Daily Horoscope: ಮೃಗಶಿರ ನಕ್ಷತ್ರದ ಈ ದಿನ ನಿಮ್ಮ ಭವಿಷ್ಯ ಹೇಗಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ, ಮೃಗಶಿರ ನಕ್ಷತ್ರದ ಸೋಮವಾರ ಪ್ರತಿಯೊಂದು ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Daily Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಹೀಗೆ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಮೃಗಶಿರ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ಗೋಜು, ಹಣಕಾಸಿನ ಬಗ್ಗೆ ಹಲವು ಯೋಚನೆಗಳು ಕಾಡುತ್ತಿರುತ್ತವೆ. ಆದರೆ ಇದಕ್ಕೆಲ್ಲ ಸದ್ಯದಲ್ಲೆ ಪರಿಹಾರ ಸಿಗಲಿದ್ದು ಬಹಳ ಸಂತೋಷದಿಂದ ದಿನ ಕಳೆಯಲಿದ್ದೀರಿ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೂ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ಎರಡು ದಿನಗಳವರೆಗೂ ಇದ್ದ ತೊಂದರೆಗಳು ಪರಿಹಾರವಾಗುತ್ತದೆ. ಮಧ್ಯಾಹ್ನ ಬಳಿಕ ಕುಟುಂಬದ ಕಡೆ ಹೆಚ್ಚಿನ ಗಮನ ಕೊಟ್ಟು ಅವರ ತೊಂದರೆಗಳನ್ನು ಕೂಡ ಬಗೆಹರಿಸಬೇಕಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನ ವರೆಗೆ ನಾನಾ ರೀತಿಯ ಕ್ಷೇಷ ಇರುತ್ತದೆ. ಮಧ್ಯಾಹ್ನ ಬಳಿಕ ಎಲ್ಲವೂ ತಿಳಿಯಾಗಿ ಮನಸ್ಸಿಗೆ ಒಂದು ಮಾರ್ಗ ದರ್ಶನ ಪ್ರಾಪ್ತಿ ಯಾಗಲಿದೆ.ನಿಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚಿನ ಉತ್ಸಾಹ ಕಂಡು ಬರಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಮಿತ್ರರು, ಬಂಧುಗಳು ಜತೆಯಲ್ಲೆ ಇರುತ್ತಾರೆ. ಅವರ ಜತೆ ಬಹಳಷ್ಟು ಬ್ಯುಸಿಯಾಗಿಯೂ ಇರುತ್ತೀರಿ. ಮಧ್ಯಾಹ್ನ ಬಳಿಕ ಏನೋ ಒಂದು ಬದಲಾವಣೆ ಆಗಿ ಎಲ್ಲರೂ ನಿಮ್ಮಿಂದ ದೂರ ಸರಿಯುವ ಸಂದರ್ಭಗಳು ಬರಬಹುದು. ಎರಡು ದಿನಗಳ ಬಳಿಕ ಪುನಃ ಎಲ್ಲವೂ ಸುಧಾರಿಸಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಅನೇಕ ಜವಾಬ್ದಾರಿಗಳು ಇರುತ್ತವೆ. ಯಾವಾಗ ಕೆಲಸ ಪೂರ್ಣಗೊಳ್ಳಲಿದೆ ಎನ್ನುವ ಯೋಚನೆಯಲ್ಲಿ ಇರುತ್ತೀರಿ. ಮಧ್ಯಾಹ್ನ ಬಳಿಕ ಬಹಳಷ್ಟು ಸಂತೋಷವಾಗಿ ದಿನ ಕಳೆಯುತ್ತೀರಿ. ಇಷ್ಟಾರ್ಥ ಕೂಡ ಸಿದ್ಧಿಯಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಗೊಂದಲ ಇರುತ್ತದೆ. ಮುಂದೆ ಏನು ಮಾಡುವುದು, ಯಾವ ನಿರ್ಧಾರ ತೆಗೆದುಕೊಳ್ಳುವುದು ಎನ್ನುವ ಯೋಚನೆಗಳು ಕಾಡುತ್ತಿರುತ್ತವೆ. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಏನೋ ತೊಂದರೆಯಾಗುತ್ತಿದೆ ಪರಿಹಾರ ಆಗ್ತಾ ಇಲ್ಲ ಎನ್ನುವ ಬೇಸರ ಕಾಡುತ್ತಿರುತ್ತದೆ. ಮಧ್ಯಾಹ್ನ ಬಳಿಕ ನಿಮಗೆ ಅದೃಷ್ಟ ಖುಲಾಯಿಸಲಿದೆ. ಮುಖ್ಯವಾದ ಒಂದು ತಿರುವು ನಿಮಗೆ ಪ್ರಾಪ್ತಿಯಾಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಎಲ್ಲವೂ ಚೆನ್ನಾಗಿರುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರಿಂದ ಏನೋ ಒಂದು ಬದಲಾವಣೆಯಾಗಬಹುದು. ಇದರಿಂದ ನಿಮಗೆ ಬಹಳಷ್ಟು ಬೇಸರವಾಗಬಹುದು. ಆದ್ದರಿಂದ ಮುಖ್ಯವಾದ ನಿರ್ಧಾರವಾಗಲಿ ಅಥವಾ ಚರ್ಚೆ ಮಾಡಲು ಹೋಗಬೇಡಿ. ಧ್ಯಾನಾದಿಗಳಿಂದ ಎಲ್ಲದಕ್ಕೂ ಪರಿಹಾರ ಪಡೆಯಬಹುದು.
