Celebrity Fashion 2025: ಮಾನ್ಸೂನ್ ಲುಕ್ಗೆ ಸೈ ಎಂದ ಮಾಡೆಲ್ ಕಮ್ ನಟ ವಿನಯ್ ಸಿಂಧ್ಯಾ
Celebrity Fashion 2025: ಮಾಡೆಲ್ ಹಾಗೂ ನಟನಾಗಿರುವ ವಿನಯ್ ಸಿಂಧ್ಯಾ ಸದ್ಯ ಮಾನ್ಸೂನ್ ಲುಕ್ಗೆ ಸೈ ಎಂದಿದ್ದಾರೆ. ತಮ್ಮದೇ ಆದ ಒಂದಿಷ್ಟು ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ಗಳನ್ನು ಹೊಂದಿದ್ದಾರೆ. ಅಲ್ಲದೇ ಯುವಕರಿಗೂ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ವಿನಯ್ ಸಿಂಧ್ಯಾ, ಮಾಡೆಲ್, ನಟ


ಸೀಸನ್ಗೆ ತಕ್ಕಂತೆ ಮಾನ್ಸೂನ್ ಫ್ಯಾಷನ್ಗೆ ಸೈ ಎಂದಿದ್ದಾರೆ ನಟ, ಮಾಡೆಲ್ ವಿನಯ್ ಸಿಂಧ್ಯಾ. ಹೌದು, ದಶಕಗಳಿಂದಲೂ ಮಾಡೆಲಿಂಗ್ನಲ್ಲಿ ಸಕ್ರಿಯರಾಗಿರುವ ಮಾಡೆಲ್ ವಿನಯ್ ಸಿಂಧ್ಯಾ ಹಿರಿತೆರೆ, ಕಿರುತೆರೆ ನಟ ಕೂಡ. ಫ್ಯಾಷನ್ ಕ್ಷೇತ್ರದಲ್ಲಿ ಕನ್ನಡದ ಮಾಡೆಲ್ಗಳು ಅಪರೂಪ ಎನ್ನುವ ಸಮಯದಿಂದಲೂ ಈ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ವಿನಯ್ ಸಿಂಧ್ಯಾ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ.

ವಿನಯ್ ಸಿಂಧ್ಯಾ ಫ್ಯಾಷನ್ ಅಭಿರುಚಿ
ಆಗಾಗ್ಗೆ ನನ್ನ ಫ್ಯಾಷನ್ ಸ್ಟೇಟ್ಮೆಂಟ್ಗಳು ಬದಲಾಗುತ್ತವೆ. ಇನ್ನು ನನ್ನ ಫ್ಯಾಷನ್ ಟ್ರೆಂಡಿಯಾಗಿದ್ದರೂ ಸಿಂಪಲ್ ಆಗಿ ಕಾಣಿಸುತ್ತವೆ. ನಾನು ಪಕ್ಕಾ ಬ್ರ್ಯಾಂಡ್ ಫ್ರೀಕ್! ನನಗೆ ಕಾಟನ್ ಶರ್ಟ್ಗಳೆಂದರೇ ಇಷ್ಟ, ಎಲ್ಲಾ ಬಗೆಯ ಕಂಫರ್ಟಬಲ್ ಟ್ರೆಂಡಿ ಉಡುಪುಗಳು ನನ್ನ ವಾರ್ಡ್ರೋಬ್ನಲ್ಲಿವೆ. ಮಳೆಗಾಲದಲ್ಲಿ ಎಲ್ಲಾ ಬಗೆಯ ಉಡುಪಿನ ಜತೆಗೆ ಜಾಕೆಟ್ಸ್ ಮ್ಯಾಚ್ ಮಾಡುತ್ತೇನೆ ಎನ್ನುತ್ತಾರೆ ವಿನಯ್.

ವಿನಯ್ ಸ್ಟೈಲ್ ಮಂತ್ರ
ಇನ್ನು, ಯಾವುದೇ ಫ್ಯಾಷನೆಬಲ್ ಹಾಗೂ ಬ್ರ್ಯಾಂಡೆಡ್ ಉಡುಪು ಧರಿಸಿದರೂ ಅದನ್ನು ಸಖತ್ತಾಗಿ ಕ್ಯಾರಿ ಮಾಡುತ್ತೇನೆ. ಅಟಿಟ್ಯೂಡ್ ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಾಮ, ನೋಡಲು ಅಟ್ರಾಕ್ಟಿವ್ ಆಗಿ ಕಾಣಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಮಾನ್ಸೂನ್ಗೆ ವಿನಯ್ ಸಿಂಧ್ಯಾ ಸಲಹೆ
ಫಿಟ್ ಹಾಗೂ ಫೈನ್ ಆಗಿ ಕಾಣಿಸಲು ಪುರುಷರು ಮಾಡೆಲ್ ಆಗಬೇಕೆಂದಿಲ್ಲ! ಒಂದಿಷ್ಟು ಸಿಂಪಲ್ ಟಿಪ್ಸ್ ಪಾಲಿಸಿದರೇ ಸಾಕು. ಪುರುಷರು ಫಿಟ್ನೆಸ್ಗೆ ಮ್ಯಾಚ್ ಆಗುವ ಉಡುಪು, ಅದರಲ್ಲೂ ಸೀಸನ್ಗೆ ತಕ್ಕಂತೆ ಔಟ್ಫಿಟ್, ಹೊರಗೆ ಹೋಗುವಾಗ ಸನ್ಗ್ಲಾಸ್ ಧರಿಸಿದರೆ ಸಾಕು ಆಕರ್ಷಕವಾಗಿ ಕಾಣಿಸುತ್ತಾರೆ ಎನ್ನುವ ವಿನಯ್ ಸಿಂಧ್ಯಾ ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ.

ಯುವಕರಿಗೆ ವಿನಯ್ ಸಿಂಧ್ಯಾ ಸಿಂಪಲ್ ಟಿಪ್ಸ್
- ಪ್ರತಿದಿನ ಕನಿಷ್ಠ 4 ಲೀಟರ್ ನೀರು ಕುಡಿಯಲೇ ಬೇಕು.
- ಹೊರಗೆ ಹೋಗುವಾಗ ಚರ್ಮಕ್ಕೆ ಸನ್ಸ್ಕ್ರೀನ್ ಬಳಸಬೇಕು.
- ಎರಡು ತಿಂಗಳಿಗೊಮ್ಮೆ ಸಲೂನ್ನಲ್ಲಿ ಜೆಂಟ್ಸ್ ಫೇಶಿಯಲ್ ಮಾಡಿಸಿ.
- ಪರ್ಸನಾಲಿಟಿಗೆ ತಕ್ಕಂತೆ ಡ್ರೆಸ್ಕೋಡ್ ಆಯ್ಕೆ ಮಾಡಬೇಕು.