Sonu Gowda and Neha gowda: ಅಣ್ಣನ ಮದುವೆ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ರೆಡಿಯಾದ ಸೋನು - ನೇಹಾ ಗೌಡ
ಕನ್ನಡ ಚಿತ್ರರಂಗದ ಜನಪ್ರಿಯ ಮೇಕಪ್ ಕಲಾವಿದ ರಾಮಕೃಷ್ಣ ಅವರ ಮಕ್ಕಳು ಸೋನು ಗೌಡ ಹಾಗೂ ನೇಹಾ ಗೌಡ ಸಿನಿಮಾ ಹಾಗೂ ಸೀರಿಯಲ್ ಮೂಲಕ ಸಾಕಷ್ಟು ಹೆಸರು ಗಳಿಸಿದ್ದಾರೆ. ಸೋನು ಗೌಡ ಹಾಗೂ ನೇಹಾ ಗೌಡ ಇಬ್ಬರೂ ಕೂಡ ಸಿನಿಮಾ ಸೀರಿಯಲ್ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ.. ಇದೀಗ ರಾಮಕೃಷ್ಣ ಕುಟುಂಬಸ್ಥರು ಮದುವೆ ಸಂಭ್ರಮದಲ್ಲಿದ್ದು ಇವರ ಫ್ಯಾಮಿಲಿ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಸೋನು - ನೇಹಾ ಗೌಡ


ಸೋನು ಗೌಡ ಮತ್ತು ನೇಹಾ ಗೌಡ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಯರು ಆಗಿದ್ದಾರೆ. ಸೋನು ಗೌಡ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದರೆ, ನೇಹಾ ಗೌಡ ಕಿರುತೆರೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಸದ್ಯ ಅಣ್ಣನ ಮದುವೆ ಸಂಭ್ರಮದಲ್ಲಿದ್ದು ಇವರ ಬ್ಯೂಟಿ ಲುಕ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಮ್ಮ ಅಣ್ಣನ ಮದುವೆ ಸಂಭ್ರಮ ಎಂದು ನಟಿ ಸೋನು ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ‘’ನಮ್ಮ ಅಣ್ಣನ ಮದುವೆ...ಈ ಒಂದು ಸುಂದರ ಕ್ಷಣಕ್ಕಾಗಿ ಇಡೀ ಕುಟುಂಬಸ್ಥರು ಕಾತರದಿಂದ ಕಾಯುತ್ತಿದ್ದರು. ಕಡೆಗೂ ಈ ದಿನ ಸಂಭ್ರಮ ದಿಂದ ಕಳೆದಿದ್ದೇವೆ ಎಂದು ಸೋನು ಗೌಡ ಖುಷಿ ಹಂಚಿಕೊಂಡಿದ್ದಾರೆ.

ಅಣ್ಣನ ಮದುವೆಗೆಂದು ಸೋನು ಗೌಡ ಬಹಳ ಗ್ರ್ಯಾಂಡ್ ಆಗಿ ರೆಡಿಯಾಗಿದ್ದಾರೆ. ಕ್ರೀಮ್ ಆ್ಯಂಡ್ ಲೈಟ್ ಪಿಂಕ್ ಶೇಡ್ ನ ರೇಷ್ಮೆ ಸೀರೆಯುಟ್ಟು ಥೇಟ್ ಮಹಾರಾಣಿಯಂತೆ ಸೋನು ಗೌಡ ಮಿಂಚಿ ದ್ದಾರೆ. ಇವರ ಫೋಟೋಗಳಿಗೆ ಫ್ಯಾನ್ಸ್ ಬಹಳಷ್ಟು ಲೈಕ್ಸ್ ಕಾಮೆಂಟ್ ನೀಡಿದ್ದಾರೆ.

ಮದುವೆಯಲ್ಲಿ ನೇಹಾ ಗೌಡ ಕೂಡ ಪುತ್ರಿ ಶಾರದಾ ಜೊತೆ ಫೋಟೋ ಗೆ ಪೋಸ್ ನೀಡಿದ್ದಾರೆ. ಇವರು ಕೂಡ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು, ಅದಕ್ಕೆ ಮ್ಯಾಚಿಂಗ್ ಆಭರಣ ತೊಟ್ಟು ಬಹಳ ಸುಂದರವಾಗಿ ಕಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಹೆಸರು ಮಾಡಿದ ನೇಹಾ ಗೌಡ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಸೋನು ಗೌಡ ಅವರು 2008ರಲ್ಲಿ ಬಂದ ‘ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿ ಕಾಣಿಸಿಕೊಂಡರು. ಶ್ರೀನಗರ ಕಿಟ್ಟಿ ನಟನೆಯ ಈ ಚಿತ್ರಕ್ಕೆ ದುನಿಯಾ ಸೂರಿ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರ ಹಿಟ್ ಆಗಿದ್ದು ಮೊದಲ ಚಿತ್ರದಲ್ಲೇ ಸೋನು ಗೌಡ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸದ್ಯ ಇವರಿಬ್ಬರು ಅಣ್ಣನ ಮದುವೆ ಸಂಭ್ರಮದಲ್ಲಿ ಬ್ಯುಸಿ ಯಾಗಿದ್ದು ಇವರ ಕ್ಯೂಟ್ ಲುಕ್ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.