ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜುಲೈ 30, 2026: ಚಂದ್ರನ‌ ಪ್ರಭಾವದಿಂದ ಇಂದು ಗಜಕೇಸರಿ ಯೋಗ

Horoscope Today July 30th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಪ್ರತಿಭಾ ತಿಥಿ, ಶ್ರವಣ ನಕ್ಷತ್ರದ, ಜುಲೈ 30ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಯವರಿಗೆ ವೈಯಕ್ತಿಕ ಕೆಲಸದಲ್ಲಿ ಯಶಸ್ಸು

ಇಂಟರ್‌ನೆಟ್ ಚಿತ್ರ -

Profile
Pushpa Kumari Jul 30, 2026 6:00 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎಂದು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ:  ಶ್ರವಣ ನಕ್ಷತ್ರದ ಅಧಿಪತಿ ಚಂದ್ರ. ಹೀಗಾಗಿ ಹೆಚ್ಚಿನ ಜನರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಿದ್ದು, ಗಜಕೇಸರಿ ಯೋಗ ಇದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡ ತಿರುವು ಸಂಭವಿಸಲಿದೆ. ಇದರಿಂದ ಅನುಕೂಲವಾಗಲಿದೆ.

ವೃಷಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಅದೃಷ್ಟ ಹೆಚ್ಚಾಗಿದ್ದು, ಆಧ್ಯಾತ್ಮಿಕವಾಗಿ ಯಶಸ್ಸು ಗಳಿಸುತ್ತೀರಿ. ಕೆಲಸ ಕಾರ್ಯದಲ್ಲಿಯೂ ನೆಮ್ಮದಿ ಸಿಗುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಕಷ್ಟದ ದಿನವಾಗಲಿದೆ.‌ ಹೀಗಾಗಿ ಆಧ್ಯಾತ್ಮಿಕವಾಗಿ ಸಮಯ ಕಳೆಯಬೇಕಾಗುತ್ತದೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗಬಹುದು‌.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಪಾರ್ಟನರ್‌ಶಿಪ್‌ ವ್ಯವಹಾರದಲ್ಲಿ ಯಶಸ್ಸು. ದಾಂಪತ್ಯ ಜೀವನದಲ್ಲೂ ಖುಷಿ.

ವಿಡಿಯೋ ನೋಡಿ:



ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮುಖ್ಯವಾದ ತಿರುವೊಂದು ಪ್ರಾಪ್ತಿಯಾಗುತ್ತದೆ. ಶತ್ರು ಭಾದೆಗಳು ನಿಮ್ಮನ್ನು ಕಾಡಲಾರವು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆಸ್ತಿ ಪಾಸ್ತಿ ವಿವಾದದಲ್ಲಿ ಜಯವಾಗುತ್ತದೆ. ಹಿಂದೆ ಇದ್ದ ತೊಂದರೆಗಳಿಗೆ ಪರಿಹಾರ ಸಿಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಕಷ್ಟದ ದಿನವಾಗಲಿದೆ. ಆಸ್ತಿ ಪಾಸ್ತಿ ವಿಚಾರವಾಗಿ ಕಷ್ಟ ಉಂಟಾಗಬಹುದು.‌ ಹಣಕಾಸಿನ ವಿಚಾರ ಹಾಗೂ ಮನೆ ಬದಲಾವಣೆ ವಿಚಾರವಾಗಿ ಇಂದು ಹೊಸ ತಿರುವು ಕಾಣಬಹುದು.

ಅದೃಷ್ಟ ತರಬೇಕಾದರೆ ಲಕ್ಕಿ ಬ್ಯಾಂಬೂದಲ್ಲಿ ಎಷ್ಟು ಕಾಂಡ ಇರಬೇಕು ಗೊತ್ತೇ?

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹೆಚ್ಚಿನ ಧನಾಗಮನದ ಸೂಚನೆ ಕೂಡ ಇದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಯಶಸ್ಸು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ತೊಂದರೆ ಬಗೆಹರಿದು ಯಶಸ್ಸು ಸಿಗುತ್ತದೆ. ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ನಿಮ್ಮ ರಾಶಿಯವರಿಗೆ ಇಂದು ಗಜಕೇಸರಿ ಯೋಗ ಇದೆ. ವ್ಯಕ್ತಿತ್ವದಲ್ಲೂ ಸುಧಾರಣೆ ಕಾಣುತ್ತೀರಿ.

ಕುಂಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು, ಆಧ್ಯಾತ್ಮಿಕವಾಗಿ ಪ್ರಗತಿ ಕಾಣುತ್ತೀರಿ. ಕೆಲಸ ಕಾರ್ಯದಲ್ಲಿ ನೆಮ್ಮದಿ ಇರುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಲಾಭ ಸ್ಥಾನದಲ್ಲಿ ಗಜಕೇಸರಿಯೋಗ ಇದೆ. ಹೆಚ್ಚಿನ ಅವಕಾಶಗಳು ನಿಮಗಿಂದು ಒದಗಿ ಬರುತ್ತವೆ.