Star Fashion Review 2026: ಡಂಗ್ರೀಸ್ನಲ್ಲಿ ವಿಂಟರ್ ಫ್ಯಾಷನ್ಗೆ ಸೈ ಎಂದ ಸಿಂಧೂ ಲೋಕನಾಥ್
Winter Fashion: ಸ್ಯಾಂಡಲ್ವುಡ್ ನಟಿ ಸಿಂಧೂ ಲೋಕನಾಥ್ ಡೆನಿಮ್ ಡಂಗ್ರೀಸ್ನಲ್ಲಿ ವಿಂಟರ್ ಸೀಸನ್ನ ಲೇಯರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಔಟ್ಫಿಟ್ ಹೇಗಿದೆ? ಈ ಕುರಿತಂತೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಸಿಂಧೂ ಲೋಕನಾಥ್, ನಟಿ (ಚಿತ್ರಕೃಪೆ: ತನ್ವಿಕ್ ಫೋಟೋಗ್ರಫಿ) -
ನಟಿ ಸಿಂಧೂ ಲೋಕನಾಥ್ ಡಂಗ್ರೀಸ್ ಮೇಲೆ ಜಾಕೆಟ್ ಧರಿಸುವ ಮೂಲಕ ವಿಂಟರ್ ಫ್ಯಾಷನ್ಗೆ ಸೈ ಎಂದಿದ್ದಾರೆ.
ಹೌದು, ಸ್ಯಾಂಡಲ್ವುಡ್ ನಟಿ ಸಿಂಧೂ ಲೋಕನಾಥ್, ಜಂಪ್ಸೂಟ್ ಲುಕ್ ನೀಡುವ ಡೆನಿಮ್ ಡಂಗ್ರೀಸ್ನಲ್ಲಿ ಕಾಣಿಸಿಕೊಂಡಿದ್ದು, ಅದರ ಮೇಲೊಂದು ಹೂಡಿ ಶೈಲಿಯ ಜಾಕೆಟ್ ಧರಿಸಿ, ಕಂಪ್ಲೀಟ್ ವಿಂಟರ್ ಸೀಸನ್ನ ಲೇಯರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಂಪಲ್ ಸಿಂಧೂ ಲೋಕನಾಥ್
ಸದಾ ಸಿಂಪಲ್ ಆಗಿಯೇ ಎಲ್ಲಾ ಕಡೆ ಕಾಣಿಸಿಕೊಳ್ಳುವ ಸಿಂಧೂ ಲೋಕನಾಥ್, ಒಂದಿಷ್ಟು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದರು. ಈ ಮಧ್ಯೆ ಬ್ರೇಕ್ ತೆಗೆದುಕೊಂಡು ಮರೆಯಾಗಿದ್ದರು. ಇತ್ತೀಚೆಗೆ ಕ್ರಿಕೆಟ್ ಲೀಗ್ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಲೈಮ್ಲೈಟ್ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ಮಧ್ಯೆ ಫ್ಯಾಷನ್ ಶೂಟ್ಗಳಲ್ಲಿ ಪಾಲ್ಗೊಂಡು ತಮ್ಮನ್ನು ಬ್ಯುಸಿಯಾಗಿರಿಸಿಕೊಂಡಿದ್ದಾರೆ.
ಡಂಗ್ರೀಸ್ ಮೇಲೆ ಲೇಯರ್ ಲುಕ್
ಅಂದಹಾಗೆ, ವಿಂಟರ್ನಲ್ಲಿ ಇತರೇ ಉಡುಗೆಗಳ ಮೇಲೆ ಜಾಕೆಟ್ ಧರಿಸುವುದು ಸಾಮಾನ್ಯ. ಆದರೆ, ಡಂಗ್ರೀಸ್ ಮೇಲೆ ಜಾಕೆಟ್ ಧರಿಸುವುದು ತೀರಾ ಅಪರೂಪ. ಹೀಗೂ ಲೇಯರ್ ಲುಕ್ ಮಾಡಬಹುದು ಎಂಬುದನ್ನು ಸಿಂಧೂ ಲೋಕನಾಥ್ ತೋರಿಸಿಕೊಟ್ಟಿದ್ದು. ಈ ಲುಕ್ ಬಯಸುವವರಿಗೆ ಒಂದಿಷ್ಟು ಸ್ಟೈಲಿಂಗ್ ಐಡಿಯಾ ನೀಡಿದಂತಾಗಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಕಾಲೇಜು ಹುಡುಗಿಯಂತೆ ಕಂಡ ಸಿಂಧೂ ಲೋಕನಾಥ್
ಇನ್ನು, ಕ್ಯಾಶುವಲ್ ಲುಕ್ನಲ್ಲಿ ಅದರಲ್ಲೂ ಜಂಪ್ ಸೂಟ್ ಅಥವಾ ಡಂಗ್ರೀಸ್ ಮೇಲೆ ಲೇಯರ್ ಲುಕ್ ಮಾಡುವ ಐಡಿಯಾ ನೀಡಿರುವ ಸಿಂಧೂ ಲೋಕನಾಥ್, ಈ ಉಡುಗೆಯಲ್ಲಿ ಕಾಲೇಜು ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರು.