Daily Horoscope: ಶನಿವಾರದ ಈ ದಿನ ಶ್ರವಣ ನಕ್ಷತ್ರದಿಂದ ಯಾವ ರಾಶಿಗೆ ಉತ್ತಮ ಫಲವಿದೆ ಗೊತ್ತಾ?
ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಪೌರ್ಣಮಿ ತಿಥಿ, ಶ್ರವಣ ನಕ್ಷತ್ರದ ಈ ದಿನ ಆಗಸ್ಟ್ 9ನೇ ತಾರೀಖಿನ ಈ ದಿನದಂದು ನೂಲ ಹುಣ್ಣಿಮೆ ದಿನವಾಗಿದ್ದು ಭಾರತೀಯ ಸಂಪ್ರದಾಯದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.


ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ಪೌರ್ಣಮಿ ತಿಥಿ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಶ್ರವಣ ನಕ್ಷತ್ರದ ದಿನವಾಗಿದ್ದು ಮೇಷ ರಾಶಿ ಅವರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಗಮನ ನೀಡಬೇಕಾದ ದಿನ ಇದಾಗಲಿದೆ. ಈ ಮೂಲಕ ಕಾರ್ಯಕ್ಷೇತ್ರದಲ್ಲಿ ನೀವು ಅಂದುಕೊಂಡ ಕೆಲಸ ಕಾರ್ಯ ಆಗಲಿದೆ, ಯಶಸ್ಸು ಸಿಗಲಿದೆ. ಆದರೆ ಮನೆ ಜವಾಬ್ದಾರಿಯನ್ನು ನೀವು ನೋಡಿಕೊಳ್ಳಬೇಕು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಬಹಳ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಅಂದುಕೊಂಡ ಕೆಲಸ ಕಾರ್ಯವಾಗಿ ಭಾಗ್ಯೋದಯವಾಗಲಿದೆ. ಈ ಹಿಂದೆ ನಿಮಗೆ ಇದ್ದ ಕೆಲವು ಗೊಂದಲ, ಸಮಸ್ಯೆ ಇಂದು ಪರಿಹಾರ ಆಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಹಿರಿಯರ ಮಾತು ಅನುಸರಿಸಿ ನಡೆದಾಗ ಸಾಮಾಜಿಕ ರಂಗದಲ್ಲಿ ಗೌರವ ಪ್ರಾಪ್ತಿಯಾಗುವುದು. ನಿಮಗೆ ಬೇಕಾದ ಸಹಕಾರ ಮಿತ್ರರಿಂದ ದೊರೆಯಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅಷ್ಟಮದಲ್ಲಿ ಚಂದ್ರ ಇರುವ ಕಾರಣ ಸ್ವಲ್ಪ ಮಟ್ಟಿಗೆ ಕ್ಲೇಶ ಉಂಟಾಗುವ ದಿನವಾಗಿದೆ. ಪ್ರೇಮ, ಪ್ರೀತಿ , ದಾಂಪತ್ಯ ವಿಚಾರದಲ್ಲಿ ಮನಸ್ಸಿಗೆ ನೋವು ಉಂಟಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಈ ದಿನ ಅಷ್ಟು ಒಳ್ಳೆಯದಲ್ಲ. ಎಲ್ಲ ವಿಚಾರ ದಲ್ಲಿ ತಾಳ್ಮೆ ಕಂಡುಕೊಂಡರೆ ದೊಡ್ಡ ಸಮಸ್ಯೆ ಬಾಧಿಸಲಾರದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾಗಿ ಇರಲಿದೆ. ಹಿಂದಿನ ದಿನಗಳಲ್ಲಿ ಇದ್ದ ಮನ ಸ್ಸಿನ ಬೇಸರ ಇತರೆ ಸಮಸ್ಯೆ ಬಗೆಹರಿಯಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಎಲ್ಲ ವಿಚಾರ ದಲ್ಲಿಯೂ ಜಯ ಸಿಗಲಿದೆ. ಕೆಲವೊಂದು ಗೊಂದಲ ಇಂದು ಪರಿಹಾರವಾಗಲಿದ್ದು ಇಂದು ಸಾಧ್ಯ ವಾದಷ್ಟು ನಿಮ್ಮನ್ನು ನೀವು ಒಳ್ಳೆ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಪ್ರೀತಿ ಪಾತ್ರರ ಜೊತೆಗೆ ಅತೀ ಹೆಚ್ಚಿನ ಸಮಯ ಕಳೆದರೆ ಬಹಳ ಉತ್ತಮವೆನ್ನಬಹುದು.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಉತ್ತಮವಾದ ದಿನವಾಗಿದ್ದು ಜಯ ಪ್ರಾಪ್ತಿ ಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಸಾಮಾಜಿಕ ವ್ಯವಹಾರದಲ್ಲಿ ವಿಶ್ವಾಸ ವೃದ್ಧಿಯಾಗಲಿದೆ. ಎಲ್ಲ ವಿಚಾರದಲ್ಲಿ ನಿಶ್ಚಿಂತೆಯಿಂದ ಇದ್ದರೆ ಎಲ್ಲ ಸಮಸ್ಯೆ ಬಹಳ ಸುಲಭವಾಗಿ ಪರಿಹಾರ ಆಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಕೆಲ ಕ್ಲೇಶ ಉಂಟಾಗಲಿದೆ. ಹೂಡಿಕೆ ಇತ್ಯಾದಿ ವಿಚಾರ ದಲ್ಲಿ ಸಮಸ್ಯೆ ಉಂಟಾಗಲಿದೆ. ಮಕ್ಕಳಿಂದ , ಸಂಬಂಧಿಕರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಿ ಬೇಸರವಾಗಲಿದೆ. ಮಕ್ಕಳ ಮೇಲೆ ಕೋಪಿಸಿಕೊಳ್ಳದೆ ಶಾಂತ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದರೆ ಎಲ್ಲ ಸಮಸ್ಯೆ ದೂರಾಗಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಬಹಳ ಕಿರಿ ಕಿರಿ ಇರುವ ದಿನವಾಗಿದೆ. ಮನಸ್ಸಿಗೆ ಕ್ಲೇಶ ಉಂಟಾಗುವ ದಿನವಾಗಿದ್ದು ಅನೇಕ ವಿಚಾರದಿಂದ ಖಿನ್ನತೆ ಅನುಭವಿಸುವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆಸ್ತಿ ಪಾಸ್ತಿ ಇತರ ವಿಚಾರದ ಮೇಲೆ ನಿಗಾ ವಹಿಸಿದರೆ ಉತ್ತಮ. ಕೆಲವು ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಹೂಡಿಕೆ ವ್ಯಾಪಾರ ಇತರ ವ್ಯವಹಾರದಲ್ಲಿ ಹೆಚ್ಚು ಜಾಗೃತೆ ವಹಿಸಬೇಕು.
ಇದನ್ನು ಓದಿ:Daily Horoscope: ವರಮಹಾಲಕ್ಷ್ಮಿ ಹಬ್ಬದ ಈ ದಿನ ಯಾವ ರಾಶಿಯವರು ಸಮೃದ್ಧಿ ಹೊಂದುತ್ತಾರೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಹಿಂದಿನ ದಿನಗಳಲ್ಲಿ ಇದ್ದ ಮನಸ್ಸಿನ ಬೇಸರ ಇತರೆ ಸಮಸ್ಯೆ ಬಗೆಹರಿಯಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಾಮಾಜಿಕ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರು , ಜಾಹೀರಾತು ರಂಗದಲ್ಲಿ ಇರುವವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಅನೇಕ ವಿಚಾರದಲ್ಲಿಯೂ ಜಯ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಸಹೋದರರು ಹಾಗೂ ಬಂಧುಗಳಿಂದ ಅತೀ ಹೆಚ್ಚು ಸಹಕಾರ ನಿಮಗೆ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಕ್ಲೇಶಕರವಾದ ದಿನವಾಗಿದೆ. ಮನಸ್ಸಿನ ನೆಮ್ಮದಿ ಇರಲಾರದು. ಖರ್ಚುಗಳ ಸಮಸ್ಯೆ ಇರಲಿದೆ. ಇಂದು ಯಾವುದೇ ಮುಖ್ಯವಾದ ವಿಚಾರದ ಕುರಿತು ನಿರ್ಧಾರ ಕೈಗೊಳ್ಳುವುದು ಬೇಡ. ಎರಡು ದಿನದ ಬಳಿಕ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇದೆ. ಹಳೆ ಸಮಸ್ಯೆ ಎಲ್ಲದಕ್ಕು ಇಂದು ಪರಿಹಾರ ಸಿಗಲಿದೆ. ಇಷ್ಟಾರ್ಥ ಸಿದ್ಧಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕುಟುಂಬದಿಂದ ಹಾಗೂ ಸ್ನೇಹಿತರಿಂದ ಬೇಕಾದ ಸಹಕಾರ ಸಿಗಲಿದೆ. ಅನೇಕ ವಿಚಾರ ದಲ್ಲಿ ನಿಮಗೆ ಸಂತೋಷ ಪ್ರಾಪ್ತಿಯಾಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಮನಸ್ಸಿಗೆ ಕ್ಲೇಶ ಉಂಟಾಗಲಿದೆ. ಇಂದು ನೀವು ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಬೇಡಿ. ಅಂದುಕೊಂಡ ಕೆಲಸ ಕಾರ್ಯಗಳು ಯಾವುದು ಈಡೇರಲಾರದು. ಕ್ಷುಲಕ ಕಾರಣಕ್ಕೆ ವೈಮನಸ್ಸು ಮೂಡುವ ಸಾಧ್ಯತೆ ಇದ್ದು ಈ ಬಗ್ಗೆ ಎಚ್ಚರ ವಹಿಸಬೇಕು.
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಹಳ ಅತ್ಯುತ್ತಮವಾದ ಭಾಗ್ಯೋದಯದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿ, ಧನಾಗಮವಾಗಲಿದೆ. ಮನೆಯ ಗುರು ಹಿರಿಯರ ಆಶೀರ್ವಾದ ವಿದ್ದರೆ ಅಂದು ಕೊಂಡ ಕೆಲಸದಲ್ಲಿ ಯಶಸ್ಸು ಸಿದ್ಧಿಯಾಗಲಿದೆ.