Winter Fashion 2025: ಚಳಿಗಾಲದಲ್ಲಿ ಮರಳಿ ಟ್ರೆಂಡಿಯಾಗುವ ಸ್ವೆಟರ್ ಡ್ರೆಸ್
Sweater Dresses: ಚಳಿಗಾಲಕ್ಕೆ ಸ್ವೆಟರ್ ಡ್ರೆಸ್ಗಳು ಬಿಡುಗಡೆಗೊಂಡಿದ್ದು, ಮತ್ತೇ ಟ್ರೆಂಡಿಯಾಗಿವೆ. ದೇಹವನ್ನು ಬೆಚ್ಚಗಿಡುವ ಇವು ಇದೀಗ ಈ ಸೀಸನ್ನಲ್ಲಿ ಮಾಡರ್ನ್ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಟರ್ಟಲ್ನೆಕ್, ಸ್ವಿಂಗ್ನೆಕ್ಲೈನ್, ತ್ರೀ ಫೋರ್ತ್, ಬಲೂನ್ ಸ್ಲೀವ್, ಕೋಲ್ಡ್ ಶೋಲ್ಡರ್ ಸ್ವೆಟರ್ ಡ್ರೆಸ್ಗಳು ಎಷ್ಟು ಟ್ರೆಂಡಿಯಾಗಿದ್ದಾವೆಂದರೇ, ಇಂದು ಎಲ್ಲಾ ವಯಸ್ಸಿನ ಮಹಿಳೆಯರು ಧರಿಸತೊಡಗಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಸ್ವೆಟರ್ ಡ್ರೆಸ್ (ಚಿತ್ರಕೃಪೆ: ಪಿಕ್ಸೆಲ್) -
ಸ್ವೆಟರ್ ಡ್ರೆಸ್ಗಳು ಮರಳಿವೆ. ಹೊಸ ಬಣ್ಣಗಳಲ್ಲಿ ಹಾಗೂ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ. ಸಂಜೆಯ ಚಳಿಗಾಳಿಗೆ ಔಟಿಂಗ್ಗೆ ಸಾಥ್ ನೀಡುತ್ತಿವೆ.
ವಿಂಟರ್ ಸೀಸನ್ನ ಸ್ವೆಟರ್ ಡ್ರೆಸ್
ಪ್ರತಿ ಚಳಿಗಾಲ ಬಂತೆಂದರೇ ಬಗೆಬಗೆಯ ಸ್ವೆಟರ್ ಡ್ರೆಸ್ಗಳು ಬಿಡುಗಡೆಗೊಳ್ಳುತ್ತವೆ. ಈ ಸೀಸನ್ನಲ್ಲಿ ಹಾಟ್ಕೇಕ್ಗಳಂತೆ ಬಿಕರಿಯಾಗುತ್ತವೆ. ನೋಡಲು ಡ್ರೆಸ್ಗಳಂತೆ ಕಾಣುವ ಇವು ಮೈಯನ್ನು ಬೆಚ್ಚಗಿಡುತ್ತವೆ. ಜತೆಗೆ ಕಂಫರ್ಟಬಲ್ ಫೀಲ್ ನೀಡುತ್ತವೆ. ವುಲ್ಲನ್ ಸ್ವೆಟರ್ ಡ್ರೆಸ್ಗಳು ಹೆಚ್ಚು ಬೆಚ್ಚಗಿಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಟ್ರೆಂಡಿಯಾಗಿರುವ ವೈವಿಧ್ಯಮಯ ಸ್ವೆಟರ್ ಡ್ರೆಸ್ಗಳು
ಟರ್ಟಲ್ನೆಕ್, ಸ್ವಿಂಗ್ನೆಕ್ಲೈನ್, ತ್ರೀ ಫೋರ್ತ್, ಬಲೂನ್ ಸ್ಲೀವ್, ಕೋಲ್ಡ್ ಶೋಲ್ಡರ್ ಸ್ವೆಟರ್ ಡ್ರೆಸ್ಗಳು ಎಷ್ಟು ಟ್ರೆಂಡಿಯಾಗಿದ್ದಾವೆಂದರೇ, ಇಂದು ಎಲ್ಲಾ ವಯಸ್ಸಿನ ಮಹಿಳೆಯರು ಧರಿಸತೊಡಗಿದ್ದಾರೆ. ಸ್ವೆಟರ್ ಡ್ರೆಸ್ಗಳು ಈ ಹಿಂದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಇದೀಗ ನಮ್ಮಲ್ಲೂ ವೆಸ್ಟರ್ನ್ ಡ್ರೆಸ್ ಧರಿಸುವ ಮಾನಿನಿಯರು ಇಷ್ಟಪಡತೊಡಗಿದ್ದಾರೆ. ಹಾಗಾಗಿ ಇಲ್ಲಿನ ಲೋಕಲ್ ಬ್ರಾಂಡ್ಗಳು ಇಂತಹ ವಿನ್ಯಾಸವನ್ನು ಸಿದ್ಧಪಡಿಸತೊಡಗಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.
