Astro Tips: ಈ ಎಲ್ಲಾ ಗ್ರಹ ದೋಷಕ್ಕೆ ನವಿಲುಗರಿಯೇ ರಾಮಬಾಣ! ಹೇಗೆ ನೋಡಿ
ನವಿಲುಗರಿ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಪವಿತ್ರ ಅಲಂಕಾರ. ಕೃಷ್ಣನ ಕೊಳಲಿನ ನಾದಕ್ಕೆ ಮರುಳಾದ ನವಿಲುಗಳ ಭಕ್ತಿಯ ಸಂಕೇತವಾಗಿ ಕೃಷ್ಣನು ತನ್ನ ಮುಕುಟದಲ್ಲಿ ಧರಿಸಿದ ನವಿಲುಗರಿಯನ್ನು, ವಾಸ್ತು ದೋಷ ನಿವಾರಣೆ, ಜಾತಕ ಹಾಗೂ ಗ್ರಹ ದೋಷ ಶಮನ, ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರಲು ಸಹಾಯಕವಾದ ಮಂಗಳಕರ ವಸ್ತುವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.
ನವಿಲುಗರಿ -
ಬೆಂಗಳೂರು: ನವಿಲುಗರಿಯು( Peacock Feather) ಶ್ರೀ ಕೃಷ್ಣನಿಗೆ(Shree Krishna) ಅತ್ಯಂತ ಪ್ರಿಯವಾದ ಅಲಂಕಾರ ಮತ್ತು ಪವಿತ್ರ ವಸ್ತುಗಳಲ್ಲಿ ಒಂದಾಗಿದೆ. ಕೃಷ್ಣನ ಕೊಳಲಿನ ನಾದಕ್ಕೆ ಮರುಳಾಗಿ ನವಿಲುಗಳು ಗರಿಬಿಚ್ಚಿ ನೃತ್ಯ ಮಾಡಿದಾಗ, ಆ ಭಕ್ತಿಯನ್ನು ಸ್ಮರಣೆಯಾಗಿ ತನ್ನ ಮುಕುಟದಲ್ಲಿ ಧರಿಸಿದ್ದರಿಂದ ನವಿಲುಗರಿ ಕೃಷ್ಣನಿಗೆ ಅತೀ ಪ್ರಿಯವಾಗಿದೆ, ಮತ್ತು ಇದು ವಾಸ್ತು ದೋಷ ನಿವಾರಣೆ, ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರಲು ಸಹಾಯಕವಾಗಿದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ ಜಾತಕದ ದೋಷ, ಮನೆಯ ಗ್ರಹ ದೋಷಗಳನ್ನೂ ಸಹ ಈ ನವಿಲುಗರಿಯಿಂದ ಹೋಗಲಾಡಿಸಬಹುದು. ಹೀಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ನವಿಲುಗರಿಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಮಂಗಳಕರ ನವಿಲುಗರಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಿ, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಜೊತೆಗೆ ನವಿಲಿನ ಗರಿ ಇರುವ ಯಾವುದೇ ಮನೆಯಲ್ಲಿ ದುರದೃಷ್ಟ ಸಂಗತಿಗಳು ನಡೆಯುವುದಿಲ್ಲ ಎಂಬ ನಂಬಿಕೆ ಇದೆ.
ವಾಸ್ತು ದೋಷ ನಿವಾರಣೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲುಗರಿಗಳನ್ನು ಇಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಮತ್ತು ಲಕ್ಷ್ಮಿಯ ಅನುಗ್ರಹ ತರುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ಗ್ರಹಗಳ ದೋಷ ನಿವಾರಣೆಗೆ ಮತ್ತು ಧನಾತ್ಮಕ ಶಕ್ತಿ ತರಲು ನವಿಲುಗರಿಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಮಂಗಳ ಗ್ರಹ
ಪ್ರತಿ ಮಂಗಳವಾರ ಏಳು ನವಿಲು ಗರಿಗಳನ್ನು ತೆಗೆದುಕೊಂಡು ಅವುಗಳಿಗೆ ಕೆಂಪು ದಾರ ಕಟ್ಟಿ ಒಂದು ತಟ್ಟೆಯಲ್ಲಿ ಏಳು ವೀಳ್ಯದೆಲೆಗಳ ಜೊತೆ ಇರಿಸಬೇಕು. ಅವುಗಳ ಮೇಲೆ ಗಂಗಾಜಲ ಸಿಂಪಡಿಸಿ "ಓಂ ಭೂ ಪುತ್ರಾಯೈ ನಮಃ ಜಾಗ್ರಾಯ ಸ್ಥಾಪಾಯ ಸ್ವಾಹಾ'' ಎಂದು 21 ಬಾರಿ ಮಂತ್ರವನ್ನು ಜಪಿಸಬೇಕು. ನಂತರ, 2 ಅಶ್ವತ್ಥ ಎಲೆಗಳ ಮೇಲೆ ಅಕ್ಕಿಯನ್ನು ಹಾಕಿ, ಅದನ್ನು ಮಂಗಳಕ್ಕೆ ಅರ್ಪಿಸಿ ಮತ್ತು ಬೂಂದಿ ಪ್ರಸಾದವನ್ನು ಅರ್ಪಿಸಿದರೆ ಮಂಗಳದೋಷ ನಿವಾರಣೆಯಾಗುತ್ತದೆ.
