ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 7th: ದಿನ ಭವಿಷ್ಯ: ಕೃತಿಕಾ ನಕ್ಷತ್ರದ ಅಧಿಪತಿ ರವಿಯಿಂದ ಈ ರಾಶಿಗೆ ಆರ್ಥಿಕ ಲಾಭ- ಸಂಸಾರದಲ್ಲಿ ನೆಮ್ಮದಿ!.

ನಿತ್ಯ ಭವಿಷ್ಯ ನವೆಂಬರ್‌ 07, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ದ್ವಿತೀಯ ತಿಥಿ, ಕೃತಿಕಾ ನಕ್ಷತ್ರದ ನವೆಂಬರ್ 7ನೇ ತಾರೀ‌ಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ದಿನ ಭವಿಷ್ಯ-  ಶುಕ್ರವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ದಿನ ಭವಿಷ್ಯ -

ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಕೃತಿಕಾ ನಕ್ಷತ್ರದ ಅಧಿಪತಿ ರವಿ ಆಗಿದ್ದಾನೆ. ಆದ್ದರಿಂದ ಹೆಚ್ಚಿನವರಿಗೆ ಅಹಂಕಾರದ ಭಾವನೆ ಹೆಚ್ಚು ಉಂಟಾಗುವ ಸಾಧ್ಯತೆ ಇದೆ. ಮೇಷ ರಾಶಿ ಅವರು ಇಂದು ಮನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಮನೆಯವರ ಹಿತಾ ಶಕ್ತಿ, ನೆಮ್ಮದಿಯನ್ನು ನೀವೇ ಇಂದು ಕಾಪಾಡಿ ಕೊಳ್ಳಬೇಕಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಮನಸ್ಸಿಗೆ ಕ್ಷೇಷ ಉಂಟಾಗುವ ಸಾಧ್ಯತೆ ಇರುತ್ತದೆ.‌ ಮಧ್ಯಾಹ್ನ ಬಳಿಕ ಎಲ್ಲ ವಿಚಾರಗಳು ನಿಮ್ಮ ಪರವಾಗಿಯೇ ಇರುತ್ತದೆ. ಇದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಶತ್ರುಗಳಿಂದ ತೊಂದರೆ ಉಂಟಾಗಬಹುದು. ನಿಮ್ಮ ಸ್ನೇಹಿತರೆ ನಿಮಗೆ ಇಂದು ಶತ್ರುಗಳು ಆಗಬಹುದು. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಗಳು ಇಂದು ಬೇಡ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ಕೂಡ ಕಾರ್ಯಕ್ಷೇತ್ರದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿಯಾಗಲಿದ್ದು ಮಿತ್ರರಿಂದ ಅತೀ ಹೆಚ್ಚಿನ ಸಂತೋಷ ಸಿಗಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನ ವರೆಗೂ ಯಾಕೋ ಅದೃಷ್ಟ ಸರಿ ಇಲ್ಲ ಎನ್ನುವ ಭಾವನೆ ಕಾಡಬಹುದು. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ.

ಇದನ್ನು ಓದಿ:Vastu Tips: ಮನೆಯಲ್ಲಿ ಗೂಬೆ ವಿಗ್ರಹ ಇಡಬಹುದೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಮಧ್ಯಾಹ್ನವರೆಗೂ ಕೂಡ ನಾನಾ ಕ್ಷೇಷ ಕ್ಲಿಷ್ಟಕರವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗಲಿದ್ದು ಭಾಗ್ಯೋದಯವಾದ ವಾಗುತ್ತದೆ. ಭಗವಂತನ ಹಾಗೂ ಹಿರಿಯರ ಆಶೀರ್ವಾದ ನಿಮಗೆ ಸಿಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಎಲ್ಲವೂ ನಿಮ್ಮ ಪರವಾಗಿ ಇರುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ಬೇಸರ ತರುವ ಸಂದರ್ಭ ಬರಬಹುದು‌. ಪ್ರೀತಿ ಪಾತ್ರರಿಂದ ನೆಮ್ಮದಿ ಸಿಗದೆ ಇರಬಹುದು. ಹಾಗೆಯೇ ಆತಂಕ ಕೂಡ ಎದುರಾಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಸಾಮಾಜಿಕ ವ್ಯವಹಾರದಲ್ಲಿ ನೆಮ್ಮದಿ ಪ್ರಾಪ್ತಿಯಾಗಲಿದೆ. ಮಧ್ಯಾಹ್ನ ಬಳಿಕ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ. ಸಂತೋಷ ಕೂಡ ಸಿಗಲಿದೆ‌

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಇಂದು ಕ್ಲಿಷ್ಟಕರವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿಯಾಗಲಿದ್ದು ಶತ್ರುನಾಶ ಆಗಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪ್ರಯಗಳು ಹೆಚ್ಚಾಗ ಬಹುದು. ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿಶಕ್ತಿಯಿಂದ ಎಲ್ಲವನ್ನು ನೀವು ಉಪಯೋಗಿಸಿಕೊಂಡು ಯಶಸ್ಸು ಕಾಣುತ್ತೀರಿ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಮಧ್ಯಾಹ್ನವರೆಗೂ ಕೂಡ ಎಲ್ಲವೂ ನಿಮ್ಮ ಪರವಾಗಿಯೇ ಇರುತ್ತದೆ. ಮಧ್ಯಾಹ್ನ ಬಳಿಕ ಸ್ವಲ್ಪ ಜವಾಬ್ದಾರಿ ಹೆಚ್ಚಾಗಬಹುದು. ಆಸ್ತಿ ಪಾಸ್ತಿ ವಿಚಾರವಾಗಿ ಹಾಗೂ ಮನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಮಧ್ಯಾಹ್ನವರೆಗೂ ಸಂಸಾರದ ಬಗ್ಗೆ ತಾಪತ್ರಯಗಳು ಹಾಗೂ ಜವಾಬ್ದಾರಿ ಹೆಚ್ಚು ಇರುತ್ತದೆ. ಮಧ್ಯಾಹ್ನ ಬಳಿಕ ಮುಖ್ಯವಾದ ತಿರುವು ಉಂಟಾಗಿ ವಿಶ್ವಾಸ ಹೆಚ್ಚಾ ಗುತ್ತದೆ. ನಿಮ್ಮ ಮಾತಿನ ಮೂಲಕ ಎಲ್ಲವನ್ನು ಇಂದು ನೀವು ಗೆಲ್ಲಬಹುದು.