ದಿನ ಭವಿಷ್ಯ, ಜೂನ್ 3, 2026: ಶುಕ್ರನಿಂದ ಹೆಚ್ಚಾಗಲಿದೆ ಅದೃಷ್ಟ; ಕಷ್ಟಗಳೆಲ್ಲ ದೂರ
Horoscope Today June 3rd: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ತೃತೀಯ ತಿಥಿ, ಪೂರ್ವಾಷಡ ನಕ್ಷತ್ರದ ಜೂನ್ 3ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು, ಜೂ. 3: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ತೃತೀಯ ತಿಥಿ, ಪೂರ್ವಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಪೂರ್ವಾಷಾಢ ನಕ್ಷತ್ರದ ಅಧಿಪತಿ ಶುಕ್ರ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು ನಿಮ್ಮದಾಗಲಿದೆ. ಅಂದುಕೊಂಡ ಕೆಲಸ ಕಾರ್ಯಗಳು ಇಂದು ನೆರವೇರಲಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಕೆಲವೊಂದು ಅಡೆ- ತಡೆ ಎದುರಾಗಬಹುದು. ಮಧ್ಯಾಹ್ನ ಬಳಿಕ ಕೆಲಸ ಕಾರ್ಯದಲ್ಲಿ ಧನಾತ್ಮಕ ಫಲಗಳನ್ನು ಕಾಣುತ್ತೀರಿ. ಎಲ್ಲದರಲ್ಲೂ ಮುನ್ನಡೆ ಸಾಧಿಸುತ್ತೀರಿ.
ಮಿಥುನ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಅಂದುಕೊಂಡಿದ್ದೆಲ್ಲ ನೆರವೇರಲಿದೆ. ಮಧ್ಯಾಹ್ನ ಬಳಿಕ ಸ್ನೇಹತರ ಜತೆ ಕಲಹವಾಗಬಹುದು. ಎಲ್ಲರೂ ನಿಮ್ಮಿಂದ ದೂರ ಆದಂತೆ ಭಾಸವಾಗಬಹುದು.
ಕಟಕ ರಾಶಿ: ಕಟಕ ರಾಶಿಯವರಿಗೆ ಈ ದಿನ ಉತ್ತಮ. ಎಲ್ಲ ರೀತಿಯಿಂದಲೂ ನೀವು ಸಹಕಾರ ಪಡೆಯಬಹುದು. ದಾಂಪತ್ಯ ಹಾಗೂ ಬಿಸೆನೆಸ್ ಪಾರ್ಟನರ್‌ಶಿಪ್ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೆ ವ್ಯವಹಾರದಲ್ಲಿ ನಾನಾ ರೀತಿಯ ಯೋಚನೆಗಳು ಬರಬಹುದು. ಮಧ್ಯಾಹ್ನ ಬಳಿಕ ಶತ್ರು ನಾಶವಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯಗಳು ಜಾಸ್ತಿಯಾಗುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಕ್ರಿಯೇಟಿವಿಟಿಯಿಂದ ಲಾಭ ಗಳಿಸುತ್ತೀರಿ. ಅದೇ ರೀತಿ ಜೀವನದಲ್ಲಿ ಮುಖ್ಯವಾದ ಬದಲಾವಣೆ ಆಗಬಹುದು.
ಅಡುಗೆ ಮನೆಯ ಈ ವಾಸ್ತು ದೋಷ ಕುಟುಂಬ ಕಲಹಕ್ಕೆ ಕಾರಣವಾಗಬಹುದು!
ತುಲಾ ರಾಶಿ: ಮಧ್ಯಾಹ್ನವರೆಗೂ ತುಲಾ ರಾಶಿಯವರ ಪರವಾಗಿಯೇ ಎಲ್ಲವೂ ನಡೆಯಲಿದೆ. ಮಧ್ಯಾಹ್ನ ಬಳಿಕ ಮನೆಯ ಕಡೆ ಹೆಚ್ಚಿನ ಗಮನ ನೀವು ನೀಡಬೇಕಾಗುತ್ತದೆ. ಆಸ್ತಿ, ಪಾಸ್ತಿ ಹಾಗೂ ಕೋರ್ಟ್ ವ್ಯವಹಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯಗಳು ಜಾಸ್ತಿಯಾಗಬಹುದು. ಮಧ್ಯಾಹ್ನ ಬಳಿಕ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಸೋಷಿಯಲ್ ಮೀಡಿಯಾ, ಟಿವಿ, ಮಾರುಕಟ್ಟೆ ವ್ಯವಹಾರದಲ್ಲಿ ಲಾಭ ದೊರೆಯಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಸ್ವಲ್ಪ ಆತಂಕ ಹಾಗೂ ನೋವು ಕಾಡಬಹುದು. ಮುಖ್ಯವಾದ ವಿಚಾರದಲ್ಲಿ ಯಾವುದೇ ಮಾರ್ಗದರ್ಶನ ಸಿಗದೇ ಇರಬಹುದು. ಮಧ್ಯಾಹ್ನ ಬಳಿಕ ಇದೆಕ್ಕೆಲ್ಲ ಉತ್ತರ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಅನೇಕ ರೀತಿಯ ತಾಪತ್ರಯ ಕಾಡಬಹುದು. ಮಧ್ಯಾಹ್ನ ಬಳಿಕ ಒಮ್ಮೆಲೆ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಒಳಿತಾದರೂ ಮಧ್ಯಾಹ್ನ ಬಳಿಕ ಕೆಲವೊಂದು ಸಮಸ್ಯೆ ಸೃಷ್ಟಿಯಾಗಬಹುದು. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಹೋಗಬೇಡಿ.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದ ಜವಾಬ್ದಾರಿ ಇರುತ್ತದೆ. ಮಧ್ಯಾಹ್ನ ಬಳಿಕ ಸಂತಸ ನಿಮ್ಮದಾಗಲಿದೆ.