ಬುಧ ಗ್ರಹ
ಬುಧವಾರದಂದು ನೀವು 6 ನವಿಲು ಗರಿಗಳನ್ನು ತೆಗೆದುಕೊಂಡು ಅದರ ಕೆಳಗೆ ಹಸಿರು ದಾರವನ್ನು ಕಟ್ಟಿ ಅದರ ಮೇಲೆ ಗಂಗಾಜಲವನ್ನು ಸಿಂಪಡಿಸಬೇಕು. ಬಳಿಕ ಅವುಗಳನ್ನು 6 ವೀಳ್ಯದೆಲೆಗಳನ್ನು ತಟ್ಟೆಯಲ್ಲಿ ಇಟ್ಟು, "ಓಂ ಬುಧಾಯೇ ನಮಃ ಜಾಗ್ರಾಯ ಸ್ಥಾಯ ಸ್ವಾಹಾ'' ಮಂತ್ರವನ್ನು 21 ಬಾರಿ ಜಪಿಸಬೇಕು.
Astro Tips: ಶನಿವಾರ ಆಂಜನೇಯ ಸ್ವಾಮಿಗೆ ಈ ನೈವೇದ್ಯಗಳನ್ನು ಅರ್ಪಿಸಿದರೆ ಸಂಕಷ್ಟ ನಿವಾರಣೆ ಗ್ಯಾರಂಟಿ
ಗುರು
ಗುರುವಾರದಂದು 5 ನವಿಲು ಗರಿಗಳನ್ನು ತೆಗೆದುಕೊಂಡು ಅದರ ಕೆಳಗೆ ಹಳದಿ ದಾರವನ್ನು ಕಟ್ಟಿ ಐದು ವೀಳ್ಯದೆಲೆಗಳನ್ನು ಗರಿಗಳಿರುವ ತಟ್ಟೆಯಲ್ಲಿ ಇಡಬೇಕು. ಅದಕ್ಕೆ 21 ಬಾರಿ ಗಂಗಾಜಲವನ್ನು ಅರ್ಪಿಸಿ, "ಓಂ ಬೃಹಸ್ಪೇತೇ ನಮಃ ಜಾಗರಾಯ ಸ್ಥಾಪಯ ಸ್ವಾಹಾ''ಮಂತ್ರವನ್ನು ಪಠಿಸಬೇಕು. ಹಾಗೆಯೇ ಬೇಳೆ ಹಿಟ್ಟಿನ ನೈವೇದ್ಯವನ್ನು ಗುರು ಗ್ರಹಕ್ಕೆ ಅರ್ಪಿಸಬೇಕು.
ಶುಕ್ರ ಗ್ರಹ
ಶುಕ್ರವಾರದಂದು ನಾಲ್ಕು ನವಿಲು ಗರಿಗಳನ್ನು ತೆಗೆದುಕೊಂಡು ಅದರ ಕೆಳಗೆ ಗುಲಾಬಿ ಬಣ್ಣದ ದಾರವನ್ನು ಕಟ್ಟಿ ತಟ್ಟೆಯಲ್ಲಿಡಬೇಕು, ಜತೆಗೆ ನಾಲ್ಕು ವೀಳ್ಯದೆಲೆಗಳನ್ನು ಇರಿಸಿ 21 ಬಾರಿ ಗಂಗಾಜಲವನ್ನು ಸಿಂಪಡಿಸಿ ''ಓಂ ಶುಕ್ರಾಯೈ ನಮಃ ಜಾಗ್ರಾಯ ಸ್ಥಾಪಯ ಸ್ವಾಹಾ," ಮಂತ್ರವನ್ನು ಜಪಿಸಬೇಕು. ಅದರ ನಂತರ ನೀವು ಶುಕ್ರ ದೇವರಿಗೆ ಬೆಲ್ಲ ಮತ್ತು ಕಾಳುಗಳನ್ನು ನೈವೇದ್ಯವಾಗಿ ನೀಡಬೇಕು.