ಇದನ್ನು ಓದಿ:Daily Horoscope: ಸಿಂಹ ರಾಶಿಗೆ ರವಿ ಪ್ರವೇಶ; ಯಾರಿಗೆಲ್ಲ ಉತ್ತಮ ಫಲವಿದೆ?
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಎಲ್ಲವೂ ಚೆನ್ನಾಗಿ ಇರುತ್ತದೆ. ಸಾಮಾಜಿಕ ಜೀವನದಲ್ಲಿ ಕೆಲವೊಂದು ಯಶಸ್ಸು ಅನ್ನು ಗಳಿಸುತ್ತೀರಿ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರ ನಡುವೆ ಸಂತೋಷದ ದಿನವನ್ನು ಕಳೆಯುತ್ತೀರಿ. ದಾಂಪತ್ಯದಲ್ಲಿ ನೆಮ್ಮದಿಯ ಜತೆಗೆ ವ್ಯವಹಾರದಲ್ಲೂ ಉತ್ತಮ ಲಾಭ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಯಾವುದೇ ಕೆಲಸದಲ್ಲಿ ಯಾವುದೇ ಸುಧಾರಣೆ ಕಂಡು ಬರುವುದಿಲ್ಲ ಎನ್ನುವ ಗೊಂದಲ ಕಂಡು ಬರಲಿದೆ. ಮಧ್ಯಾಹ್ನ ಬಳಿಕ ಎಲ್ಲದರಲ್ಲೂ ಜಯ ಪ್ರಾಪ್ತಿಯಾಗಲಿದೆ. ಇದ್ದಂತಹ ಅಡೆ-ತಡೆಗಳು ನಿವಾರಣೆಯಾಗಿ ನೆಮ್ಮದಿ ಯಿಂದ ಇರುತ್ತೀರಿ.
ಕುಂಭರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ಜವಾಬ್ದಾರಿಗಳು ಕಾಡುತ್ತಿರುತ್ತವೆ. ಮನಸ್ಸಿನ ಬೇಸರ, ಅಮ್ಮನ ಆರೋಗ್ಯ ಮತ್ತು ಸಂಸಾರದ ಬಗ್ಗೆ ವಿವಿಧ ಯೋಚನೆಗಳು ಸುಳಿಯುತ್ತವೆ. ಮಧ್ಯಾಹ್ನ ಬಳಿಕ ನೀವು ಇದೆಲ್ಲವನ್ನು ಬಿಟ್ಟು ಮಕ್ಕಳ ಬಗ್ಗೆ, ಆರ್ಥಿಕ ಭದ್ರತೆಯ ಬಗ್ಗೆ ಯೋಚನೆ ಮಾಡಬೇಕಾಗಿ ಬರುತ್ತದೆ.
ಮೀನ ರಾಶಿ: ಮೀನ ರಾಶಿಯವರು ಮಧ್ಯಾಹ್ನವರೆಗೂ ಸ್ನೇಹಿತರ ಜತೆ ಹೆಚ್ಚು ಸಮಯ ಕಳೆಯಲಿದ್ದೀರಿ. ಮನಸ್ಸಿಗೆ ನೆಮ್ಮದಿ ಕೂಡ ಇರಲಿದೆ. ಮಧ್ಯಾಹ್ನ ಬಳಿಕ ಸಂಸಾರದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಿ ಬರುತ್ತದೆ. ಜವಾಬ್ದಾರಿಯೂ ಹೆಚ್ಚಲಿದೆ. ದಿನ ನಿತ್ಯ ಶ್ಲೋಕ ಪಠಣ, ಧ್ಯಾನ ಇತ್ಯಾದಿ ಅಭ್ಯಾಸ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಿ.