IND vs AFG ಟೆಸ್ಟ್ ಪಂದ್ಯವನ್ನು ಆಯೋಜಿಸಿದ ಐಸಿಸಿ ವಿರುದ್ಧ ಮದನ್ ಲಾಲ್ ಕಿಡಿ!
ಇತ್ತೀಚೆಗೆ ಮುಕ್ತಾಯವಾಗಿದ್ದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಏಕೈಕ ಟೆಸ್ಟ್ ಪಂದ್ಯವನ್ನು ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿರುದ್ಧ ಭಾರತದ ಮಾಜಿ ಆಲ್‌ರೌಂಡರ್ ಮದನ್ ಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಇನಿಂಗ್ಸ್ ಹಾಗೂ 300 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು.
ಅಫ್ಘಾನಿಸ್ಥಾನ ತಂಡಕ್ಕೆ ಟೆಸ್ಟ್ ಪಂದ್ಯವನ್ನು ನೀಡಿದ್ದಕ್ಕೆ ಮದನ್ ಲಾಲ್ ಕಿಡಿ. -
ನವದೆಹಲಿ: ಭಾರತದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ (IND vs AFG) ಇನಿಂಗ್ಸ್ ಹಾಗೂ 300 ರನ್‌ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್ ಸ್ಥಾನವನ್ನು ನೀಡಿದ ಐಸಿಸಿ ವಿರುದ್ಧ ಭಾರತ ತಂಡದ ಮಾಜಿ ಆಲ್‌ರೌಂಡರ್ ಮದನ್ ಲಾಲ್ (Madan Lal) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯ ನವ ಚಂಡೀಗಢದ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯ ಕೇವಲ ಮೂರನೇ ದಿನದಲ್ಲಿಯೇ ಅಂತ್ಯವಾಯಿತು.ಆಫ್ಘನ್ ತಂಡದ ಬ್ಯಾಟ್ಸ್‌ಮನ್‌ಗಳು ಎರಡೂ ಇನಿಂಗ್ಸ್‌ಗಳಲ್ಲಿ ಭಾರತೀಯ ಬೌಲರ್‌ಗಳ ಎದುರು ಮಕಾಡೆ ಮಲಗಿದ್ದರು.
ಅಫ್ಘಾನಿಸ್ತಾನ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮವಾಗಿಲ್ಲ ಹಾಗೂ ಇವರು 50 ಓವರ್‌ಗಳ ಪಂದ್ಯವನ್ನು ಸ್ಥಿರವಾಗಿ ಆಡಲಿ ಎಂದು ಮದನ್ ಲಾಲ್ ಸಲಹೆ ನೀಡಿದ್ದಾರೆ. ಆಫ್ಘನ್ ತಂಡ ಈಗಾಗಲೇ ಟಿ20ಐ ಸ್ವರೂಪದಲ್ಲಿ ಅತ್ಯುತ್ತಮವಾಗಿದೆ. ಅದೇ ರೀತಿ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಬಳಿಕ, ಅದರ ಆಧಾರದ ಮೇಲೆ ಟೆಸ್ಟ್ ಕ್ರಿಕೆಟ್ ನೀಡಬೇಕೆಂದು ಸಲಹೆ ನೀಡಿದ್ದಾರೆ.
IND vs AFG: ಒಡಿಐ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!
"ಅಫ್ಘಾನಿಸ್ಥಾನ ತಂಡಕ್ಕೆ ಟೆಸ್ಟ್ ಆಡಲು ಅನುಮತಿ ಏಕೆ ನೀಡಲಾಗಿದೆ? ಆಫ್ಘನ್ ತಂಡಕ್ಕೆ ಟೆಸ್ಟ್ ಸ್ಥಾನಮಾನವನ್ನು ನೀಡಿರುವುದರ ಹಿಂದಿನ ಉದ್ದೇಶ ಏನೆಂದು ನನಗೆ ತಿಳಿದಿಲ್ಲ. ಟಿ20 ಹಾಗೂ ಒಡಿಐ ದಾಖಲೆಗಳ ಆಧಾರದ ಮೇಲೆ ಅಂಗಸಂಸ್ಥೆ ರಾಷ್ಟ್ರಗಳಿಗೆ ಟೆಸ್ಟ್ ಸ್ಥಾನಮಾನ ಏಕೆ ನೀಡಲಾಗುತ್ತದೆ ಎಂದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ಆಫ್ಘನ್ ತಂಡ ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಉತ್ತಮವಾಗಿದ್ದು, 50 ಓವರ್‌ಗಳ ಸ್ವರೂಪದಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕಾಗಿದೆ. ಟೆಸ್ಟ್ ಆಡುವುದು ಎಂದರೆ ಹಾರಾಟ ನಡೆಸುವುದು. ಮೊದಲನೇಯದಾಗಿ ಅವರು 50 ಓವರ್‌ಗಳ ಪಂದ್ಯವನ್ನು ಹೇಗೆ ಆಡಬೇಕು ಹಾಗೂ ಹೇಗೆ ಮುಗಿಸಬೇಕೆಂದು ಕಲಿಯಬೇಕಾದ ಅಗತ್ಯವಿದೆ," ಎಂದು ನ್ಯೂಸ್18ಗೆ ಮದನ್ ಲಾಲ್ ತಿಳಿಸಿದ್ದಾರೆ.
"ನೋಡಿ, ಅವರು ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 152 ರನ್ ಹಾಗೂ 102 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಹಿಂದೆ ಎಂಟು ವರ್ಷಗಳ ಹಿಂದಿನ ಪಂದ್ಯದಲ್ಲಿಯೂ ಅವರು109 ರನ್ ಹಾಗೂ 102 ರನ್‌ಗಳಿಗೆ ಆಲ್‌ಔಟ್ ಆಗಿದ್ದರು. ಇದು ಟೆಸ್ಟ್ ಕ್ರಿಕೆಟ್‌ಗೆ ಉತ್ತಮ ಜಾಹೀರಾತಾ? 5 ದಿನಗಳ ಟೆಸ್ಟ್ ಕ್ರಿಕೆಟ್‌ಗೆ ಸಾಕಷ್ಟು ಮೂಲ ಸೌಕರ್ಯ ಹಾಗೂ ಸೌಲಭ್ಯಗಳ ಅಗತ್ಯವಿದೆ. ಅಫ್ಘಾನಿಸ್ತಾನದಲ್ಲಿ ಈ ವಿಷಯದಲ್ಲಿ ಶೂನ್ಯ. ಹಾಗಾದರೆ ಅವರು ಏನು ಮಾಡಬೇಕು? ಆಫ್ಘನ್ ಆಟಗಾರರು ಕಳಪೆ ಆಟಗಾರರಲ್ಲ. ಆದರೆ ಅವರು 5 ದಿನಗಳ ಪಂದ್ಯವನ್ನು ಅವರ ದೇಶದಲ್ಲಿಆಡುತ್ತಿಲ್ಲ ," ಎಂದು ಅವರು ಸೇರಿಸಿದ್ದಾರೆ.
ICC Test Rankings: ಅಗ್ರ ಸ್ಥಾನವನ್ನು ಕಳೆದುಕೊಂಡ ಜೋ ರೂಟ್, ಶುಭಮನ್ ಗಿಲ್ ಏರಿಕೆ!
ಹಷ್ಮತ್‌ವುಲ್ಲಾ ಶಾಹಿದಿ ಅವರ ನಾಯಕತ್ವದ ಅಫ್ಘಾನಿಸ್ತಾನ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದು, ಇದೀಗ ಭಾರತದ ಎದುರು ಕಮ್‌ಬ್ಯಾಕ್ ಮಾಡಲು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವಕಾಶವಿದೆ. ಧರ್ಮಶಾಲಾ, ಲಖನೌ ಹಾಗೂ ಚೆನ್ನೈನಲ್ಲಿ ಕ್ರಮವಾಗಿ ಜೂನ್ 13, 17 ಮತ್ತು 20 ರಂದು ಮೂರು ಒಡಿಐ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾ ಈ ಸರಣಿಯಲ್ಲಿ ಆಡಲಿದ್ದಾರೆ. ಅವರು ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ.