Photos: ಹೃಷಿಕೇಶದಲ್ಲಿ ಸಪ್ತಪದಿ ತುಳಿದ ʻಮನದ ಕಡಲುʼ ಸಿನಿಮಾ ನಟ ಸುಮುಖ; ಏಳು ವರ್ಷದ ಪ್ರೀತಿಗೆ ಮದುವೆ ಮುದ್ರೆ
ಯೋಗರಾಜ್ ಭಟ್ ನಿರ್ದೇಶನದ ʻಮನದ ಕಡಲುʼ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದ ಸುಮುಖ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಯಾವುದೇ ಅಬ್ಬರವಿಲ್ಲದೆ, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ರಿಷಿಕೇಶದ ಶಾಂತಿಯುತ ಪರಿಸರದಲ್ಲಿ ವಿವಾಹದಲ್ಲಿ ಬಹುಕಾಲದ ಗೆಳತಿ ಮೈತ್ರಿ ಉಕಾ ಜೊತೆಗೆ ಸುಮುಖ ಸಪ್ತಪದಿ ತುಳಿದಿದ್ದು, ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿವೆ. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಯಾನ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸುಮುಖ, ʻಮನದ ಕಡಲುʼ ಚಿತ್ರದಿಂದ ಹೆಚ್ಚು ಜನಪ್ರಿಯರಾಗಿದ್ದರು. ಸುಮುಖ ಮತ್ತು ಮೈತ್ರಿ ಮದುವೆಯ ಸುಂದರ ಫೋಟೋಗಳು ಇಲ್ಲಿವೆ.
-
Avinash GR
Apr 5, 2026 12:24 PM
1/5
ಸುಮುಖ ಮತ್ತು ಮೈತ್ರಿ ಏಳು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಕುಟುಂಬದವರ ಒಪ್ಪಿಗೆ ಮೇರೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.
2/5
ಮೈತ್ರಿ ಉಕಾ ಅವರು ಮೂಲತಃ ಮುಂಬೈನವರು. ವೃತ್ತಿಯಲ್ಲಿ ಅವರು ಆರ್ಕಿಟೆಕ್ಟ್ ಆಗಿದ್ದಾರೆ. ಮುಂಬೈನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.
3/5
ರಂಗಭೂಮಿ ಹಿನ್ನೆಲೆಯಿಂದ ಬಂದ ಸುಮುಖ, ಸದ್ಯ ವಿಭಿನ್ನ ಪಾತ್ರಗಳ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ.
4/5
ʻಯಾನʼ ಚಿತ್ರದ ನಂತರ 'ಫಿಸಿಕ್ಸ್ ಟೀಚರ್' ಚಿತ್ರದಲ್ಲಿನ ನಟನೆಗಾಗಿ ಭಾರಿ ಮೆಚ್ಚುಗೆ ಗಳಿಸಿದ್ದರು ಸುಮುಖ
5/5
'ಫಿಸಿಕ್ಸ್ ಟೀಚರ್' ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ ಸುಮುಖ