ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೇರಳದಲ್ಲಿ ಯುಡಿಎಫ್ ಗೆದ್ದರೆ ಗೃಹ ಇಲಾಖೆಯನ್ನು ಜಮಾತೆ ಇಸ್ಲಾಮಿ ನಿರ್ವಹಿಸಲಿದೆ; ವಿವಾದ ಸೃಷ್ಟಿಸಿದ ಸಿಪಿಎಂ ನಾಯಕನ ಹೇಳಿಕೆ

ಕೇರಳದಲ್ಲಿ ಯುಡಿಎಫ್ ಗೆದ್ದರೆ ಜಮಾತೆ ಇಸ್ಲಾಮಿ ಗೃಹ ಇಲಾಖೆಯನ್ನು ನಿಭಾಯಿಸುತ್ತದೆ ಎಂದು ಸಿಪಿಎಂ ನಾಯಕ ಎ.ಕೆ. ಬಾಲನ್ ಹೇಳಿದ್ದು, ವಿವಾದವನ್ನು ಉಂಟು ಮಾಡಿದೆ. ಪಾಲಕ್ಕಾಡ್‌ನಲ್ಲಿ ಮಾತನಾಡಿದ ಬಾಲನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಜಮಾತೆ ಇಸ್ಲಾಮಿ ಮತ್ತು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿವೆ.

ಕೇರಳದಲ್ಲಿ ರಾಜಕೀಯ ಗಲಭೆಗೆ ಕಾರಣವಾದ ಸಿಪಿಎಂ ನಾಯಕನ ಹೇಳಿಕೆ

ಎ.ಕೆ. ಬಾಲನ್ (ಸಂಗ್ರಹ ಚಿತ್ರ) -

ಕೇರಳ: ಸಿಪಿಎಂ ನಾಯಕರೊಬ್ಬರ (CPM leader) ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾದ ಘಟನೆ ಕೇರಳದಲ್ಲಿ (Kerala) ನಡೆದಿದೆ. ಪಾಲಕ್ಕಾಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಹಿರಿಯ ನಾಯಕ ಎ.ಕೆ. ಬಾಲನ್ (CPI(M) leader AK Balan), ಒಂದು ವೇಳೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅಧಿಕಾರಕ್ಕೆ ಬಂದರೆ ಜಮಾತೆ-ಇ-ಇಸ್ಲಾಮಿ (Jamaat-e-Islami) ಗೃಹ ಇಲಾಖೆಯನ್ನು (Home Ministry) ನಿರ್ವಹಿಸಲಿದೆ ಎಂದು ಹೇಳಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಜಮಾತೆ-ಇ-ಇಸ್ಲಾಮಿ ಮತ್ತು ಬಿಜೆಪಿ ನಾಯಕರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲಿ ಒಂದು ವೇಳೆ ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದರೆ ಎರಡೇ ದಿನದಲ್ಲಿ ಬಿಜೆಪಿ ಅದನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡುತ್ತದೆ. ಹೀಗಾಗಿ ಮಲಯಾಳಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆಬಂದರೆ ಜಮಾತೆ-ಇ-ಇಸ್ಲಾಮಿ ಗೃಹ ಇಲಾಖೆಯನ್ನು ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ: ಕೋಲ್ಕತ್ತಾದಲ್ಲಿ ಹೈಡ್ರಾಮಾ, ಟಿಎಂಸಿ ಚುನಾವಣಾ ತಂತ್ರವನ್ನು ಬಿಜೆಪಿ ಕದ್ದಿದೆ ಎಂದ ಮಮತಾ ಬ್ಯಾನರ್ಜಿ

ಅವರು ತಮ್ಮ ಮಾತನ್ನು ಮುಂದುವರಿಸಿ, ಯುಡಿಎಫ್ ಅಧಿಕಾರಕ್ಕೆ ಬಂದರೆ ಕೇವಲ ಒಂದೆರಡು ಗಲಭೆಗಳು ಮಾತ್ರ ನಡೆಯುವುದಿಲ್ಲ. ಇದರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೂಡ ಭಾಗಿಯಾಗುತ್ತವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ವಿ.ಡಿ. ಸತೀಶನ್, ಯುಡಿಎಫ್ ಅಧಿಕಾರಕ್ಕೆ ಬಂದರೆ ಜಮಾತೆ-ಇ-ಇಸ್ಲಾಮಿ ಗೃಹ ಇಲಾಖೆಯನ್ನು ನಿರ್ವಹಿಸುತ್ತದೆ ಎಂಬ ಎ.ಕೆ. ಬಾಲನ್ ಹೇಳಿಕೆಯು ಇಡೀ ದೇಶದಲ್ಲಿ ಸಂಘ ಪರಿವಾರ ಅಧಿಕಾರ ನಡೆಸುತ್ತಿದೆ ಎಂಬುದನ್ನು ಹೇಳಿದಂತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಅಹ್ಮದ್ ಪಟೇಲ್ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಬಿಜೆಪಿ ಹೇಳಿತ್ತು. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯದ ನಡುವೆ ವಿಭಜನೆ ಉಂಟು ಮಾಡಲು ಸಂಘ ಪರಿವಾರದ ತಂತ್ರವನ್ನು ಬಾಲನ್ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಬಾಲನ್ ಹೇಳಿಕೆಗೆ ಜಮಾತೆ-ಇ-ಇಸ್ಲಾಮಿ ಕಾನೂನು ನೊಟೀಸ್ ಜಾರಿ ಮಾಡಿದೆ. ಅವರು ಕೋಮು ಹಿಂಸಾಚಾರವನ್ನು ಸೃಷ್ಟಿಸಲು ಪ್ರಯತ್ನಿಸಿದ್ದರೆ ಎಂದು ಆರೋಪಿಸಲಾಗಿದ್ದು, ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಹೇಳಿದೆ.

ಸೋಮನಾಥ ದೇವಾಲಯದ ಸ್ವಾಭಿಮಾನ ಪರ್ವ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ: ಭೇಟಿಗೆ ಮುನ್ನ ಹೇಳಿದ್ದೇನು?

ಒಂದು ವೇಳೆ ಅವರು ತಮ್ಮ ಹೇಳಿಕೆಯಯನ್ನು ಹಿಂಪಡೆಯದೇ ಇದ್ದರೆ ಅವರ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಎರಡೂ ಪ್ರಕರಣಗಳನ್ನು ದಾಖಲಿಸಲಾಗುವುದು. 1 ಕೋಟಿ ರೂ. ಪರಿಹಾರವನ್ನೂ ಕೇಳುವುದಾಗಿ ಹೇಳಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಇವರು ನೀಡಿರುವ ಹೇಳಿಕೆ ಮುಸ್ಲಿಂ ಸಂಘಟನೆಯ ವಿರುದ್ಧ ಭಯ ಹುಟ್ಟಿಸುವಂತಿದೆ ಎಂದು ಜಮಾತೆ-ಇ-ಇಸ್ಲಾಮಿ ಆರೋಪಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತು ಐಯುಎಂಎಲ್ ಜಮಾತ್-ಇ-ಇಸ್ಲಾಮಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇದು ತುಂಬಾ ಅಪಾಯಕಾರಿ. ಯಾಕೆಂದರೆ ಜಮಾತ್ ಯಾವುದೇ ಸಾಮಾನ್ಯ ಸಂಘಟನೆಯಲ್ಲ. ಅದು ಇಸ್ಲಾಮಿಕ್ ರಾಷ್ಟ್ರ ಮತ್ತು ಷರಿಯಾ ಆಡಳಿತವನ್ನು ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿದರು.