ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maharaja Trophy 2025: ಮೈಸೂರು ವಾರಿಯರ್ಸ್‌ ತಂಡಕ್ಕೆ ಕರುಣ್‌ ನಾಯರ್‌ ನಾಯಕ!

ಮುಂಬರುವ ಮಹಾರಾಜ ಟ್ರೋಫಿ ಟೂರ್ನಿಗೆ ಮೈಸೂರು ವಾರಿಯರ್ಸ್‌ ತಂಡವನ್ನು ಪ್ರಕಟಿಸಲಾಗಿದ್ದು, ಇಂಗ್ಲೆಂಡ್‌ ಟೆಸ್ಟ್‌ ಸರಣಿಯನ್ನು ಮುಗಿಸಿಕೊಂಡು ಬಂದಿರುವ ಕರುಣ್‌ ನಾಯರ್‌ಗೆ ನಾಯಕತ್ವವನ್ನು ನೀಡಲಾಗಿದೆ. ಕರುಣ್‌ ನಾಯರ್‌ ಗಾಯದ ಕಾರಣ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದು ಮನೀಷ್‌ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.

ಮೈಸೂರು ವಾರಿಯರ್ಸ್‌ ತಂಡಕ್ಕೆ ಕರುಣ್‌ ನಾಯರ್‌ ನಾಯಕ!

ಮೈಸೂರು ವಾರಿಯರ್ಸ್‌ ತಂಡಕ್ಕೆ ಕರುಣ್‌ ನಾಯರ್‌ ನಾಯಕ.

Profile Ramesh Kote Aug 9, 2025 3:05 PM

ಮೈಸೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕ ಸಂಸ್ಥೆಯಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು (Mysore Warriors) 2025ರ ಮಹಾರಾಜ ಟ್ರೋಫಿ (Maharaja Trophy) ಕೆಎಸ್‌ಸಿಎ ಟಿ20 ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿದೆ. ಭಾರತ ತಂಡದ ಬ್ಯಾಟ್ಸ್‌ಮನ್‌ ಕರುಣ್ ನಾಯರ್‌ (Karun Nair) ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಕರುಣ್ ನಾಯರ್ ಗಾಯಕ್ಕೆ ತುತ್ತಾಗಿದ್ದರಿಂದ ಅವರು ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ನ ಹಿರಿಯ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ ಆರಂಭಿಕ ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್‌ ದಿಗ್ಗಜ ಕರುಣ್ ನಾಯರ್ ಅವರು ಮೈಸೂರು ವಾರಿಯರ್ಸ್‌ ತಂಡವನ್ನು ಈ ಬಾರಿಯೂ ಗೆಲುವಿನೆಡೆಗೆ ಕರೆದೊಯ್ಯುವ ನಿರೀಕ್ಷೆ ಹೊಂದಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಮತ್ತು ಟಿ20 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕರುಣ್‌ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ.

ವಿಶೇಷವೆಂದರೆ 2025ರ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಖ್ಯಾತ ಕ್ರಿಕೆಟಿಗರಾದ ಪ್ರಸಿಧ್‌ ಕೃಷ್ಣ, ಮನೀಷ್ ಪಾಂಡೆ ಮತ್ತು ಕೆ ಗೌತಮ್ ಆಡಲಿದ್ದಾರೆ. ಮಹಾರಾಜ ಟ್ರೋಫಿ ಟೂರ್ನಿಯು ಆಗಸ್ಟ್ 11 ರಿಂದ 27ರವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದೆ. ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

Maharani Trophy: ಮೈಸೂರು ವಾರಿಯರ್ಸ್‌ ಮಹಿಳಾ ತಂಡಕ್ಕೆ ಶುಭಾ ಸತೀಶ್‌ ನಾಯಕಿ!

ಕ್ರೀಡೆಯ ಮೂಲಕ ಸಮಾಜಕ್ಕೂ ಒಳಿತು ಮಾಡಬೇಕು ಎಂದು ನಂಬಿರುವ ಮೈಸೂರು ವಾರಿಯರ್ಸ್ ತಂಡವು ಇದೀಗ ದಕ್ಷಿಣ ಏಷ್ಯಾದ ಮೊದಲ ವೀಲ್‌ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ASL) ಟಿ20 ಜೊತೆಗೆ ಕಾಸ್ ಪಾರ್ಟನರ್‌ಶಿಪ್ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಆ ಮೂಲಕ ವಿಕಲಚೇತನ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುವ ಎಎಸ್ಎಲ್‌ಗೆ ಬೆಂಬಲ ಒದಗಿಸಲಿದೆ.

