ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ನಕಾರಾತ್ಮಕತೆಯನ್ನು ದೂರ ಮಾಡುವ ಈ ಅಲಂಕಾರಿಕ ವಸ್ತುಗಳನ್ನು ಎಲ್ಲಿಡಬೇಕು ಗೊತ್ತೆ?

ಅಲಂಕಾರಕ್ಕಾಗಿ ನಾವು ಮನೆಯಲ್ಲಿ ತಂದಿಡುವ ಕೆಲವೊಂದು ವಸ್ತುಗಳು ವಾಸ್ತು ದೋಷಗಳನ್ನು ದೂರ ಮಾಡುತ್ತವೆ. ಆದರೆ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ಅಂತಹ ವಸ್ತುಗಳು ಯಾವುದು, ಅವುಗಳನ್ನು ಎಲ್ಲಿ ಇಡಬೇಕು, ಇವುಗಳ ಬಗ್ಗೆ ವಾಸ್ತು ಶಾಸ್ತ್ರ ಹೇಳುವುದು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ವಾಸ್ತು ಬದಲಿಸುತ್ತೆ ಈ ಮೂರು ಅಲಂಕಾರಿಕ ವಸ್ತುಗಳು

ಬೆಂಗಳೂರು: ಮನೆಯಲ್ಲಿರುವ ವಾಸ್ತು (Vastu for home) ದೋಷಗಳನ್ನು ಸುಲಭವಾಗಿ ದೂರ ಮಾಡಲು ಕೆಲವೊಂದು ಅಲಂಕಾರಿಕ ವಸ್ತುಗಳನ್ನು (Decorative Items) ಮನೆಯಲ್ಲಿ ತಂದು ಇಡಬಹುದು. ಇವುಗಳು ಮನೆಯ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕತೆ ನೆಲೆಸುವಂತೆ ಮಾಡುತ್ತವೆ. ಆದರೆ ಇದಕ್ಕಾಗಿ ಪಾಲಿಸಲೇ ಬೇಕಾದ ಒಂದು ನಿಯಮವಿದೆ. ವಾಸ್ತು ಶಾಸ್ತ್ರ (Vastu Shastra) ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವಿಗೂ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಹೇಳಿದೆ. ಅವುಗಳಲ್ಲಿ ವಾಸ್ತು ದೋಷವನ್ನು ದೂರ ಮಾಡುವ ಈ ಮೂರು ವಸ್ತುಗಳನ್ನು ಎಲ್ಲಿಡಬೇಕು ಎನ್ನುವುದು ಕೂಡ ಸೇರಿದೆ.

ಮನೆಯ ವಾಸ್ತುವನ್ನು ಸರಿಪಡಿಸಲು ಕೆಲವು ವಿಶೇಷ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಇದು ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕತೆ ನೆಲೆಸುವಂತೆ ಮಾಡುತ್ತದೆ. ಆದರೆ ಇವುಗಳನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ಮುಖ್ಯ.

ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತಿದ್ದರೆ ನಿರಂತರ ಒತ್ತಡ ಅಥವಾ ಆರ್ಥಿಕ ಸಮಸ್ಯೆಗಳಿದ್ದರೆ ಕೆಲವು ಸುಲಭವಾದ ವಾಸ್ತು ಪರಿಹಾರಗಳು ಸಹಾಯ ಮಾಡುತ್ತದೆ. ವಿಶೇಷವಾಗಿ ಕೆಲವು ಅಲಂಕಾರಿಕ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವ ಈ ಮೂರು ಅಲಂಕಾರಿಕ ವಸ್ತುಗಳನ್ನು ಎಲ್ಲಿ, ಹೇಗೆ ಇರಿಸಬೇಕು ಎನ್ನುವುದರ ಕುರಿತು ಪಂಡಿತ್ ಜನ್ಮೇಶ್ ದ್ವಿವೇದಿ ಜಿ ಅವರು ಹೇಳಿರುವುದು ಹೀಗೆ...

wind1

ವಿಂಡ್ ಚೈಮ್ಸ್

ವಿಂಡ್ ಚೈಮ್ಸ್ ಮನೆಯಲ್ಲಿ ಸ್ಥಾಪಿಸುವುದು ಒಳ್ಳೆಯದು ಎನ್ನುತ್ತದೆ ವಾಸ್ತು ಶಾಸ್ತ್ರ. ಯಾಕೆಂದರೆ ಇದರ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಅಲ್ಲದೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸಬೇಕು. 5 ಅಥವಾ 6 ರಾಡ್‌ಗಳಿರುವ ಲೋಹದ ವಿನ್ಯಾಸದ ಗಾಳಿ ಗಂಟೆಯು ಹೆಚ್ಚು ಪರಿಣಾಮಕಾರಿ. ಇದು ಮನೆ ಮಂದಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ.

wind4

ಆನೆ ಪ್ರತಿಮೆ

ಮನೆಯ ವಾಸ್ತು ಸರಿಯಾಗಿಲ್ಲ ಎಂದೆನಿಸಿದರೆ ಮಾರುಕಟ್ಟೆಯಲ್ಲಿ ಸಿಗುವ ಆನೆಯ ಪ್ರತಿಮೆಯನ್ನು ತಂದು ಇಡಿ. ಇದು ಜೀವನದಲ್ಲಿ ಬುದ್ಧಿವಂತಿಕೆ, ಶಕ್ತಿ ಮತ್ತು ಸ್ಥಿರತೆಯನ್ನು ತರುತ್ತದೆ. ಸಂಪತ್ತನ್ನು ಸಹ ಆಕರ್ಷಿಸುತ್ತದೆ. ಒಂದು ಜೋಡಿ ಆನೆ ಪ್ರತಿಮೆಗಳನ್ನು ಮನೆಯ ಮುಖ್ಯ ಬಾಗಿಲಿನಲ್ಲಿ ಒಳಮುಖವಾಗಿ ಇರಿಸಿ. ಅವುಗಳನ್ನು ಮಕ್ಕಳ ಕೋಣೆಯಲ್ಲಿ ಇಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಅವುಗಳನ್ನು ಕಚೇರಿ ಮೇಜಿನ ಮೇಲೆ ಇಡುವುದರಿಂದ ವೃತ್ತಿ ಬೆಳವಣಿಗೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: Actor Pratham: ಪೊಲೀಸರ ಸಮ್ಮುಖದಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನ; ದೊಡ್ಡಬಳ್ಳಾಪುರ ಹೈಡ್ರಾಮಾ

ball

ಸ್ಫಟಿಕದ ಚೆಂಡು

ಸ್ಫಟಿಕದ ಚೆಂಡು ಮನೆಯ ಶಕ್ತಿಯನ್ನು ಸಮತೋಲನಗೊಳಿಸುತ್ತದೆ, ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಸ್ಫಟಿಕದ ಚೆಂಡನ್ನು ಡ್ರಾಯಿಂಗ್ ರೂಮ್ ಅಥವಾ ಮಲಗುವ ಕೋಣೆಯ ಕಿಟಕಿಯ ಬಳಿ ಪೂರ್ವ ದಿಕ್ಕಿನಲ್ಲಿ ನೇತು ಹಾಕಬಹುದು ಅಥವಾ ಇಡಬಹುದು. ಅದನ್ನು ಆಫೀಸ್ ಕ್ಯಾಬಿನ್‌ನಲ್ಲೂ ಇರಿಸಬಹುದು. ಇದರಿಂದ ಮನೆಯಲ್ಲಿ ಸಕಾರಾತ್ಮಕತೆಯೂ ಉಳಿಯುತ್ತದೆ.