ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಗೂಬೆ ವಿಗ್ರಹ ಇಡಬಹುದೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?

Vastu Tips and Owl: ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ತರುವ ಪ್ರತಿಯೊಂದು ವಸ್ತುಗಳನ್ನು ಇಡಲು ಸೂಕ್ತ ಸ್ಥಳವಿದ್ದು, ಅವುಗಳನ್ನು ತಪ್ಪಾದ ಸ್ಥಳದಲ್ಲಿ  ಇಡುವುದು ಸಮಸ್ಯೆಗೆ ಆಹ್ವಾನ ಕೊಟ್ಟಂತೆ ಎಂದು ಹೇಳಲಾಗುತ್ತದೆ. ಇನ್ನು ಮನೆಗೆ ತರುವ ಹಲವು ಗೊಂಬೆ, ಪ್ರತಿಮೆ, ಫೋಟೋಗಳ ಪೈಕಿ ಗೂಬೆಯೂ ಒಂದಾಗಿದ್ದು, ಕೆಲವೊಮ್ಮೆ ಉಡುಗೊರೆಯಾಗಿ ಇಂತಹ ಪ್ರತಿಮೆಗಳು ನಿಮ್ಮನ್ನು ಅರಸಿ ಬರುತ್ತದೆ. ಹಾಗಾದ್ರೆ ಮನೆಯಲ್ಲಿ ಗೂಬೆ ಪ್ರತಿಮೆ ಅಥವಾ ಫೋಟೋವನ್ನು ಇಡಬಹುದಾ..? ಇಟ್ಟರೆ ವಾಸ್ತು ಪ್ರಕಾರ ಎಲ್ಲಿ ಇಡಬೇಕು ಗೊತ್ತಾ? ಈ ಕುರಿತು ಮಾಹಿತಿ ಇಲ್ಲಿದೆ.

ಮನೆಯಲ್ಲಿ ಗೂಬೆ ಫೋಟೋ ಇಟ್ರೆ ಅದೃಷ್ಟಾನಾ?

ಸಾಂದರ್ಭಿಕ ಚಿತ್ರ -

Profile
Sushmitha Jain Nov 6, 2025 6:00 AM

ಬೆಂಗಳೂರು: ಮನೆ ಕಟ್ಟುವಾಗ ಹೇಗೆ ವಾಸ್ತು(Vastu) ಬೇಕೇ ಬೇಕೊ ಹಾಗೂ ಮನೆ ನಿರ್ವಹಣೆಯ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಅದರಲ್ಲಿಯೂ ನಮ್ಮ ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ(Vastu Shasthra) ಹೆಚ್ಚಿನ ಮಹತ್ವ ಇದ್ದು, ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದೂ ವಸ್ತು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ(Vastu Tips). ಅಂತಹ ಸಂದರ್ಭಗಳಲ್ಲಿ ವಸ್ತುಗಳನ್ನು ಇರಿಸುವ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಮುಖ್ಯ. ವಾಸ್ತು ನಿಯಮಗಳನ್ನು ನಿರ್ಲಕ್ಷಿಸುವುದು ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.

ಆದರೆ ಕೆಲವರು ಈ  ವಾಸ್ತುವಿನ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಮುಖ್ಯವಾಗಿ ಮನೆಯ ಶೋಕೇಸ್ ತುಂಬಿಸಲು ತರುವಂತಹ ನಾನಾ ನಾನಾ ನಮೂನೆಯ ಪ್ರತಿಮೆಗಳು, ಫ್ಯಾನ್ಸಿ ಐಟಂಗಳು, ಗಾಜಿನ ವಸ್ತುಗಳು. ಇದಕ್ಕೆ ಈ ಪ್ರಾಣಿ ಪಕ್ಷಿಗಳ ಫೋಟೋ - ಪ್ರತಿಮೆಗಳು ಹೊರತಾಗಿಲ್ಲ. ಆದರೆ ಮನೆಯ ಅಂದವನ್ನು ಹೆಚ್ಚಿಸಲು ತರುವ ಇಂತಹ ಶೋ ಫೀಸ್  ಗಳಿಂದ ಒಳ್ಳೆದಾಗುತ್ತದೆಯೇ ಅಥವಾ ಕೆಡಕು ಆಗುತ್ತದೆಯೇ ಎಂದು ಹಿಂದುಮುಂದು ಯೋಚಿಸದೇ ತಂದು ಇಟ್ಟುಬಿಡುತ್ತೇವೆ. 

ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ತರುವ ಪ್ರತಿಯೊಂದು ವಸ್ತುಗಳನ್ನು ಇಡಲು ಸೂಕ್ತ ಸ್ಥಳವಿದ್ದು, ಅವುಗಳನ್ನು ತಪ್ಪಾದ ಸ್ಥಳದಲ್ಲಿ  ಇಡುವುದು ಸಮಸ್ಯೆಗೆ ಆಹ್ವಾನ ಕೊಟ್ಟಂತೆ ಎಂದು ಹೇಳಲಾಗುತ್ತದೆ. ಇನ್ನು ಮನೆಗೆ ತರುವ ವಿವಿಧ ಪ್ರತಿಮೆಗಳ ಪೈಕಿ ಗೂಬೆಯೂ ಒಂದಾಗಿದ್ದು, ಕೆಲವೊಮ್ಮೆ ಉಡುಗೊರೆಯಾಗಿ ಇಂತಹ ಪ್ರತಿಮೆಗಳು ನಿಮ್ಮನ್ನು ಹರಸಿ ಬರುತ್ತದೆ ಹಾಗಾದ್ರೆ ಮನೆಯಲ್ಲಿ ಗೂಬೆ ಪ್ರತಿಮೆ ಅಥವಾ ಫೋಟೋವನ್ನು ಇಡಬಹುದಾ..? ಇಟ್ಟರೆ ವಾಸ್ತು  ಎಲ್ಲಿ ಇಡಬೇಕು ಗೊತ್ತಾ? ಈ ಕುರಿತು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ.

ಮನೆಯಲ್ಲಿ ಗೂಬೆ ಇಡಬಹುದೇ..?

ಮನೆಯಲ್ಲಿ ಗೂಬೆಯ ಪ್ರತಿಮೆಯನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಸಂಪತ್ತು, ಪ್ರಗತಿ, ಸಂತೋಷವನ್ನು ತರುತ್ತದೆ. ಗೂಬೆಯು ಸಂಪತ್ತಿನ ಸಂಕೇತವಾಗಿರುವುದರಿಂದ,  ಮನೆಯಲ್ಲಿನ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ.

ಈ ಸುದ್ದಿಯನ್ನು ಓದಿ: Viral Video: ಮಕ್ಕಳಿಗೆ ಆಟ ಇಲ್ಲ... ಪಾಠ ಇಲ್ಲ... ಟೀಚರ್‌ ಕಾಲಿಗೆ ಮಸಾಜ್ ಮಾಡೋದೊಂದೇ ಕೆಲಸ- ವಿಡಿಯೊ ನೋಡಿ

ಈ ದಿಕ್ಕು ಸೂಕ್ತ

ವಾಸ್ತು ಶಾಸ್ತ್ರದ ಪ್ರಕಾರ ಗೂಬೆ ಮೂರ್ತಿ ಇಡಲು ಮನೆಯ ವಾಯುವ್ಯ ದಿಕ್ಕು ಅತ್ಯಂತ ಸೂಕ್ತವಾಗಿದ್ದು, ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಿದಂತೆ ಇದು ನೋಡಿಕೊಳ್ಳಲಿದ್ದು, ಮುಖ್ಯ ಬಾಗಿಲಿಗೆ ಗೂಬೆ ಮುಖ ಇರುವಂತೆ ಆ ಮೂರ್ತಿಯನ್ನು ಇಡಿ. 
ಇದು ನಿಮ್ಮ ಮನೆಗೆ ಯಾವುದೇ ತರಹದೇ ದೃಷ್ಟಿ ಆಗದಂತೆ ಜೊತೆಗೆ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. 

ಪ್ರತಿಮೆ ಹೀಗಿರಲಿ 

ಲಕ್ಷ್ಮಿ ದೇವಿಯ ವಾಹನ ಆಗಿರುವ ಗೂಬೆಗೆ  ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಸ್ಥಾನವಿದ್ದು, ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಶುಭ ಫಲಗಳು ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೀವೂ ನಿಮ್ಮ ಮನೆಯಲ್ಲಿ ಗೂಬೆಯ ಪ್ರತಿಮೆ ಅಥವಾ ಫೋಟೋ ಇಟ್ಟುಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದರೆ  ಮಹಾಲಕ್ಷ್ಮಿಯೊಂದಿಗೆ ಇರುವ ಗೂಬೆಯ ಚಿತ್ರವನ್ನು ಇಟ್ಟುಕೊಳ್ಳಬಹುದು. ಆದರೆ ಎಂದಿಗೂ ಒಂಟಿ ಗೂಬೆಯ ಚಿತ್ರ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವಲ್ಲ.
ಇನ್ನು ಇದರ ಹೊರತಾಗಿ ನೀವು ಕೆಲಸ ಮಾಡುವ ಕಚೇರಿ ಅಥವಾ ಅಂಗಡಿಗಳಲ್ಲಿ ನೀವು ಕೂರುವ ಟೇಬಲ್ ಬಳಿ ಗೂಬೆಯ ಮೂರ್ತಿ ಇಟ್ಟರೆ ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಇದರ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮವಾಗಲಿದ್ದು, ಹಣಕಾಸಿನ ಸಮಸ್ಯೆಗಳು ನಿವಾರಣೆಗೊಳ್ಳಲಿದೆ.