ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಶುಕ್ರವಾರ ಲಕ್ಷ್ಮಿ ದೇವಿಯನ್ನ ಹೀಗೆ ಪೂಜೆ ಮಾಡಿದ್ರೆ ನಿಮ್ಮ ಮನೆಯಲ್ಲಿ ಸಂಪತ್ತು ಅಭಿವೃದ್ಧಿಯಾಗುತ್ತದೆ

Worship Goddess Lakshmi: ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಪಡೆದು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎಂಬುದು ಪ್ರತಿಯೋರ್ವರ ಆಸೆ ಆಗಿರುತ್ತದೆ. ಅದರಲ್ಲೂ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಮೆಚ್ಚಿಸಲು ಶುಕ್ರವಾರ ತುಂಬಾನೇ ಪ್ರಶಸ್ತವಾದ ದಿನ. ಈ ದಿನ ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣ ಮತ್ತು ಸಮೃದ್ಧಿ ನಿಮ್ಮದಾಗುತ್ತದೆ. ಹಾಗೂ ಎಲ್ಲಾ ಕಷ್ಟಗಳು ದೂರಾಗುತ್ತದೆ.

ಶುಕ್ರವಾರದಂದು ಲಕ್ಷ್ಮಿ ಪೂಜೆ ಹೀಗೆ ಮಾಡಿ

ಶುಕ್ರವಾರ ಲಕ್ಷ್ಮೀ ದೇವಿಯನ್ನು ಪೂಜಿಸಿ(ಸಂಗ್ರಹ ಚಿತ್ರ) -

Profile
Sushmitha Jain Nov 7, 2025 6:00 AM

ಹಿಂದೂ ಧರ್ಮದಲ್ಲಿ, ಪ್ರತಿಯೊಂದು ದಿನವನ್ನೂ ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಯ ಆರಾಧನೆ ನಡೆಯುತ್ತದೆ. ಲಕ್ಷ್ಮಿ ದೇವಿಯನ್ನು ಭಕ್ತರು ಪೂಜಿಸಿ, ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಶುಕ್ರವಾರ(Friday)ವನ್ನು ಲಕ್ಷ್ಮಿ ದೇವಿ(Goddess Lakshmi)ಗೆ ಅರ್ಪಿಸಲಾಗಿದ್ದು, ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುವುದಲ್ಲದೆ ಸಂಪತ್ತು ಕೂಡ ಬರುತ್ತದೆ. ಅದರಲ್ಲೂ ಲಕ್ಷ್ಮಿ ದೇವಿಯ ಆರಾಧನೆಗೆ ಶುಕ್ರವಾರ ಪ್ರಾಶಸ್ತವಾಗಿದ್ದು, ಈ ದಿನ ದೇವಿಯ ಆರಾಧನೆ ಮಾಡಿದರೆ ನಮ್ಮ ಕನಸು ನನಸಾಗುತ್ತದೆ. ಆದರೆ ದೇವಿಯ ಆರಾಧನೆ ಮಾಡಲು ಸಹ ಒಂದು ವಿಧಾನವಿದ್ದು, ಗ್ರಂಥಗಳಲ್ಲಿ, ಶಾಸ್ತ್ರಗಳಲ್ಲಿ ಈ ಬಗ್ಗೆ ಉಲ್ಲೇಖಿತವಾಗಿದೆ. ನೀವು ಶುಕ್ರವಾರದಂದು ಈ ಕೆಲವು ಕ್ರಮಗಳನ್ನು(Astro Tips) ಪಾಲಿಸುವುದರಿಂದ, ನೀವು ಹಣದ ಸಮಸ್ಯೆಯಿಂದ ಮುಕ್ತಿಯನ್ನು ಪಡೆದು ಕೊಳ್ಳಬಹುದಾಗಿದ್ದು, ಲಕ್ಷ್ಮಿ ದೇವಿಯು ಶೀಘ್ರವಾಗಿ ಒಲಿಯುತ್ತಾಳೆ ಮತ್ತು ಮನೆಯಲ್ಲಿ ಯಾವುದೇ ಕೊರತೆ ಕಾಣಬರುವುದಿಲ್ಲ ಎಂಬ ನಂಬಿಕೆಯಿದೆ. ಆ ವಿಶೇಷ ನಿಯಮಗಳೇನು ಎಂಬುದನ್ನು ಇಂದು ತಿಳಿದುಕೊಳ್ಳೋಣ...

