ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಟಿಂಗ್ ಆಪರೇಷನ್ ನಡೆಸಲು 'ಮೆಟಾ ಎಐ' ಕನ್ನಡಕ ಬಳಕೆ: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

CM D.K. Shivakumar: ಉದ್ಯಮದ ಕುರಿತಾಗಿ ಚರ್ಚಿಸಲು ಬಂದ ವ್ಯಕ್ತಿಯೊಬ್ಬ 'ಮೆಟಾ ಎಐ' ಕನ್ನಡಕ ಧರಿಸಿದ್ದ. ಆತನ ಹಿನ್ನೆಲೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಸ್ಟಿಂಗ್ ಆಪರೇಷನ್ ಪ್ರಯತ್ನ ಇದಾಗಿತ್ತು ಎಂಬುದು ತಿಳಿಯಿತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು ಇದನ್ನು ಬಹಿರಂಗ ಪಡಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಬೆಳಕಿಗೆ ಬಂದಿದ್ದು ಹೇಗೆ?

ಸಂಗ್ರಹ ಚಿತ್ರ -

ಬೆಂಗಳೂರು: ದೇವರು ನನಗೆ ಒಂದು ವಿಶೇಷ ಶಕ್ತಿಯನ್ನು ನೀಡಿದ್ದಾನೆ. ಒಬ್ಬ ವ್ಯಕ್ತಿಯ ಮುಖ ನೋಡಿದ ಕೂಡಲೇ ಅವರು ನನ್ನನ್ನು ಏಕೆ ಭೇಟಿಯಾಗಲು ಬಂದಿದ್ದಾರೆ ಮತ್ತು ಅವರ ಉದ್ದೇಶವೇನು ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ (Karnataka Chief Minister) ಡಿ.ಕೆ. ಶಿವಕುಮಾರ್ (CM D.K. Shivakumar) ಹೇಳಿದರು. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು ತಮ್ಮ ವಿರುದ್ಧ ನಡೆಸಲಾದ ಸ್ಟಿಂಗ್ ಆಪರೇಷನ್ (Sting Operation) ಕುರಿತಾಗಿ ವಿವರಿಸಿದ ಅವರು ಉದ್ಯಮದ ಕುರಿತು ಚರ್ಚೆ ನಡೆಸಲು ಬಂದಿದ್ದ ವ್ಯಕ್ತಿಯೊಬ್ಬ 'ಮೆಟಾ ಎಐ' ಕನ್ನಡಕ (Meta AI glasses) ಧರಿಸಿದ್ದನು. ಆತನ ಹಿನ್ನೆಲೆ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಇದು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಸ್ಟಿಂಗ್ ಆಪರೇಷನ್ ಪ್ರಯತ್ನ ಎಂಬುದು ತಿಳಿಯಿತು ಎಂದರು.

ಉದ್ಯಮಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ವ್ಯವಹಾರದ ವಿಷಯದಲ್ಲಿ ಚರ್ಚೆ ನಡೆಸಲು ಬಂದು ರಾಜಕೀಯದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಅವರು ಧರಿಸಿದ್ದ ಕನ್ನಡಕ ನೋಡಿ ನನಗೆ ಅನುಮಾನ ಬಂದಿತ್ತು. ತಕ್ಷಣವೇ ಅವರ ಹಿನ್ನೆಲೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ವಿವರಿಸಿದರು.

CM's Medal recipient CPI Sharanabasappa Kodla suspended: ಅಕ್ಕಿ ಕಳ್ಳರ ಜತೆ ಪೊಲೀಸರ ‘ಡೀಲ್’: ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಸೇರಿ ನಾಲ್ವರು ಅಮಾನತು

ಸಾಕಷ್ಟು ಹೊತ್ತು ಆ ವ್ಯಕ್ತಿ ನಾನೊಂದಿಗೆ ಮಾತನಾಡಿದ್ದಾರೆ.ಆರಂಭದಲ್ಲಿ ವ್ಯವಹಾರದ ಬಗ್ಗೆ ಮಾತನಾಡಿದರೂ ಬಳಿಕ ಪ್ರತ್ಯೇಕ ಕೊಠಡಿಗೆ ತೆರಳಿ ಲ್ಯಾಪ್‌ಟಾಪ್ ತೆರೆದು ರಾಜಕೀಯ ವಿಷಯಗಳ ಕುರಿತು ಮಾತನಾಡಿದರು. ಅವರಲ್ಲಿದ್ದ ಅಸಾಮಾನ್ಯ ಆತ್ಮವಿಶ್ವಾಸ, ರಾಜಕೀಯ ತಂತ್ರಗಳ ಮಾಹಿತಿ ನನ್ನ ಕುತೂಹಲವನ್ನು ಕೆರಳಿಸಿತ್ತು ಎಂದು ಹೇಳಿದರು.

'ಮೆಟಾ ಎಐ' ಕನ್ನಡಕವನ್ನು ಧರಿಸಿಯೇ ಆ ವ್ಯಕ್ತಿ ತಮ್ಮನ್ನು ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ. ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವರೊಬ್ಬರನ್ನು ಭೇಟಿಯಾದಾಗ ಅವರು ಆ ಕನ್ನಡಕ ಧರಿಸಿರಲಿಲ್ಲ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದರು.

ಇತರ ನಾಯಕರು, ಸಚಿವರು ಕೂಡ ಇಂತಹ ಕಾರ್ಯಾಚರಣೆಗಳಿಗೆ ಗುರಿಯಾಗಬಹುದು. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ತಿಳಿಸಲಾಗಿದೆ. 'ಸ್ಟಿಂಗ್ ಆಪರೇಷನ್' ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಎಲ್ಲವನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಮಯ ಬಂದಾಗ ಹೆಚ್ಚಿನ ಮಾಹಿತಿಯನ್ನುನೀಡುವುದಾಗಿ ಅವರು ತಿಳಿಸಿದರು.

ಕಳೆದ ಅಕ್ಟೋಬರ್ 8ರಂದು ರಾಜ್ಯದ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದರು. ಇದರ ಬಳಿಕ ರಾಜ್ಯ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

DCM D.K. Shivakumar: ಜನವಿರೋಧಿ ಆಡಳಿತದ ಮೂಲಕ ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಭವಿಷ್ಯ

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕೂಡ ಈ ಕುರಿತು ಮಾತನಾಡಿ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸಲು ನಡೆಸಲಾದ ತಂತ್ರ ಇದು ಎಂದು ಹೇಳಿ, ಡಿ.ಕೆ. ಶಿವಕುಮಾರ್ ವಿರುದ್ಧವೇ ಇದರ ಆರೋಪವನ್ನು ಮಾಡಿದರು. ಆದರೆ ಡಿ.ಕೆ. ಶಿವಕುಮಾರ್ ಇದನ್ನು ನಿರಾಕರಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದರು.