Photos: ಮಕ್ಕಳ ಜೊತೆಗೆ ದಕ್ಷಿಣ ಕೊರಿಯಾದ ಸಿಯೋಲ್ ಪ್ರವಾಸ ಮಾಡಿದ ನಟಿ ಮಾಧವಿ; ಈ ಟ್ರಿಪ್ ಬಗ್ಗೆ ಹೇಳಿದ್ದೇನು?
70-80 ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದವರು ನಟಿ ಮಾಧವಿ. ಅದರಲ್ಲೂ ಕನ್ನಡ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್ ಮುಂತಾದವರೊಂದಿಗೆ ಅನೇಕ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿದ್ದವರು ಮಾಧವಿ. ಸದ್ಯ ಮಾಧವಿ ಚಿತ್ರರಂಗದಿಂದ ದೂರವಾಗಿದ್ದಾರೆ. ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮದುವೆಯಾದ ಮೇಲೆ ಅಮೆರಿಕದಲ್ಲಿ ಸೆಟ್ಲ್ ಆಗಿರುವ ಅವರು, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಈಚೆಗೆ ತಮ್ಮ ಮೂವರು ಹೆಣ್ಣು ಮಕ್ಕಳನ್ನು ಕರೆದಕೊಂಡು ದಕ್ಷಿಣ ಕೊರಿಯಾದ ಸಿಯೋಲ್‌ಗೆ ಪ್ರವಾಸ ಹೋಗಿದ್ದರು. "ನನ್ನ ಹೆಣ್ಣುಮಕ್ಕಳೊಂದಿಗೆ ದಕ್ಷಿಣ ಕೊರಿಯಾದ ಸಿಯೋಲ್ ನಗರಕ್ಕೆ ಹೋದ ಸ್ಮರಣೀಯ ಪ್ರವಾಸ. ಅಲ್ಲಿನ ಶ್ರೀಮಂತ ಪರಂಪರೆ, ಪ್ರಾಚೀನ ಸಂಸ್ಕೃತಿ ಮತ್ತು ರುಚಿಕರವಾದ ಪಾಕಪದ್ಧತಿಯನ್ನು ಅನುಭವಿಸಿದೆವು" ಎಂದು ಅವರು ಬರೆದುಕೊಂಡಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.
-
Avinash GR
Apr 5, 2026 4:34 PM
1/5
ನಟಿ ಮಾಧವಿ ಅವರಿಗೆ ಈಗ 63 ವರ್ಷ. ಈ ವಯಸ್ಸಿನಲ್ಲಿ ತಮ್ಮ ಮಕ್ಕಳೊಂದಿಗೆ ಟ್ರಿಪ್ ಮಾಡಿ ಖುಷಿಪಟ್ಟಿದ್ದಾರೆ.
2/5
1996ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ ಜೊತೆಗೆ ಮಾಧವಿ ಮದುವೆ ಆಗಿತ್ತು. ಆನಂತರ ವಿದೇಶದಲ್ಲೇ ವಾಸ ಮಾಡುತ್ತಿರುವ ಮಾಧವಿ.
3/5
ಮಾಧವಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಫಾನಿ ಗೌರಿಕಾ, ಪ್ರಿಸಿಲ್ಲಾ ಅರ್ಪಣಾ, ಎವೆಲಿನ್ ದಿವ್ಯಾ ಎಂಬುದು ಆ ಹೆಣ್ಣು ಮಕ್ಕಳ ಹೆಸರು.
4/5
ಮಕ್ಕಳ ಜೊತೆಗೆ ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗುವುದೆಂದರೆ, ನಟಿ ಮಾಧವಿ ಅವರಿಗೆ ತುಂಬಾ ಅಚ್ಚುಮೆಚ್ಚು.
5/5
ಸುಮಾರು 20 ವರ್ಷ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಆಕಸ್ಮಿಕ, ಒಡಹುಟ್ಟಿದವರು, ಅನುರಾಗ ಅರಳಿತು, ಭಾಗ್ಯದ ಲಕ್ಷ್ಮೀ ಬಾರಮ್ಮ, ಖೈದಿ, ಹಾಲು ಜೇನು ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.