಂಗ್ಸ್' ಹಾಡಿಗೆ ಧ್ವನಿ ನೀಡಿ ಗಮನ ಸೆಳೆದಿದ್ದಾರೆ. ʼಪೀಟರ್ʼ ಸಿನಿಮಾ ಮೂಲಕ ಕನ್ನಡದಲ್ಲಿ ಚೊಚ್ಚಲ ಬಾರಿಗೆ ಹಾಡಿದ್ದರು. ಇದೀಗ ಅಜಯ್ ಸರದಿ.