Star Fashion 2025: ಬಂಗಾರದ ಬೊಂಬೆಯಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಅನುಷಾ ರೈ
Actress Anusha Rai: ಸ್ಯಾಂಡಲ್ವುಡ್ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಅನುಷಾ ರೈ ಥೇಟ್ ಬಂಗಾರದ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಹೇಗಿದೆ? ಈ ಬಗ್ಗೆ ಅನುಷಾ ಹೇಳುವುದೇನು? ಇಲ್ಲಿದೆ ವಿವರ.
 
                                ಚಿತ್ರಗಳು: ಅನುಷಾ ರೈ, ನಟಿ -
 ಶೀಲಾ ಸಿ ಶೆಟ್ಟಿ
                            
                                Oct 31, 2025 8:00 AM
                                
                                ಶೀಲಾ ಸಿ ಶೆಟ್ಟಿ
                            
                                Oct 31, 2025 8:00 AM
                             
                    ಗೋಲ್ಡನ್ ವರ್ಣದ ಲೆಹೆಂಗಾದಲ್ಲಿ ಮಿಂಚು
ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಅನುಷಾ ರೈ ಥೇಟ್ ಬಂಗಾರದ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಹೌದು, ಗ್ಲಾಮರಸ್ ನಟಿ ಹಾಗೂ ಬಿಗ್ಬಾಸ್ನ ಮಾಜಿ ಸ್ಪರ್ಧಿ ಅನುಷಾ ರೈ ದೇಸಿ ಲುಕ್ ನೀಡುವ ಗೋಲ್ಡನ್ ವರ್ಣದ ಲೆಹೆಂಗಾದಲ್ಲಿ ನೋಡಲು ಥೇಟ್ ಬಂಗಾರದ ಗೊಂಬೆಯಂತೆ ಕಂಗೊಳಿಸಿದ್ದಾರೆ. ಕಂಪ್ಲೀಟ್ ಗೋಲ್ಡನ್ ಲುಕ್ಗೆ ಸೈ ಎಂದಿದ್ದಾರೆ.
 
                    ಅನುಷಾ ರೈ ಫ್ಯಾಷನ್ ಲುಕ್
ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ, ಅನುಷಾ ರೈ ಎಂಜಿನಿಯರಿಂಗ್ ಪದವೀಧರೆ. ಮೊದಲಿನಿಂದಲೂ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಬಿಗ್ ಬಾಸ್ನಲ್ಲಿ ಪಾಲ್ಗೊಂಡ ನಂತರ ಜನಪ್ರಿಯರಾದರು. ಸದ್ಯ ಅವರ 4 ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. 3 ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಸದಾ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುವ ಅನುಷಾ ಅವರ ಸ್ಟೈಲಿಂಗ್ ಹಾಗೂ ಫ್ಯಾಷನ್ ಲವ್ಗೆ ಈಗಾಗಲೇ ಫ್ಯಾಷನಿಸ್ಟಾಗಳ ಪ್ರಶಂಸೆ ಕೂಡ ಸಿಕ್ಕಿದೆ.
 
                    ಅನುಷಾ ರೈ ಗೋಲ್ಡನ್ ಲುಕ್
ಸಿನಿಮಾ ಮೂಲದವರ ಮದುವೆ ಸಮಾರಂಭವೊಂದರಲ್ಲಿ, ಗೋಲ್ಡನ್ ಲುಕ್ನಲ್ಲಿ ಕಾಣಿಸಿಕೊಂಡ ಅನುಷಾ ರೈ, ಥೇಟ್ ಗೊಂಬೆಯಂತೆ ಕಾಣಿಸಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳ ಹಾಗೂ ಫಾಲೋವರ್ಸ್ಗಳ ಮೆಚ್ಚುಗೆಯ ಸುರಿಮಳೆಯೇ ದೊರಕಿದೆ.
 
                    ಗೋಲ್ಡನ್ ಲುಕ್ ಬಗ್ಗೆ ಅನುಷಾ ಟಾಕ್
ಈ ಲುಕ್ ನನ್ನ ಸ್ವಂತ ಐಡಿಯಾ ಆಗಿದ್ದು, ಗೋಲ್ಡನ್ ಲುಕ್ನಲ್ಲೆ 2 ಬಗೆಯ ಲುಕ್ ಸೃಷ್ಟಿಸಿದ್ದೇನೆ. ಈ ಡಿಸೈನರ್ವೇರ್ ಸೆಲೆಬ್ರೆಟಿ ಡಿಸೈನರ್ ಚಂದನ್ಗೌಡ ಅವರ ಕ್ರಿಯೇಷನ್ದ್ದಾಗಿದೆ. ಆಪ್ತರ ಮದುವೆ ಅಟೆಂಡ್ ಮಾಡುವಾಗ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದೆ ಎಂದು ವಿಶ್ವವಾಣಿ ನ್ಯೂಸ್ನೊಂದಿಗೆ ಅನುಷಾ ಮಾಹಿತಿ ಹಂಚಿಕೊಂಡಿದ್ದಾರೆ.
 
                    ಬರಗೂರು ರಾಮಚಂದ್ರಪ್ಪ ಚಿತ್ರದಲ್ಲಿ ಅವಕಾಶ
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ನಟಿ ಅನುಷಾ ರೈ, ಅಲ್ಲಿಂದ ಹೊರಬಂದ ಮೇಲೆ ಬಣ್ಣದ ಲೋಕದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ‘ಮಹಾಕವಿ’ ಎಂಬ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಹತ್ತನೇ ಶತಮಾನದ ಆದಿಕವಿ ಪಂಪನ ಪತ್ನಿ ಪಾತ್ರದಲ್ಲಿ ಅನುಷಾ ರೈ ನಟಿಸುತ್ತಿದ್ದಾರೆ
 
            