ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಐಎಡಿಎಂಕೆಗೆ ಸವಾಲು; ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಜಯಲಲಿತಾ ಆಪ್ತೆ ಶಶಿಕಲಾ: ತಮಿಳುನಾಡು ರಾಜಕೀಯದಲ್ಲಿ ಸಂಚಲನ

ತಮಿಳುನಾಡು ವಿಧಾನ ಸಭಾ ಚುನಾವಣೆಗೂ ಮುನ್ನ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿಕೆ ಶಶಿಕಲಾ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ. ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿರುವ ಅವರು ಈ ಮೂಲಕ ಎಐಎಡಿಎಂಕೆ ನೇರ ಸವಾಲೊಡ್ಡಿದ್ದಾರೆ. ಶೀಘ್ರದಲ್ಲೇ ಪಕ್ಷದ ಧ್ವಜವನ್ನು ಪರಿಚಯಿಸುವುದಾಗಿ ಅವರು ತಿಳಿಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ

ಸಂಗ್ರಹ ಚಿತ್ರ -

ಮಧುರೈ: ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡಿನಲ್ಲಿ (Tamil Nadu Assembly election) ರಾಜಕೀಯದಲ್ಲಿ ಹೊಸ ತಲ್ಲಣ ಉಂಟಾಗಿದೆ. ಉಚ್ಚಾಟಿತ ಎಐಎಡಿಎಂಕೆ ನಾಯಕಿ (AIADMK leader) ವಿಕೆ ಶಶಿಕಲಾ (VK Sasikala) ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಪಕ್ಷದ ಧ್ವಜವನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಅವರು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ನೇರ ಸವಾಲೊಡ್ಡಿದ್ದಾರೆ.

ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮಗಳ ಭಾಗವಾಗಿ ತೇವರ್ ಐಕಾನ್ ಮುತ್ತುರಾಮಲಿಂಗ ತೇವರ್ ಅವರ ಜನ್ಮಸ್ಥಳ ಪಸುಂಪೊನ್‌ನಲ್ಲಿ ನಡೆಯಲಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುವ ಮುನ್ನ ಮಧುರೈನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

26/11 ಮುಂಬೈ ಮಾದರಿಯ ಮತ್ತೊಂದು ದಾಳಿ ನಡೆಸುತ್ತೇವೆ; ಪಹಲ್ಗಾಮ್‌ ಅಟ್ಯಾಕ್‌ ಮಾಸ್ಟರ್‌ಮೈಂಡ್‌ ಕಸೂರಿಯಿಂದ ಎಚ್ಚರಿಕೆ: ದೇಶಾದ್ಯಂತ ಕಟ್ಟೆಚ್ಚರ

ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿರುವ ನಾಟಕೀಯ ರಾಜಕೀಯ ನಡೆಯಲ್ಲಿ ವಿಕೆ ಶಶಿಕಲಾ ಅವರು ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದರು. ಅಲ್ಲದೇ ಶೀಘ್ರದಲ್ಲೇ ತಮ್ಮ ಪಕ್ಷದ ಧ್ವಜವನ್ನು ಪರಿಚಯಿಸುವುದಾಗಿ ಹೇಳಿದರು.

ಪಕ್ಷ ಮತ್ತು ಅದರ ರಚನೆಯ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಾನು ನನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ. ಇದನ್ನು ಇಂದು ನಾನು ಜನರಿಗೆ ಹೇಳಲಿದ್ದೇನೆ. ಅವರಿಗೆ ಹೇಳಬೇಕಾದ ಬಹಳಷ್ಟು ವಿಷಯಗಳಿವೆ ಎಂದು ತಿಳಿಸಿದರು.

ದಕ್ಷಿಣ ತಮಿಳುನಾಡಿನ ಪ್ರಭಾವಿ ತೇವರ್ ಸಮುದಾಯಕ್ಕೆ ಸೇರಿದವರಾಗಿರುವ ಶಶಿಕಲಾ ಅವರುಕಳೆದ ಕೆಲವು ವಾರಗಳಲ್ಲಿ ನಿಷ್ಠಾವಂತರೊಂದಿಗೆ ನಡೆದ ಕಾರ್ಯತಂತ್ರ ಸಭೆಗಳ ಸರಣಿಯ ಬಳಿಕ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ತಮ್ಮ ಪಕ್ಷದ ಕುರಿತಾಗಿ ಘೋಷಣೆ ಮಾಡಿದರು.

2016 ರಲ್ಲಿ ಜಯಲಲಿತಾ ಅವರ ಸಾವಿನ ಬಳಿಕ ಮುಖ್ಯಮಂತ್ರಿಯಾಗಲು ಅವರು ಆಯ್ಕೆಯಾಗಿದ್ದರು. ಆದರೆ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಂದಾಗಿ ಇದು ತಪ್ಪಿತ್ತು. ಹೀಗಾಗಿ ಶಶಿಕಲಾ ಅವರ ಈ ನಡೆ ಈಗ ಅವರ ವಿರುದ್ಧ ಪ್ರತೀಕಾರ ತೀರಿಸುವ ಪ್ರಯತ್ನವೆಂದು ಹೇಳಲಾಗುತ್ತಿದೆ. ಶಶಿಕಲಾ ಅವರು ಜೈಲಿನಲ್ಲಿದ್ದಾಗ ಅವರನ್ನು ಎಐಎಡಿಎಂಕೆಯಿಂದ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹೊರಹಾಕಿದ್ದರು. ಓ ಪನ್ನೀರ್‌ಸೆಲ್ವಂ ಅವರನ್ನು ಪದಚ್ಯುತಗೊಳಿಸಿದರು.

ಜೈಲಿನಲ್ಲಿ ಸಿಗುವ ಉಚಿತ ಊಟಕ್ಕಾಗಿ ಹುಸಿ ಬಾಂಬ್ ಬೆದರಿಕೆ ಹಾಕಿದ ಭೂಪ; ಕೊನೆಗೂ ಆತನ ಆಸೆ ಈಡೇರಲಿಲ್ಲ

ಜಯಲಲಿತಾ ಅವರ ನಿಧನದ ಬಳಿಕ ಶಶಿಕಲಾ ಅವರನ್ನು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಯಾಗಲು ಪ್ರಯತ್ನ ಮಾಡಿ ಸೋತರು. ಜಯಲಲಿತಾ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಪ್ರಕರಣದಲ್ಲಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಿದ್ದು, ಅವರ ಕನಸುಗಳಿಗೆ ನೀರೆರಚಿತ್ತು. ೨೦೨೭ ರವರೆಗೆ ಅವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆ. ಹೀಗಾಗಿ ಇದಕ್ಕೆಲ್ಲ ಕಾರಣರಾದ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಇಪಿಎಸ್ ಅನ್ನು ಶಶಿಕಲಾ ಅವರು ತಮ್ಮ ಶತ್ರುವೆಂದೇ ಪರಿಗಣಿಸಿದ್ದಾರೆ.