ಸೂರ್ಯ ಗ್ರಹ
ಭಾನುವಾರದಂದು 9 ಗರಿಗಳನ್ನು ತೆಗೆದುಕೊಂಡು ಅದರ ಕೆಳಗೆ ಮೆರೂನ್ ಬಣ್ಣದ ದಾರವನ್ನು ಕಟ್ಟಬೇಕು, ಜೊತೆಗೆ 9 ವೀಳ್ಯದೆಲೆಗಳನ್ನು ತಟ್ಟೆಯಲ್ಲಿ ಇಡಬೇಕು. ಅದಕ್ಕೆ 21 ಬಾರಿ ಗಂಗಾಜಲವನ್ನು ಅರ್ಪಿಸಿ, "ಓಂ ಸೂರ್ಯಾಯ ನಮಃ ಜಾಗ್ರೇ ಸ್ಥಾಪಯ ಸ್ವಾಹಾ," ಮಂತ್ರವನ್ನು ಪಠಿಸಬೇಕು. ಬಳಿಕ ಸೂರ್ಯ ದೇವರಿಗೆ ಎರಡು ತೆಂಗಿನಕಾಯಿಗಳನ್ನು ಅರ್ಪಿಸಬೇಕು.
ರಾಹು ಗ್ರಹ
ಶನಿವಾರದಂದು ಸೂರ್ಯೋದಯಕ್ಕೆ ಮುನ್ನ ಎರಡು ನವಿಲು ಗರಿಗಳನ್ನು ತೆಗೆದುಕೊಂಡು ಅದರ ಕೆಳಗೆ ಕಂದು ಬಣ್ಣದ ದಾರವನ್ನು ಕಟ್ಟಿ, ಎರಡು ವೀಳ್ಯದೆಲೆಯನ್ನು ಒಂದು ತಟ್ಟೆಯಲ್ಲಿ ಇಡಬೇಕು. ಅದಕ್ಕೆ ಗಂಗಾಜಲವನ್ನು ಅರ್ಪಿಸಿ, ''ಓಂ ರಾಹವೇ ನಮಃ ಜಾಗ್ರಾಯ ಸ್ಥಾಪಯ ಸ್ವಾಹಾ'' ಎಂಬ ಮಂತ್ರವನ್ನು 21ಬಾರಿ ಪಠಿಸಬೇಕು ಮತ್ತು ನಾಲ್ಕು ಮುಖದ ದೀಪವನ್ನು ಬೆಳಗಿಸಿ ರಾಹುವಿಗೆ ಆರತಿ ಮಾಡಿ, ಸಿಹಿಯನ್ನು ನೈವೇದ್ಯ ಮಾಡಬೇಕು.
ಕೇತು ಗ್ರಹ
ಶನಿವಾರದಂದು, ಸೂರ್ಯಾಸ್ತದ ನಂತರ ಒಂದು ಗರಿಯನ್ನು ತೆಗೆದುಕೊಂಡು ಅದರ ಕೆಳಗೆ ಬೂದು ಬಣ್ಣದ ದಾರವನ್ನು ಕಟ್ಟಿ, ಒಂದು ತಟ್ಟೆಯಲ್ಲಿ ವೀಳ್ಯದೆಲೆಯ ಜೊತೆ ಇಡಬೇಕು. ಅದಕ್ಕೆ 21 ಬಾರಿ ಗಂಗಾಜಲವನ್ನು ಅರ್ಪಿಸಿ. ''ಓಂ ಕೇತವೇ ನಮಃ ಜಾಗ್ರಾಯ ಸ್ಥಾಪಯ ಸ್ವಾಹಾ," ಮಂತ್ರವನ್ನು ಪಠಿಸಬೇಕು. ನಂತರ ಕೇತುವಿಗೆ ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಕೇತು ಗ್ರಹದಿಂದಾಗುವ ಸಮಸ್ಯೆಗಳು ಪರಿಹಾರವಾಗುವುದು.