ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉದಯನಿಧಿ ಅಲ್ಲ ಅಸಭ್ಯ ನಿಧಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಟಿವಿಕೆ ಆಕ್ರೋಶ

ಸಾರ್ವಜನಿಕ ಭಾಷಣದ ಸಂದರ್ಭದಲ್ಲಿ ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಮತ್ತು ನಟ ಉದಯನಿಧಿ ಸ್ಟಾಲಿನ್ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರವನ್ನು ಟೀಕಿಸುವ ವೇಳೆ ನಟಿ ತ್ರಿಷಾ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದು, ಇದು ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಟಿವಿಕೆ ಸೇರಿದಂತೆ ಹಲವು ರಾಜಕೀಯ ನಾಯಕರು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಅವರನ್ನು ಬಂಧಿಸಲಾಗಿದೆ.

ಅಸಭ್ಯ ನಿಧಿ ಉದಯನಿಧಿ ಎಂದ ಟಿವಿಕೆ

ಸಂಗ್ರಹ ಚಿತ್ರ -

ಚೆನ್ನೈ: ನಟಿ ತ್ರಿಷಾ (actress Trisha) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಮತ್ತು ನಟ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಮಂಗಳವಾರ ಬೆಳಗ್ಗೆ ಅವರ ಚೆನ್ನೈನಲ್ಲಿರುವ (Chennai) ನಿವಾಸದಿಂದ ಬಂಧಿಸಲಾಯಿತು. ಇದರ ಬಳಿಕವು ತಮಿಳಗ ವೆಟ್ರಿ ಕಳಗಂ (Tamil Vetri Kalagam) ಪಕ್ಷದ ನಾಯಕರು ಅವರ ಮೇಲೆ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಟಿವಿಕೆ ನಾಯಕ ಅಮೆರಿಕಾಯ್ ನಾರಾಯಣನ್ (TVK leader Americai Narayanan) ಅವರು ಮಾತನಾಡಿ, ಅವರು ಅಸಭ್ಯ ನಿಧಿ, ಉದಯನಿಧಿ ಅಲ್ಲ ಎಂದು ಹೇಳಿದರು.

ತಂಜಾವೂರಿನಲ್ಲಿ ಸೋಮವಾರ ನಡೆದ ಸಮಾವೇಶವೊಂದರಲ್ಲಿ ಉದಯನಿಧಿ ಸ್ಟಾಲಿನ್ ಅವರು ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡುತ್ತಿದ್ದಾಗ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಮತ್ತು ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿದರು. ದ್ವಂದ್ವ ಅರ್ಥ ಕೊಡುವ ಪದಗಳನ್ನು ಬಳಕೆ ಮಾಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಇದರಿಂದ ಪೊಲೀಸ್ ದೂರು ದಾಖಲಾಗಿದ್ದು, ಬಳಿಕ ಅವರನ್ನು ಬಂಧಿಸಲಾಗಿದೆ.

Khushbu Sundar: ಉದಯನಿಧಿ ಸ್ಟಾಲಿನ್ ಅರೆಸ್ಟ್‌; ತ್ರಿಷಾಗೆ ಕ್ಷಮೆ ಕೇಳಿ ಎಂದು ಖುಷ್ಬು ಸುಂದರ್ ಪೋಸ್ಟ್‌

ತ್ರಿಷಾ ಅವರ ಬಗೆಗಿನ ಆಕ್ಷೇಪಾರ್ಹ ಹೇಳಿಕೆಗೆ ಮಂಗಳವಾರ ಬೆಳಗ್ಗೆ ಡಿಎಂಕೆ ನಾಯಕ ಬಂಧನಕ್ಕೆ ಒಳಗಾದ ಮೇಲೆ ಪ್ರತಿಕ್ರಿಯಿಸಿದ ಟಿವಿಕೆ ನಾಯಕ ಅಮೆರಿಕಾಯ್ ನಾರಾಯಣನ್, ಅವರ ಹೆಸರೇನು? ಅಸಭ್ಯ ನಿಧಿ? ಅವರನ್ನು ಉದಯನಿಧಿ ಎಂದು ಕರೆಯಬಾರದು. ಅವರು ತಮ್ಮ ಹೆಸರನ್ನು ಅಸಭ್ಯ ನಿಧಿ ಎಂದು ಬದಲಾಯಿಸಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ವಿಜಯ್ ಅಥವಾ ಸರ್ಕಾರದ ವಿರುದ್ಧ ಮಾತನಾಡಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿಲ್ಲ. ಮಹಿಳೆಯನ್ನು ಅವಮಾನಿಸಿದ್ದಕ್ಕಾಗಿ ಬಂಧಿಸಲಾಗಿದೆ. ಅವರು ತಮಿಳುನಾಡಿನ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.



ತಂಜಾವೂರಿನಲ್ಲಿ ಸೋಮವಾರ ಕಾವೇರಿ ವಿವಾದದ ಕುರಿತು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್ ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಟೀಕಿಸಿದರು. ಅವರು ಅಧಿಕಾರ ವಹಿಸಿಕೊಂಡ ಮೇಲೆ ತಮಿಳುನಾಡಿಗೆ ಒಂದು ಹನಿ ಕಾವೇರಿ ನೀರು ಕೂಡ ಬಂದಿಲ್ಲ ಎಂದರು. ಆಗ ಜನಸಮೂಹದಲ್ಲಿ ಯಾರೋ ಒಬ್ಬರು ತ್ರಿಷಾ, ತ್ರಿಷಾ.. ಎಂದು ಘೋಷಣೆ ಕೂಗಿದ್ದು, ಆಗ ತಮ್ಮ ಭಾಷಣವನ್ನು ನಿಲ್ಲಿಸಿದ ಉದಯನಿಧಿ ದ್ವಂದ್ವ ಅರ್ಥಕೊಡುವ ಮಾತುಗಳಲ್ಲಿ ಪ್ರತಿಕ್ರಿಯಿಸಿದರು. ಇದು ತೀವ್ರ ರಾಜಕೀಯ ಟೀಕೆಗೆ ಕಾರಣವಾಗಿದೆ. ಈ ಕುರಿತು ಟಿವಿಕೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದು ಉದಯನಿಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು ಮತ್ತು ಪೊಲೀಸ್ ದೂರನ್ನು ಕೂಡ ದಾಖಲಿಸಿತ್ತು.

ನಟಿ ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಲು ಬಂದಾಗ ಉದಯನಿಧಿ ಸ್ಟಾಲಿನ್ ಅವರು ನಗುತ್ತಾ, ಇದೊಂದು ತಮಾಷೆ ಎಂದು ನೋಡಿದ್ದೇನೆ ಮತ್ತು ಕಾನೂನುಬದ್ಧವಾಗಿ ಹೋರಾಡುತ್ತೇನೆ ಎಂದರು. ಡಿಎಂಕೆ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಹಿರಿಯ ರಾಜಕೀಯ ನಾಯಕರು ಕ್ಷುಲ್ಲಕ, ಅವಿವೇಕದ ಹೇಳಿಕೆಗಳನ್ನು ನೀಡುವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಹೇಳಿದರು.