ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ದತ್ತಾತ್ರೇಯ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಚಂಡಿಕಾಹೋಮ

ಜೀವನದ ಅಡೆತಡೆಗಳನ್ನು ನಿವಾರಿಸಲು, ಉತ್ತಮ ಆರೋಗ್ಯ, ಸಮೃದ್ಧಿ, ಶತ್ರು ವಿಜಯ ಹಾಗೂ ನಕಾರಾತ್ಮಕ ಶಕ್ತಿಗಳ ನಿವಾರಣೆಗಾಗಿ ಹಾಗೂ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ, ಜೀವನದಲ್ಲಿ ಎದುರಾಗುವ ಆರ್ಥಿಕ ನಷ್ಟ ಹಾಗೂ ಕಷ್ಟಗಳ ನಿವಾರಣೆ, ಮಾಟ, ಮಂತ್ರ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಶತ್ರುಗಳ ಮೇಲೆ ಜಯ ಮತ್ತು ಮಾನಸಿಕ ನೆಮ್ಮದಿ ಮತ್ತು ಲೋಕಕಲ್ಯಾಣಕ್ಕಾಗಿ ಈ ಚಂಡಿಕಾ ಹೋಮವನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ

ದತ್ತಾತ್ರೇಯ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಚಂಡಿಕಾಹೋಮ

-

Profile
Ashok Nayak Oct 23, 2026 3:25 PM

ಚಿಕ್ಕಬಳ್ಳಾಪುರ: ನಗರದ ಶ್ರೀ ದತ್ತಾತ್ರೇಯ ಸಮಾಜ ಸಾಧು ಮಠ ಟ್ರಸ್ಟ್ ವತಿಯಿಂದ ನವರಾತ್ರಿ ಪ್ರಯುಕ್ತ ಲೋಕ ಕಲ್ಯಾಣಾರ್ಥ ಆಯೋಜಿಸಿದ್ದ “ಚಂಡಿಕಾ ಹೋಮ” ಅತ್ಯಂತ ಯಶಸ್ವಿಯಾಗಿ ನಡೆಯಿತು. 

ಜೀವನದ ಅಡೆತಡೆಗಳನ್ನು ನಿವಾರಿಸಲು, ಉತ್ತಮ ಆರೋಗ್ಯ, ಸಮೃದ್ಧಿ, ಶತ್ರು ವಿಜಯ ಹಾಗೂ ನಕಾರಾತ್ಮಕ ಶಕ್ತಿಗಳ ನಿವಾರಣೆಗಾಗಿ ಹಾಗೂ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ, ಜೀವನ ದಲ್ಲಿ ಎದುರಾಗುವ ಆರ್ಥಿಕ ನಷ್ಟ ಹಾಗೂ ಕಷ್ಟಗಳ ನಿವಾರಣೆ, ಮಾಟ, ಮಂತ್ರ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಶತ್ರುಗಳ ಮೇಲೆ ಜಯ ಮತ್ತು ಮಾನಸಿಕ ನೆಮ್ಮದಿ ಮತ್ತು ಲೋಕಕಲ್ಯಾಣಕ್ಕಾಗಿ ಈ ಚಂಡಿಕಾ ಹೋಮವನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ ಎಂದು ಶ್ರೀ ದತ್ತಾತ್ರೇಯ ದೇವಾಲಯದ ಪ್ರಧಾನ ಅರ್ಚಕರಾದ ವೇದ ಬ್ರಹ್ಮ ಎನ್.ಬಾಲಚಂದ್ರ ಸ್ವಾಮೀಜಿ ತಿಳಿಸಿದರು. 

ಇದನ್ನೂ ಓದಿ: Chikkaballapur News: ತಹಶೀಲ್ದಾರ್ ರಶ್ಮಿ ಅವರಿಂದ ಪೂಜೆ, ಬಿಲ್ಲಿಗೆ ಹೆದೆಯೇರಿಸಿ ಬಾಣ ಪ್ರಯೋಗ; ಬನ್ನಿ ಎಲೆಗಳಿಗಾಗಿ ಭಕ್ತರ ನೂಕುನುಗ್ಗಲು

ಸುಮಾರು 500ಕ್ಕೂ ಅಧಿಕ ಮಂದಿ ಭಕ್ತರು ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಚಂಡಿಕಾ ಹೋಮ ನಂತರ ತೀರ್ಥ ಪ್ರಸಾದ ವಿನಿಯೋಗಿಸಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  

1405384 ok

ಈ ಸಂದರ್ಭದಲ್ಲಿ ಶ್ರೀ ದತ್ತಾತ್ರೇಯ ಸಮಾಜ ಸಾಧು ಮಠ ಟ್ರಸ್ಟ್ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಜಿ.ಪಿ. ಕ್ಯಾತಪ್ಪ ಕಾರ್ಯದರ್ಶಿ ಪಿ.ವಿ. ರಾಮಚಂದ್ರರೆಡ್ಡಿ ಖಜಾಂಚಿ ಜಿ.ಎಸ್.ಶ್ರೀನಾಥ್ ಟ್ರಸ್ಟಿಗಳಾದ ಪಿ. ಎನ್. ಕೃಷ್ಣಪ್ಪ,, ಹೆಚ್. ಶ್ರೀನಿವಾಸ್ ಆರ್ ಓ ಪ್ರಭಾಕರ್, ಎಂ ಕೃಷ್ಣಪ್ಪ ವಿ ಸುಬ್ರಹ್ಮಣ್ಯಚಾರಿ, ಡಿ.ಎಸ್.ಆನಂದರೆಡ್ಡಿ ಬಾಬು, ರಂಗಪ್ಪ, ಹರಿಕುಮಾರ್, ನಾಗಭೂಷಣ್ ಸೇರಿದಂತೆ ಇನ್ನಿತರರು ಇದ್ದರು.