Akshaya Trutiya Special: ಅಕ್ಷಯ ತೃತೀಯ ಪ್ರಯುಕ್ತ ಸಜ್ಜಾದ ಆಭರಣ ಲೋಕ
Akshaya Trutiya Special: ಅಕ್ಷಯ ತೃತೀಯ ಪ್ರಯುಕ್ತ ಎಲ್ಲಾ ಆಭರಣದ ಅಂಗಡಿಗಳು ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಜ್ಯುವೆಲರಿಗಳನ್ನು ಪೂರೈಸಲು ಸಜ್ಜಾಗಿವೆ. ಈ ಸೀಸನ್‌ನಲ್ಲಿ ಹೇಗೆಲ್ಲಾ ಸಜ್ಜುಗೊಂಡಿವೆ? ಈ ಕ್ಷೇತ್ರದಲ್ಲಿನ ಪ್ರಸ್ತುತ ವಾತಾವರಣವೇನು? ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ಅಕ್ಷಯ ತೃತೀಯ ಸಂಭ್ರಮ ವ್ಯಾಪಿಸುತ್ತಿದ್ದಂತೆ, ಜ್ಯುವೆಲರಿ ಲೋಕವು ಗ್ರಾಹಕರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಟ್ರೆಂಡಿ ಆಭರಣಗಳನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರ ಮನೋಭಿಲಾಷೆಗೆ ಹೊಂದುವಂತೆ ಆಭರಣಗಳನ್ನು ಪೂರೈಸಲು ಕಂಪ್ಲೀಟ್ ಸಜ್ಜಾಗಿವೆ. ಈಗಾಗಲೇ ಅಕ್ಷಯ ತೃತೀಯ (Akshaya Trutiya Special) ಹಿನ್ನೆಲೆಯಲ್ಲಿ, ಎಲ್ಲಾ ಜ್ಯುವೆಲರಿ ಶಾಪ್‌ಗಳು ಅಲಂಕೃತಗೊಂಡಿವೆ. ಜಗಮಗಿಸುತ್ತಿವೆ. ಸಾಕಷ್ಟು ಆಭರಣ ಅಂಗಡಿಗಳಲ್ಲಿ ಒಳಾಂಗಣ ವಿನ್ಯಾಸದಲ್ಲೂ ಬದಲಾವಣೆ ಕಂಡು ಬಂದಿದೆ. ಎಲ್ಲಾ ವರ್ಗದ ಗ್ರಾಹಕರನ್ನು ಆಕರ್ಷಿಸಲು ಈ ಸೀಸನ್ ಕಾನ್ಸೆಪ್ಟ್‌ಗೆ ತಕ್ಕಂತೆ ಅಲಂಕೃತಗೊಂಡು ವ್ಯಾಪಾರಕ್ಕೆ ಸಜ್ಜಾಗಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.

ಅಕ್ಷಯ ತೃತೀಯಾಗೆ ಬದಲಾದ ಕಾನ್ಸೆಪ್ಟ್
ಮೊದಲಿದ್ದ ಮದುವೆಗೆ ಮಾತ್ರ ಆಭರಣ ಖರೀದಿ ಎಂಬ ಹಳೆಯ ಕಾನ್ಸೆಪ್ಟ್ ಈಗಿಲ್ಲ! ಸಂದರ್ಭ ಹಾಗೂ ಸ್ಥಾನ-ಮಾನಕ್ಕೆ ತಕ್ಕಂತೆ ಆಭರಣಗಳನ್ನು ಧರಿಸುವುದು ಕಾಮನ್ ಆಗಿದೆ. ಅಷ್ಟು ಮಾತ್ರವಲ್ಲ, ಅಕ್ಷಯ ತೃತೀಯ ಎಂದಾಕ್ಷಣ ಕೇವಲ ಬೆಳ್ಳಿ-ಬಂಗಾರದ ಒಡವೆಗಳಿಗೆ ಸೀಮಿತವಾಗಿದ್ದ, ಮಧ್ಯಮ ವರ್ಗದ ಜನರು ಇಂದು ವಜ್ರ ಹಾಗೂ ಪ್ಲಾಟಿನಂ ಆಭರಣಗಳತ್ತವೂ ವಾಲುತ್ತಿದ್ದಾರೆ.

