Ganesha Mantra: ಬುಧವಾರ ಈ ಗಣೇಶ ಮಂತ್ರ ಪಠಿಸಿದರೆ ಜೀವನದಲ್ಲಿ ಶುಭಫಲ ಸಿಗೋದು ಖಚಿತ
Astro Tips: ಹಿಂದೂ ಧರ್ಮದಲ್ಲಿ ಅತ್ಯಂತ ಆರಾಧಿತ ದೇವತೆಗಳಲ್ಲಿ ಗಣೇಶನು ಪ್ರಮುಖನಾಗಿದ್ದು, ‘ವಿಘ್ನಹರ’ ಎಂದೇ ಪ್ರಸಿದ್ಧನಾದ ಗಣಪತಿಯ ಪೂಜೆ ಮಾಡುವುದರಿಂದ ಭಕ್ತರ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ, ಯಶಸ್ಸು ಹಾಗೂ ಶಾಂತಿಯನ್ನು ದೊರೆಯುತ್ತದೆ. ಬುಧವಾರದಂದು ಗಣೇಶನಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಪಠಿಸಬೇಕಾದ ಗಣಪತಿ ಮಂತ್ರಗಳು ಯಾವವು? ಮತ್ತು ಅವುಗಳ ಪಠಣದಿಂದ ಯಾವ ಶುಭಫಲ ದೊರೆಯುತ್ತದೆ? ಎಂಬುದರ ಕುರಿತು ಇಲ್ಲಿದೆ ಮಾಹಿತಿ. ಗಣೇಶ ಮಂತ್ರಗಳನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ, ಕೆಲಸ ಹಾಗೂ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.
ಸಂಗ್ರಹ ಚಿತ್ರ -
ಬೆಂಗಳೂರು: ವಾರದ ಪ್ರತೀ ಬುಧವಾರವನ್ನು(Wednesday) ಗಣಪತಿಯ ಆರಾಧನೆಗೆ(Lord Ganesha Pooje) ಮೀಸಲಿರಿಸಲಾಗಿದ್ದು, ಈ ದಿನ ವಿಘ್ನ ನಿವಾರಕನ ಪೂಜಿಸಿದ್ದರೆ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಗಣೇಶನ ಪೂಜೆಯಿಂದ ಬುದ್ಧಿ, ಐಶ್ವರ್ಯ ಮತ್ತು ಯಶಸ್ಸು ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದ್ದು. ಪ್ರಸ್ತುತ ನಡೆಯುತ್ತಿರುವ ಕಾರ್ತಿಕ ಮಾಸವು ದೇವತಾ ಆರಾಧನೆಗೆ ಅತ್ಯಂತ ಪವಿತ್ರವಾಗಿದೆ ವಿಶೇಷವಾಗಿ ಶಿವ ಹಾಗೂ ವಿಷ್ಣು ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಕಾರ್ತಿಕ ಮಾಸದ ಬುಧವಾರದಂದು ಕೆಲವು ವಿಶೇಷ ಕ್ರಮಗಳನ್ನು ಪಾಲಿಸುವುದರಿಂದ, ಜೀವನದ ಅಡೆತಡೆಗಳು, ಉದ್ಯೋಗ-ವ್ಯಾಪಾರದಲ್ಲಿನ ಅಡಚಣೆಗಳು ಹಾಗೂ ಕೌಟುಂಬಿಕ ಕಲಹಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಇದರೊಂದಿಗೆ ಗಣಪತಿಗೆ ಅತ್ಯಂತ ಪ್ರಿಯವಾದ ಬುಧವಾರದ ದಿನದಂದು ಗಣೇಶನ ಮಂತ್ರಗಳನ್ನು(Ganesha Manthra) ಭಕ್ತಿಭಾವದಿಂದ ಪಠಿಸಿದರೆ, ನಮ್ಮ ಮನಸ್ಸು ಶಾಂತವಾಗುತ್ತದೆ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ ಮತ್ತು ಎಲ್ಲ ಅಡೆತಡೆಗಳು ದೂರವಾಗುತ್ತವೆ.
ಗಣೇಶ ಮಂತ್ರಗಳನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ, ಕೆಲಸ ಹಾಗೂ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗುತ್ತದೆ. ಆದ್ದರಿಂದ ಬುಧವಾರದಂದು ಈ ಗಣಪತಿ ಮಂತ್ರಗಳನ್ನು ನಿಷ್ಠೆಯಿಂದ ಪಠಿಸಿದರೆ, ನಿಮ್ಮ ಮನದ ಆಸೆಗಳು ನೆರವೇರುತ್ತವೆ ಮತ್ತು ಜೀವನದಲ್ಲಿ ಶುಭಫಲ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ತುಂಬಿಕೊಳ್ಳಬೇಕೆಂದರೆ? ಎಲ್ಲಾ ಆಸೆಗಳು ನೆರವೇರಬೇಕೆ..? ಹಾಗಾದರೆ ಪ್ರತಿ ಬುಧವಾರ ಈ ಗಣಪತಿ ಮಂತ್ರಗಳನ್ನು ಪಠಿಸಿ.
