ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನರೇಗಾವನ್ನು ಜಿ ರಾಮ್ ಜಿ ಎಂದು ಬದಲಾಯಿಸಿದ ಬಳಿಕ ಕರ್ಮಶ್ರೀಗೆ ಮಹಾತ್ಮಶ್ರೀ ಎಂದು ಹೆಸರಿಟ್ಟ ಪಶ್ಚಿಮ ಬಂಗಾಳ ಸರ್ಕಾರ

ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಾಯಿಸಿದ ಬಳಿಕ ಪಶ್ಚಿಮ ಬಂಗಾಳ ಸರ್ಕಾರವು ಕರ್ಮಶ್ರೀ ಯೋಜನೆಯ ಹೆಸರನ್ನು ಮಹಾತ್ಮಶ್ರೀ ಎಂದು ಬದಲಾಯಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತವು ಶನಿವಾರ ಅಧಿಕೃತವಾಗಿ ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ರಾಜ್ಯದ 100 ದಿನಗಳ ಉದ್ಯೋಗ ಯೋಜನೆಯ ಹೆಸರನ್ನು ಮಹಾತ್ಮಶ್ರೀ ಎಂದು ಮರುನಾಮಕರಣ ಮಾಡಿದೆ.

ಕರ್ಮಶ್ರೀಯನ್ನು ಮಹಾತ್ಮಶ್ರೀ ಎಂದು ಬದಲಿಸಿದ ಮಮತಾ ಬ್ಯಾನರ್ಜಿ ಸರ್ಕಾರ

(ಸಂಗ್ರಹ ಚಿತ್ರ) -

ಕೋಲ್ಕತ್ತಾ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ವನ್ನು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ (VB-G RAM G) ಎಂದು ಬದಲಾಯಿಸಿದರೆ ಇದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳ (west bengal) ಸರ್ಕಾರವು ಕರ್ಮಶ್ರೀ (Karmashree) ಯೋಜನೆಯ ಹೆಸರನ್ನು ಮಹಾತ್ಮಶ್ರೀ (Mahatmashree) ಎಂದು ಬದಲಾಯಿಸಿದೆ. ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಆಡಳಿತವು ಶನಿವಾರ ಅಧಿಕೃತವಾಗಿ ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ರಾಜ್ಯದ 100 ದಿನಗಳ ಉದ್ಯೋಗ ಯೋಜನೆಯ ಹೆಸರನ್ನು ಮಹಾತ್ಮಶ್ರೀ ಎಂದು ಮರುನಾಮಕರಣ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು, ಕರ್ಮಶ್ರೀ ಯೋಜನೆಗೆ ಮರುನಾಮಕರಣ ಮಾಡಿರುವುದರ ಹಿಂದೆ ಮಹಾತ್ಮ ಗಾಂಧಿಯವರ ಪರಂಪರೆಯನ್ನು ಕಾಪಾಡುವ ಉದ್ದೇಶವಿದೆ. ನಮ್ಮ ರಾಜ್ಯದ ಕಾರ್ಯಕ್ರಮವು ಸಾರ್ವಜನಿಕ ಕಲ್ಯಾಣದ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Indian Railway: ರೈಲ್ವೆ ಪ್ರಯಾಣಿಕರಿಗೆ ಬಿಗ್‌ ಶಾಕ್‌; ಟಿಕೆಟ್‌ ದರದಲ್ಲಿ ಎಷ್ಟು ಹೆಚ್ಚಾಗಿದೆ ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್‌

ಕೇಂದ್ರ ಸರ್ಕಾರವು ಡಿಸೆಂಬರ್ 18ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ (VB-G RAM G) ಎಂದು ಬದಲಾಯಿಸಿರುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟೀಕಿಸಿದ್ದು, ತಮ್ಮ ಸರ್ಕಾರವು ರಾಜ್ಯದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಮಹಾತ್ಮ ಗಾಂಧಿಯವರ ಹೆಸರಿನೊಂದಿಗೆ ಮರುನಾಮಕರಣ ಮಾಡುವುದಾಗಿ ತಿಳಿಸಿದರು.

ಕೋಲ್ಕತ್ತಾದಲ್ಲಿ ನಡೆದ ವ್ಯವಹಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ಮಶ್ರೀ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ಆದರೆ ಗಾಂಧೀಜಿ ಅವರ ಹೆಸರನ್ನು ಸೇರಿಸಿರಲಿಲ್ಲ. ಈ ಬಗ್ಗೆ ವಿಷಾದವಿದೆ. ನನಗೆ ನಾಚಿಕೆಯಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಕಾರ್ಯಕ್ರಮ ಹೆಸರು ಬದಲಾಯಿಸಬಾರದಿತ್ತು. ಹೊಸ ಮಸೂದೆಯಲ್ಲಿ ಗಾಂಧೀಜಿ ಅವರ ಹೆಸರು ಇರುವುದಿಲ್ಲ. ಹೀಗಾಗಿ ರಾಜ್ಯದ ಕರ್ಮಶ್ರೀ ಯೋಜನೆಯ ಹೆಸರನ್ನು ಮಹಾತ್ಮಜಿ ಅವರ ಯೋಜನೆ ಎಂದು ಬದಲಾಯಿಸಲಾಗುವುದು. ಕೇಂದ್ರವು ಮಹಾತ್ಮ ಜಿ ಅವರಿಗೆ ಗೌರವ ನೀಡದಿದ್ದರೆ ನಾವು ಮಾಡುತ್ತೇವೆ ಎಂದು ತಿಳಿಸಿದರು.

Pariksha Pe Charcha: ಬ್ರಹ್ಮಪುತ್ರ ವಿಹಾರ ನೌಕೆಯಲ್ಲಿ ಪರೀಕ್ಷೆ ಪೆ ಚರ್ಚೆ; ವಿದ್ಯಾರ್ಥಿಗಳೊಂದಿದೆ ಮೋದಿ ಚರ್ಚೆ

ಚಳಿಗಾಲದ ಅಧಿವೇಶನ ಮುಕ್ತಾಯದ ದಿನ ಸಂಸತ್ತಿನ ಎರಡೂ ಸದನಗಳು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ ಮಸೂದೆಯನ್ನು ಅಂಗೀಕರಿಸಿದವು. ಇದರ ವಿರುದ್ಧ ವಿರೋಧ ಪಕ್ಷದ ತೀವ್ರ ಪ್ರತಿಭಟನೆಯನ್ನೂ ನಡೆಸಿದವು. ಈ ನಡುವೆ ಆಮ್ ಆದ್ಮಿ ಪಕ್ಷವು ಜನವರಿ ಎರಡನೇ ವಾರದಲ್ಲಿ ಈ ವಿಷಯದ ಕುರಿತು ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವುದಾಗಿ ಶುಕ್ರವಾರ ತಿಳಿಸಿದೆ.