ಆ ಪ್ರಯುಕ್ತ ಕಳೆದ ವರ್ಷದಂತೆಯೇ ಈ ವರ್ಷವೂ ಎನ್‌ಆರ್ ಗ್ರೂಪ್ ಸಂಸ್ಥೆಯು ಈ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ತೆಗೆಯುವ ಪ್ರತೀ ವಿಕೆಟ್‌ಗೆ ₹2,000, ಪ್ರತೀ ಸಿಕ್ಸರ್‌ಗೆ ₹1,000 ಮತ್ತು ಪ್ರತಿ ಫೋರ್‌ಗೆ ₹500 ದೇಣಿಗೆ ನೀಡಲಿದೆ. ವಿಕಲಚೇತನ ಕ್ರೀಡಾಪಟುಗಳ ಸಬಲೀಕರಣಕ್ಕೆ ಈ ದೇಣಿಗೆ ಬಳಕೆಯಾಗಲಿದೆ.

IND vs ENG ಸಂಯೋಜನೆಯ ಪ್ಲೇಯಿಂಗ್‌ XI ಪ್ರಕಟಿಸಿದ ಆಕಾಶ ಚೋಪ್ರಾ!

ಮಾಲೀಕರಾದ ಅರ್ಜುನ್‌ ರಂಗಾ ಪ್ರತಿಕ್ರಿಯೆ

ಈ ಸಂದರ್ಭದಲ್ಲಿ ಮಾತನಾಡಿರುವ ಮೈಸೂರು ವಾರಿಯರ್ಸ್ ತಂಡದ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗಾ ಅವರು, "ಕರುಣ್ ನಾಯರ್‌ ಅವರನ್ನು ನಮ್ಮ ತಂಡದ ನಾಯಕರನ್ನಾಗಿ ಘೋಷಿಸಲು ಸಂತೋಷ ಪಡುತ್ತೇವೆ. ಅವರ ಅನುಭವ ನಮ್ಮ ತಂಡಕ್ಕೆ ಆನೆಬಲ ನೀಡಲಿದೆ. ಅಲ್ಲದೇ ಈ ಸಲದ ಮಹಾರಾಜ ಟ್ರೋಫಿಯನ್ನು ಮೈಸೂರಿನಲ್ಲಿ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಮೈಸೂರಿನಲ್ಲಿ ಟೂರ್ನಿ ನಡೆಯುತ್ತಿರುವುದು ನಮ್ಮ ಫ್ರಾಂಚೈಸಿಗೆ ಮಹತ್ವದ ಕ್ಷಣವಾಗಿದ್ದು, ಈ ಸಲವೂ ಟ್ರೋಫಿಯನ್ನು ನಾವೇ ಗೆಲ್ಲುವ ನಂಬಿಕೆ ಇದೆ." ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

ಅತ್ಯುತ್ತಮ ಪ್ರದರ್ಶನವನ್ನು ತೋರುತ್ತೇವೆ: ಕೋಚ್‌

ಮೈಸೂರು ವಾರಿಯರ್ಸ್ ತಂಡದ ಮುಖ್ಯ ಕೋಚ್ ಆರ್‌ಎಕ್ಸ್ ಮುರಳಿ, "ನಮ್ಮ ತಂಡದ ಪ್ರತೀ ಆಟಗಾರರೂ ಹುಮ್ಮಸ್ಸಿನಿಂದ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ. ನಮ್ಮ ತಂಡದ ಅಭಿಮಾನಿಗಳಿಗಾಗಿ ನಾವು ಈ ಸಲವೂ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇವೆ," ಎಂದು ಭರವಸೆಯನ್ನು ನೀಡಿದ್ದಾರೆ.

ಸಂತಸ ವ್ಯಕ್ತಪಡಿಸಿದ ಕರುಣ್‌ ನಾಯರ್‌

ಮೈಸೂರು ವಾರಿಯರ್ಸ್ ತಂಡದ ನಾಯಕರಾದ ಕರುಣ್ ನಾಯರ್ ಅವರು, "ಮೈಸೂರು ವಾರಿಯರ್ಸ್‌ ತಂಡವನ್ನು ಮುನ್ನಡೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಆಭಾರಿಯಾಗಿದ್ದೇನೆ. ನಮ್ಮ ತಂಡವು ಹೊಸ ಪ್ರತಿಭೆಗಳು ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿದೆ. ನಮ್ಮ ತಂಡವು ಅಭಿಮಾನಿಗಳಿಗಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ವಿಶ್ವಾಸ ನನಗಿದೆ," ಎಂದು ತಿಳಿಸಿದ್ದಾರೆ.