Daily Horoscope: ಶ್ರಾವಣ ಶುಕ್ರವಾರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ಶ್ರಾವಣ ಶುಕ್ರವಾರದ ಲಕ್ಷ್ಮೀ ಪೂಜೆಯ ಆರಾಧಿಸುವ ಈ ದಿನ (ಆಗಸ್ಟ್ 1)ದ ರಾಶಿ ಭವಿಷ್ಯವನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಹೀಗೆ ವಿವರಿಸಿದ್ದಾರೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಸ್ವಾತಿ ನಕ್ಷತ್ರದಿಂದಾಗಿ ಉತ್ತಮವಾದ ಫಲ ಲಭಿಸಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಕೆಲಸದಲ್ಲಿನ ಒತ್ತಡ ಬಗೆಹರಿಯಲಿದೆ. ಬಹಳ ದಿನಗಳ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ. ಮಾನಸಿಕ ನೆಮ್ಮದಿ ಇರಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಬಹಳ ಉತ್ತಮವಾದ ದಿನ. ಶತ್ರುಗಳ ಕಾಟ ಇರಲಾರದು. ಮಾನಸಿಕ ನೆಮ್ಮದಿ ಇರಲಿದೆ. ಸಾಕಷ್ಟು ಜಟಿಲ ಸಮಸ್ಯೆ ಇಂದು ಪರಿಹಾರವಾಗಲಿದೆ. ಅಂದುಕೊಂಡ ಕೆಲಸ ಕಾರ್ಯ ನಿರ್ವಿಘ್ನವಾಗಿ ಆಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರು ಇಂದು ಮಕ್ಕಳ ಬಗ್ಗೆ, ಪೋಷಕರ ಬಗ್ಗೆ ವಿಶೇಷ ಕಾಳಜಿ, ಹೆಚ್ಚಿನ ಜಾಗೃತಿ ವಹಿಸಬೇಕು. ನಿಮ್ಮ ಸ್ನೇಹಿತರಿಗೂ ನಿಮ್ಮ ಸಹಕಾರದ ಅವಶ್ಯಕತೆ ಬೀಳಲಿದ್ದು, ಅವರಿಗೆ ನೆರವಾದರೆ ನಿಮಗೂ ಒಳಿತಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಸ್ವಲ್ಪ ಕಿರಿಕಿರಿಯ ದಿನವಾಗಲಿದೆ. ಆಸ್ತಿ ಪಾಸ್ತಿ ವಿಚಾರ, ಸಂಸಾರ ತಾಪತ್ರಯ, ವೈಮನಸ್ಸು ಎಲ್ಲವೂ ಒಮ್ಮಿಂದೊಮ್ಮೆಲೆ ಆಗುವ ಸಾಧ್ಯತೆ ಇದೆ. ನಾಳೆಯ ದಿನ ಆತ್ಮವಿಶ್ವಾಸ ಹೆಚ್ಚಾಗಿ ನಿಮ್ಮೆಲ್ಲ ಸಮಸ್ಯೆ ಪರಿಹಾರ ಆಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಕಾರ್ಯ ಸಾಧನೆಯಲ್ಲಿ ಯಶಸ್ಸು ಸಿಗಲಿದ್ದು ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಈ ದಿನ ನಿಮಗೆ ಕೆಲವು ಹೆಚ್ಚುವರಿ ಜವಾಬ್ದಾರಿ ಸಿಗಲಿದ್ದು ಅದನ್ನು ಕೂಡ ಯಶಸ್ವಿಯಾಗಿ ನಿಭಾಯಿಸುವಿರಿ. ಲಕ್ಷ್ಮೀ ದೇವಿ ಹಾಗೂ ದುರ್ಗಾ ದೇವಿಯ ಆರಾಧನೆ ಮಾಡಿದರೆ ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಮನೆಯಲ್ಲಿ ಸಾಕಷ್ಟು ಪ್ರತಿಕೂಲ ವಾತಾವರಣ ಸೃಷ್ಟಿಆಗಲಿದೆ. ಕೆಲವೊಂದು ವಿಚಾರಕ್ಕೆ ಮಾನಸಿಕ ಕಿರಿಕಿರಿ ತೊಂದರೆಯನ್ನು ಅನುಭವಿಸುವ ಸಾಧ್ಯತೆ ಇದೆ. ಮನಸ್ಸನ್ನು ಹಿಡಿತದಲ್ಲಿಟ್ಟು ತಾಳ್ಮೆ ವಹಿಸಿದರೆ ನಾಳೆ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ.
ಇದನ್ನು ಓದಿ:Daily Horoscope: ಚಿತ್ತ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಬಹಳ ಅತ್ಯುತ್ತಮವಾಗಿರಲಿದೆ. ಯಾವುದೊ ಒಂದು ದೊಡ್ಡ ಸಮಸ್ಯೆ ಇಂದು ಬಹಳ ಸುಲಭವಾಗಿ ಪರಿಹಾರ ಆಗಲಿದೆ. ಯಾವುದೆ ಹೊಸ ಯೋಜನೆ ಕಾರ್ಯ ರೂಪಕ್ಕೆ ತರುವ ಮುನ್ನ ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಬಹಳ ಕಷ್ಟದ ದಿನವಾಗಲಿದೆ. ನಿಮಗೆ ತಿಳಿಯದಂತೆ ನಿಮ್ಮ ಸುತ್ತ ನಡೆಯುವ ಕೆಲವು ವಿಚಾರ ನಿಮಗೆ ಮನದಟ್ಟಾಗಲಿದೆ. ಮಿತ್ರತ್ವ ಸಂಬಂಧದಿಂದ ಕೆಲವು ಅನುಮಾನ ಮೂಡಲಿದ್ದು ಸರಿಯಾಗಿ ಮಾತು ಕತೆ ನಡೆಸಿದರೆ ಯಾವುದೇ ವೈಮನಸ್ಸು ಇರಲಾರದು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಪ್ರಶಸ್ತವಾದ ದಿನ. ಕೆಲವು ಅನಿರೀಕ್ಷಿತ ಜವಾಬ್ದಾರಿ ಹೆಚ್ಚಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು ಮನಸ್ಸಿಗೆ ಸಂತಸ ಇರಲಿದೆ. ಅಂದುಕೊಂಡಂತೆ ನಡೆಯಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಇಷ್ಟಾರ್ಥ ಸಿದ್ಧಿಯಾಗಲಿದೆ. ಕಚೇರಿ ಕೆಲಸ ಕಾರ್ಯ ಗಳಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸ್ನೇಹಿತರಿಂದ ಮನಸ್ಸಿಗೆ ಸಂತೋಷವಾಗಲಿದೆ. ದಿನಾಂತ್ಯದಲ್ಲಿ ಶುಭ ಸುದ್ದಿ ಸಿಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಮಾನಸಿಕ ಖಿನ್ನತೆ ಸಮಸ್ಯೆ ಪರಿಹಾರವಾಗಲಿದೆ. ಕಳೆದ ಕೆಲ ದಿನಗಳಿಂದ ಮನಸ್ಸಿಗೆ ಕ್ಲೇಶವಾಗಿದ್ದ ಕೆಲವು ಸಂಬಂಧಗಳು ಈಗ ಸರಿಯಾಗಲಿದೆ. ಯಾವುದೇ ಹೊಸ ಕೆಲಸ ಕಾರ್ಯ ಯೋಜನೆ ಮಾಡುವ ಮುನ್ನ ವಿಚಾರಿಸಿ ಮುನ್ನಡೆಯುವುದು ಒಳ್ಳೆಯದು ಎನ್ನಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಬಹಳ ಕ್ಲಿಷ್ಟಕರವಾಗಿದೆ. ಇಂದು ಮಿತ್ರರು ಹಾಗೂ ಕುಟುಂಬದ ನಡುವೆ ನಿಮ್ಮ ಸಂಬಂಧ ವೈಮನಸ್ಸು ಮೂಡುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಸಮಸ್ಯೆ ಇರಲಿದ್ದು ಧ್ಯಾನ , ಯೋಗ ಇತ್ಯಾದಿ ಮಾಡಿ ನಿಮ್ಮ ಮನಸ್ಸನ್ನು ಹಿಡಿತದಲ್ಲಿರಿಸಬೇಕು. ನಾಳೆ ಎಲ್ಲ ಸಮಸ್ಯೆ ಪರಿಹಾರವೂ ಆಗಲಿದೆ.