ಸಹಸ್ರನಾಮ ಪಠಿಸಿ

ಪ್ರತಿ ಶುಕ್ರವಾರ ತಪ್ಪದೇ ಶ್ರೀ ಗೋಪಾಲ ಸ್ವಾಮಿಯ ಸಹಸ್ರನಾಮನ್ನು ಪಠಿಸಬೇಕು. ಈ ನಿಯಮವನ್ನು ಪಾಲಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾ ಆಗಲಿದ್ದು, ವ್ಯವಹಾರಿಕ ನಷ್ಟ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಜೊತೆಗೆ ಇದು ನಿಮ್ಮ ಮನೆಯಲ್ಲಿ ಸಮೃದ್ಧಿ-ಸಂಪತ್ತು ಹೆಚ್ಚಾಗುವಂತೆ ಮಾಡಲಿದ್ದು, ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯೂ ಪ್ರಸನ್ನಳಾಗುತ್ತಾಳೆ ಜೊತೆಗೆ ಆಕೆಯ ಕೃಪೆ ನಿಮಗೆ ದೊರೆಯಲಿದೆ.

ಈ ಸುದ್ದಿಯನ್ನು ಓದಿ: Viral Video: ರಸ್ತೆಯಲ್ಲೇ ಮಹಿಳೆಯ ದುಪ್ಪಟ್ಟ ಎಳೆದು ಹಲ್ಲೆ; ವಿಡಿಯೋ ವೈರಲ್

ಈ ಲಕ್ಷ್ಮಿ ಮಂತ್ರವನ್ನು ಪಠಿಸಿ:

ಶುಕ್ರವಾರ ಸಂಜೆ ವೇಳೆ ಲಕ್ಷ್ಮೀ ದೇವಿಯನ್ನು ಪೂಜಿಸಿ, 'ಏಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯೈ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ' ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ ಮತ್ತು ಮಂತ್ರದ ಪ್ರತಿ ಪಠಣದಲ್ಲೂ ಒಂದೊಂದು ಕಮಲದ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಅಂದರೆ 108 ಬಾರಿ ಮಂತ್ರವೆಂದರೆ 108 ಕಮಲದ ಹೂವುಗಳು ಅರ್ಪಿಸಿ. ಶುಕ್ರವಾರ ಇದನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ದಯೆ ತೋರುತ್ತಾಳೆ ಮತ್ತು ನಿಮ್ಮೆಲ್ಲಾ ಹಣದ ಸಮಸ್ಯೆಯನ್ನು ದೂರಾಗಿಸುತ್ತಾಳೆ.

ಗೋಮತಿ ಚಕ್ರ

ಹಾಗೇ ಶುಕ್ರವಾರದಂದು, ಓಂ ಲಕ್ಷ್ಮೀ ನಮಃ ಎಂಬ ಮಂತ್ರವನ್ನು ಪಠಿಸಿ ಅಭಿಷೇಕ ಮಾಡಿ. ನಂತರ ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ಅದನ್ನು ಲಕ್ಷ್ಮಿಯ ಮುಂದೆ ಇಟ್ಟು ಪೂಜಿಸಿ. ನಂತರ ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ರಹಸ್ಯವಾಗಿ ಇಡಿ. ಇದರಿಂದ ವ್ಯಾಪಾರ ವೃದ್ಧಿಸುತ್ತದೆ. ಸಾಲ ತೆಗೆದುಕೊಳ್ಳುವ ಅಗತ್ಯ ಎದುರಾಗುವುದಿಲ್ಲ. ಆದರೆ, ಈ ಕೆಲಸವನ್ನು ಮಾಡುವಾಗ ಯಾರು ನಿಮ್ಮನ್ನು ನೋಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಕೆಂಪು ಹೂವಿನ ಹಾರ ಅರ್ಪಿಸಿ

ಶುಕ್ರವಾರದ ದಿನದಂದು ರಾತ್ರಿ ಅಷ್ಟ ಲಕ್ಷ್ಮಿ ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ನಿಮಗೆಂದು ಎದುರಾಗುವುದಿಲ್ಲ. ಅಷ್ಟ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಕೆಂಪು ಹೂವಿನ ಹಾರವನ್ನು ಆಕೆಗೆ ಅರ್ಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಈ ಪರಿಹಾರದಿಂದ ಹಣದ ಕೊರತೆ ಎದುರಾಗುವುದಿಲ್ಲ ಮತ್ತು ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.

ಶುಕ್ರವಾರದ ದಿನದಂದು ಈ ಮೇಲಿನ ನಾಲ್ಕು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ನಮ್ಮೆಲ್ಲಾ ಹಣಕಾಸಿನ ಸಮಸ್ಯೆಗಳು ದೂರಾಗುತ್ತದೆ. ಹಾಗೂ ಜೀವನದಲ್ಲಿ ಧನ, ಧಾನ್ಯಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ಕಾಪಾಡುತ್ತದೆ. ಈ ದಿನ ನಾವು ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆ ಅಷ್ಟ ಲಕ್ಷ್ಮಿಯರನ್ನು ಕೂಡ ಪೂಜಿಸಬಹುದು.