ಪ್ರಿ ಆರ್ಡರ್ ವಿಶೇಷತೆ
ಅಕ್ಷಯ ತೃತೀಯ ದಿನದಂದು ಕೈ ಸೇರುವ ಸಲುವಾಗಿ ಸಾಕಷ್ಟು ಗ್ರಾಹಕರು ಮೊದಲೇ ಆಭರಣಗಳನ್ನು ಆರ್ಡರ್ ಕೊಟ್ಟು ಮಾಡಿಸುತ್ತಿದ್ದಾರೆ. ಹಾಗಾಗಿ ರೆಡಿಮೇಡ್ ಜುವೆಲರಿ ಶಾಪ್‌ಗಳಲ್ಲಿ ಈ ಬಾರಿ ಆರ್ಡರ್ ತೆಗೆದುಕೊಳ್ಳುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆಯಂತೆ ಎನ್ನುತ್ತಾರೆ ಆಭರಣ ಶಾಪ್‌ವೊಂದರ ಮ್ಯಾನೇಜರ್ ದೀಪಕ್.

ಹೊಸ ಡಿಸೈನ್‌ಗಳಿಗೆ ಮಣೆ
ಇಂದಿನ ಜನರೇಷನ್ ಯುವತಿಯರು ನ್ಯೂ ಅರೈವಲ್ಸ್‌ಗೆ ಮಾನ್ಯತೆ ನೀಡುವುದು ಹೆಚ್ಚಾಗಿದೆ. ತಾವು ಧರಿಸುವ ಆಭರಣ ಹೊಸತಾಗಿರಬೇಕು ಎಂಬ ಮನೋಭಾವನೆ ಹೆಚ್ಚಾಗಿದೆ. ಇನ್ನು ಟಿನೇಜ್ ಹುಡುಗಿಯರಿಂದಿಡಿದು ವರ್ಕಿಂಗ್ ವುಮೆನ್‌ವರೆಗೂ ಕಂಟೆಂಪರರಿ ವಿನ್ಯಾಸಗಳು ಆಕರ್ಷಿಸಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರಾಧ.

ಆಭರಣಗಳ ಶಾಪ್‌ಗಳಲ್ಲಿ ಆಫರ್ಸ್ ಸುರಿಮಳೆ
ಇನ್ನು, ಆಭರಣ ಶಾಪ್‌ಗಳಲ್ಲಿ ಇದೀಗ ಆಫರ್ಸ್ ನೀಡುವುದು ಶುರುವಾಗಿದೆ. ಉದಾಹರಣೆಗೆ, ಇಂತಿಷ್ಟು ಆಭರಣ ಕೊಂಡಲ್ಲಿ ಬೆಳ್ಳಿ ಕಾಯಿನ್ ಉಚಿತ, ವಜ್ರದ ಆಭರಣ ಕೊಂಡರೇ ಚಿನ್ನದ ಪೆಂಡೆಂಟ್, ಕಾಯಿನ್ ಉಚಿತ, ಹಳೆ ಚಿನ್ನಕ್ಕೆ ಉತ್ತಮ ಬೆಲೆ ಹೀಗೆ ನಾನಾ ಬಗೆಯ ಆಫರ್‌ಗಳನ್ನು ಜ್ಯುವೆಲರಿ ಶಾಪ್‌ಗಳು ನೀಡುತ್ತಿವೆ ಎನ್ನುತ್ತಾರೆ ಗೋಲ್ಡ್ ಸಲಹೆಗಾರರು.

ತಜ್ಞರ ಅಭಿಪ್ರಾಯ
ಪ್ರತಿವರ್ಷ ಜ್ಯುವೆಲರಿ ಲೋಕದಲ್ಲಿ ಸಾಕಷ್ಟು ಡಿಸೈನ್‌ಗಳು ಮರುಕಳಿಸುತ್ತಿವೆಯಾದರೂ, ಎಂದಿಗೂ ಯಾವುದೂ ಹಳತು ಎಂದನಿಸುವುದಿಲ್ಲ. ಬದಲಿಗೆ ಇ-ಜನರೇಷನ್‌ಗೂ ಇಷ್ಟವಾಗುವ ವಿನ್ಯಾಸದಲ್ಲಿ ಬಿಡುಗಡೆಗೊಳ್ಳುತ್ತಿವೆ. ಹೊಸ ವಿನ್ಯಾಸದ ಜತೆ ಸೇರಿಕೊಳ್ಳುತ್ತಿವೆ ಎನ್ನುತ್ತಾರೆ ಜ್ಯುವೆಲರ್ಸ್ ಅಸೋಸಿಯೇಷನ್‌ನವರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Travel Fashion: ಹೀಗಿತ್ತು ನಟಿ ಪ್ರಥಮಾ ಪ್ರಸಾದ್‌ರ ಟ್ರಾವೆಲ್ ಫ್ಯಾಷನ್