ಮೊದಲನೇ ಮಂತ್ರ
''ಓಂ ಗಂ ಗಣಪತಯೇ ನಮಃ''
ಇದು ಅತ್ಯಂತ ಗಣೇಶ ಮಂತ್ರವಾಗಿದ್ದು, ನೋಡಲು ಮತ್ತು ಪಠಿಸಲು ಇದು ಸಾಮಾನ್ಯವೆನಿಸದಿರೂ ಇದರ ಶಕ್ತಿ ಅಪಾರ. ಆದ್ದರಿಂದ ಈ ಮಂತ್ರಗಳನ್ನು ಮರೆಯದೇ ಪಠಿಸಬೇಕು.
ಈ ಸುದ್ದಿಯನ್ನು ಓದಿ: Vastu Tips: ಮಹಡಿ ಮೆಟ್ಟಿಲುಗಳ ಕೆಳಗೆ ಇವು ಇರಲೇಬಾರದು
ಎರಡನೇ ಗಣೇಶ ಮಂತ್ರ
'ಶ್ರೀ ಗಣೇಶಾಯ ನಮಃ'
ಎಲ್ಲಾ ದೇವರು ಮತ್ತು ದೇವತೆಗಳಲ್ಲಿ ಮೊದಲ ಪೂಜನೀಯ ದೇವರು ಎನ್ನುವ ಸ್ಥಾನವನ್ನು ಗಣಪತಿ ಪಡೆದಿದ್ದಾನೆ. ಹಾಗಾಗಿ ಕಾರ್ತಿಕ ಮಾಸದ ಬುಧವಾರವಾಗಿರಬಹುದು ಅಥವಾ ಇತರೆ ಮಾಸದ ಯಾವುದೇ ಬುಧವಾರವಾಗಿರಬಹುದು ಗಣಪತಿಯ ಈ ಮಂತ್ರವನ್ನು 7 ಬುಧವಾರಗಳ ಕಾಲ ಪಠಿಸುವುದರಿಂದ, ಶುಭ ಫಲಿತಾಂಶಗಳು ಸಿದ್ಧಿಸುವುದರೊಂದಿಗೆ ಬುಧ ದೋಷವೂ ನಿವಾರಣೆ ಆಗುತ್ತದೆ.
ಮೂರನೇ ಮಂತ್ರ
ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಈ ಮಂತ್ರವನ್ನು ಪಠಿಸುವುದರಿಂದ ಗಣೇಶನ ಕೃಪೆಯನ್ನು ಪಡೆಯಲು ಸಹಕಾರಿಯಾಗುತ್ತದೆ. ಜೊತೆಗೆ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುವುದರ ಜೊತೆಗೆ, ನೀವು ಕೈಗೊಂಡಿರುವ ಮಹತ್ವದ ಕಾರ್ಯಗಳಲ್ಲಿ ಯಶಸ್ಸು ಅನ್ನು ತಂದುಕೊಡುತ್ತದೆ.
ನಾಲ್ಕನೇ ಮಂತ್ರ
ವಕ್ರತುಂಡ ಮಹಾಕಾಯ
ಸೂರ್ಯ ಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದಾ
ಗಣೇಶನ ಪೂಜೆಯ ವೇಳೆ ಈ ಮಂತ್ರವನ್ನು ಪಠಿಸದೇ ಇದ್ದರೆ ಪೂಜೆ ಅಪೂರ್ಣವದಂತೆ. ಈ ಮಂತ್ರವನ್ನು ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ಗಣೇಶನು ತಕ್ಷಣ ಕೃಪೆ ತೋರಿಸುತ್ತಾನೆ. ಇದು ನಿಮ್ಮ ಎಲ್ಲ ಕೆಲಸಗಳಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಶೀಘ್ರವಾಗಿ ಫಲಗಳು ಸಿಗುತ್ತದೆ.
ಐದನೇ ಮಂತ್ರ
''ಓಂ ನಮೋ ವಿಘ್ನರಾಜಾಯ, ಸರ್ವಸೌಖ್ಯ ಪ್ರದಾಯಿನೇ
ದುಷ್ಯಾರಿಷ್ಠ ವಿನಾಶಾಯ ಪರಾಯ ಪರಮಾತ್ಮನೇ
ಲಂಬೋದರಂ ಮಹಾವೀರ್ಯಂ, ನಾಗಯಜ್ಞೋಪಯಜ್ಞೋಭಿತಂ
ಅರ್ಧಚಂದ್ರ ಧರಂ ದೇಹಂ ವಿಘ್ನವ್ಯೂಹ ವಿನಾಶನಂ
ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೌಂ ಹೇರಂಬಾಯ ನಮೋ ನಮಃ
ಸರ್ವ ಸಿದ್ಧಿ ಪ್ರದೋಸಿ ತ್ವಂ ಸಿದ್ಧಿ ಬುದ್ಧಿ ಪ್ರದೋ ಭವಂ
ಚಿಂತಿತಾರ್ಥಂ ಪ್ರದಸ್ತವಂ ಹೀಂ, ಸತತಂ ಮೋದಕ ಪ್ರಿಯಂ
ಸಿಂಧೂರರೂಣ ವಸ್ತ್ರೈಶ್ಚ ಪೂಜಿತೋ ವರದಾಯಕಃ
ಇದಂ ಗಣಪತಿ ಸ್ತೋತ್ರಂ ಯ ಪಠೇದ್ ಭಕ್ತಿಮಾನನರಃ
ತಸ್ಯ ದೇಹಂ ಚ ಗೇಹಂ ಚ ಸ್ವಯಂ ಲಕ್ಷ್ಮೀ ನಿರ್ಜುಂಜತಿ