Christmas Fashion 2025: ಕ್ರಿಸ್ಮಸ್ ಸಂಭ್ರಮ; ಫೆಸ್ಟೀವ್ ಲುಕ್ನಲ್ಲಿ ಮಿಂಚಿದ ಸೆಲೆಬ್ರೆಟಿಗಳು
Christmas Fashion: ಕ್ರಿಸ್ಮಸ್ ಹಿನ್ನೆಲೆಯಲ್ಲಿ ತಾರೆಯರು ಮಾತ್ರವಲ್ಲ, ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ಹಾಗೂ ನಾನಾ ಕ್ಷೇತ್ರದ ಗಣ್ಯರು ತಮ್ಮದೇ ಆದ ಕ್ರಿಸ್ಮಸ್ ಸೆಲೆಬ್ರೇಷನ್ ಫ್ಯಾಷನ್ವೇರ್ಗಳಲ್ಲಿ, ಫಾರ್ಮಲ್ ಡ್ರೆಸ್ಕೋಡ್ಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು. ಈ ಕುರಿತಂತೆ ಇಲ್ಲಿದೆ ವರದಿ.
ಚಿತ್ರಗಳು: ಸೆಲೆಬ್ರೆಟಿಗಳ ಕ್ರಿಸ್ಮಸ್ ಸಂಭ್ರಮ -
ನಾನಾ ಕ್ಷೇತ್ರದ ಸೆಲೆಬ್ರೆಟಿಗಳು ವೈವಿಧ್ಯಮಯ ಕ್ರಿಸ್ಮಸ್ ಫೆಸ್ಟೀವ್ ಲುಕ್ನಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು.
ಫೆಸ್ಟೀವ್ವೇರ್ನಲ್ಲಿ ಎಲ್ಲೆಡೆ ಕ್ರಿಸ್ಮಸ್ ಆಚರಣೆ
ಹೌದು, ಜಾಗತೀಕ ಮಟ್ಟದಲ್ಲಿ ನಡೆಯುವ ಕ್ರಿಸ್ಮಸ್ ಫೆಸ್ಟೀವ್ ಸೀಸನ್ನಲ್ಲಿ, ತಾರೆಯರು ಮಾತ್ರವಲ್ಲ, ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ಹಾಗೂ ನಾನಾ ಕ್ಷೇತ್ರದ ಗಣ್ಯರು ತಮ್ಮದೇ ಆದ ಕ್ರಿಸ್ಮಸ್ ಸೆಲೆಬ್ರೇಷನ್ ಫ್ಯಾಷನ್ವೇರ್ಗಳಲ್ಲಿ, ಫಾರ್ಮಲ್ ಡ್ರೆಸ್ಕೋಡ್ಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು.
ತಾರೆಯರ ಕ್ರಿಸ್ಮಸ್ ಫ್ಯಾಷನ್
ಅಂದಹಾಗೆ, ಈ ಫೆಸ್ಟೀವ್ ಸೀಸನ್ ಸಂಭ್ರಮದಲ್ಲಿ ಬಾಲಿವುಡ್ ಮಾತ್ರವಲ್ಲ, ಎಲ್ಲಾ ಭಾಷೆಯ ಬಹುತೇಕ ಸಿನಿಮಾ ಕ್ಷೇತ್ರದವರು ಕೂಡ ಡಿಸೈನರ್ವೇರ್ ಹಾಗೂ ಕ್ರಿಸ್ಮಸ್ಗೆ ಮ್ಯಾಚ್ ಆಗುವಂತಹ ವೆಸ್ಟರ್ನ್ ಫಾರ್ಮಲ್ಗಳಲ್ಲಿ ಕಾಣಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಕ್ರಿಸ್ಮಸ್ ಸೆಲೆಬ್ರೇಟ್ ಮಾಡಿದರು. ನಟರು ಸಾಮಾನ್ಯವಾಗಿ ವಿಶ್ ಮಾಡಿದರೇ, ನಟಿಯರು ಮಾತ್ರ, ರೆಡ್ ಹಾಗೂ ವೈಟ್ ಉಡುಪಿನ ಕಾಂಬಿನೇಷನ್ ಕಲರ್ಗಳ ಡ್ರೆಸ್ಕೋಡ್ ಧರಿಸಿ ಕಾಣಿಸಿಕೊಂಡರು. ಅವರಲ್ಲಿ, ನಟಿ ಡಯಾನಾ ಪೆಂಟಿ, ತಮನ್ನಾ, ಶಮಾ ಸಿಕಂದರ್, ಬಿಪಾಶ ಬಸು, ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೇ, ಲಕ್ಷ್ಮಿ ರೈ, ಕುಬ್ರಾ ಸೇಟ್, ಅಹಾನ್ ಕುಮ್ರಾ, ವೈಘಾ, ಮೇಘನಾ ಗಾಂವ್ಕರ್, ಜೆನಿಲಿಯಾ, ರಾಧಿಕಾ ಪಂಡಿತ್, ಸೋನಲ್ ಮೊಂಥೆರೋ ಸೇರಿದ್ದರು.
ಫ್ಯಾಷನ್ ಸೆಲೆಬ್ರೆಟಿಗಳ ಡ್ರೆಸ್ಕೋಡ್
ಫ್ಯಾಷನ್ ಸೆಲೆಬ್ರೆಟಿಗಳಾದ ಪ್ರತಿಭಾ ಸೌಂಶಿಮಠ್, ಸ್ಥಿಗ್ಧ, ವೈಷ್ಣವಿ, ಹೊಳ್ಳ ಸೇರಿದಂತೆ ಹಲವರು ಈ ರೆಡ್ ಹಾಗೂ ವೈಟ್ ಕಾಂಬಿನೇಷನ್ನ ನಾನಾ ಬಗೆಯ ಔಟ್ಫಿಟ್ಗಳಲ್ಲಿ ಕಾಣಿಸಿಕೊಂಡು ಸೆಲೆಬ್ರೇಟ್ ಮಾಡಿದರು.
ಫ್ಯಾಷನ್ ಪ್ರಿಯರ ಕ್ರಿಸ್ಮಸ್ ಲವ್
ಇನ್ನು, ಸಾಮಾನ್ಯ ಫ್ಯಾಷನ್ ಪ್ರಿಯರು ಕೂಡ ಇದರಿಂದ ಹೊರತಾಗಿಲ್ಲ! ಉದ್ಯಾನನಗರಿಯ ಮಾಲ್ಗಳಲ್ಲಿ ಹಾಗೂ ಚರ್ಚ್ಗಳಲ್ಲಿ ಅಲಂಕರಿಸಲಾಗಿರುವ ಕ್ರಿಸ್ಮಸ್ ಟ್ರೀ ಹಾಗೂ ಕ್ರಿಬ್ ಮುಂದೆ ತಮ್ಮದೇ ಆದ ಫ್ಯಾಷನ್ವೇರ್ಗಳಲ್ಲಿ ಕಾಣಿಸಿಕೊಂಡು, ಕ್ರಿಸ್ಮಸ್ನ ಕಳೆ ಹೆಚ್ಚಿಸಿದರು.