ಸ್ವೆಟರ್ ಡ್ರೆಸ್ ಸ್ಪೆಷಾಲಿಟಿ
ಕೆಲವು ಸ್ವೆಟರ್ ಡ್ರೆಸ್ಗಳು ನೋಡಲು ಥೇಟ್ ಸಾಮಾನ್ಯ ಔಟ್ಫಿಟ್ನಂತೆಯೇ ಕಾಣುತ್ತವೆ. ಇವುಗಳನ್ನು ಬೇಕಾದಲ್ಲಿ ಪ್ಯಾಂಟ್ ಜತೆಗೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಹೀಗಿರಲಿ ಸ್ವೆಟರ್ ಡ್ರೆಸ್ ನಿರ್ವಹಣೆ
ಸ್ವೆಟರ್ ಡ್ರೆಸ್ನ ವಿನ್ಯಾಸ ಯಾವುದೇ ಇರಲಿ, ಅವುಗಳ ನಿರ್ವಹಣೆ ಬಗ್ಗೆ ಗಮನ ನೀಡುವುದು ಅಗತ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಹೆಚ್ಚು ಒಗೆಯಕೂಡದು. ಆದಷ್ಟೂ ಸಾಫ್ಟ್ ಆಗಿ ವಾಶ್ ಮಾಡಬೇಕು. ಇಲ್ಲವಾದಲ್ಲಿಇವು ಬೇಗ ಮಾಸಬಹುದು ಅಥವಾ ಹಳತರಂತೆ ಕಾಣಬಹುದು. ಡ್ರೈ ವಾಶ್ ಬೆಸ್ಟ್ ಅಪ್ಷನ್ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ಗಳು.
ಸ್ವೆಟರ್ ಡ್ರೆಸ್ ಪ್ರಿಯರಿಗಾಗಿ ಟಿಪ್ಸ್
- ಧರಿಸುವ ಮುನ್ನ ಇನ್ನರ್ ಸ್ಲಿವ್ಲೆಸ್ ಟಾಪ್ ಧರಿಸುವುದು ಉತ್ತಮ.
- ತೀರಾ ಚಳಿಯಿರುವ ಸ್ಥಳದಲ್ಲಿ ಧರಿಸಬಹುದು.
- ರಾತ್ರಿ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಡ್ರೆಸ್ಕೋಡ್.
- ಟಿನೇಜ್ ಹುಡುಗಿಯರು ಫ್ರಾಕ್ನಂತವನ್ನು ಧರಿಸಬಹುದು.
- ಬೇಕಿದ್ದಲ್ಲಿ ಕೇಪ್ರೀಸ್ ಹಾಗೂ ಪ್ಯಾಂಟ್ ಮಿಕ್ಸ್ ಮ್ಯಾಚ್ ಕೂಡ ಮಾಡಬಹುದು.