Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರೀ ಅದೃಷ್ಟ!
ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಆಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 23ನೇ ತಾರೀಖಿನ ಬುಧವಾರದಂದು, ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..


ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರದಲ್ದಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದು ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ರೋಹಿಣಿ ನಕ್ಷತ್ರ ಇದ್ದು ಚಂದ್ರನ ಉಚ್ಚ ಸ್ಥಾನ ಆಗಿದೆ. ಹೀಗಾಗಿ ಹೆಚ್ಚಿನ ವರಿಗೆ ಭಾವ ಉದ್ವೇಕಗಳು ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಅತಿರೇಕಕ್ಕೆ ಹೋಗದೆ ತಾಳ್ಮೆ ಯಿಂದಲೇ ಇರುವುದು ಮುಖ್ಯವಾಗುತ್ತದೆ..ಮೇಷ ರಾಶಿಯವರಿಗೆ ಇಂದು ಸಂಸಾರದ ಬಗ್ಗೆ ಹೆಚ್ಚಿನ ಜವಾಬ್ದಾರಿಗಳು ಬರುವುದರಿಂದ ಸಂಸಾರದಲ್ಲಿ ಏರು ಪೇರು ಆಗಬಹುದು. ಆದರೆ ಅತೀ ಭಾವ ನಾತ್ಮಕವಾಗಿ ಇರುವುದು ಸರಿಯಲ್ಲ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅತೀ ಸುಗಮವಾದ ದಿನವಾಗಿದೆ. ಹಿಂದಿನ ನಾಲ್ಕು ದಿನಗಳಲ್ಲಿ ಇದ್ದಂತಹ ಎಲ್ಲ ತೊಂದರೆಗಳು ಮಾಯವಾಗುವ ಸಂದರ್ಭ ಬರಲಿದೆ. ಮನಸ್ಸಿಗೂ ಬಹಳಷ್ಟು ನೆಮ್ಮದಿ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನವಾಗಲಿದೆ. ಮುಖ್ಯ ವಾದ ಕೆಲವು ಮಿತೃತ್ವ ಗಳಲ್ಲಿ ಹಾಗೂ ಕೆಲಸ ಕಾರ್ಯ ಗಳಲ್ಲಿ ತೊಂದರೆ ಉಂಟಾಗಬಹುದು. ನಿಮ್ಮ ಆಪ್ತರು ಕೊಟ್ಟಿರುವ ಮಾತನ್ನು ವಾಪಸ್ಸು ತೆಗೆದುಕೊಳ್ಳುವಂತಹ ಸಂದರ್ಭ ಬರಬಹುದು. ಆದ್ದರಿಂದ ಬಹಳಷ್ಟು ಹುಷಾರಾಗಿ ನಿಮ್ಮ ಕಾರ್ಯಗಳನ್ನು ಮುಗಿಸಿಕೊಳ್ಳಬೇಕು.
ಕಟಕ ರಾಶಿ: ಕಟಕರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಲಿದ್ದು ಇಷ್ಟಾರ್ಥ ಸಿದ್ದಿ ಯಾಗಲಿದೆ.. ಧನ ಲಾಭದ ಸೂಚನೆಗಳು ಇರುತ್ತದೆ. ಅದೃಷ್ಟ ನಿಮಗೆ ಒಲಿದು ಬರಲಿದೆ. ಮಿತ್ರ ರೊಂದಿಗೂ ಸರಿಯಾದ ರೀತಿಯಲ್ಲಿ ಬೆರೆತು ಉತ್ತಮ ಸಮಯ ಕಳೆಯಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಬಹುದು. ಅದರ ಜೊತೆ ಮನೆಯ ಕಡೆಗೂ ಹೆಚ್ಚಿನ ಜವಾಬ್ದಾರಿ ನೀಡಬೇಕಾಗುತ್ತದೆ. ಹಾಗಾಗಿ ಎರಡೂ ಕಡೆಗಳಲ್ಲಿ ಸಮತೋಲನದ ಸಮಯ ನೀಡಬೇಕಾಗುತ್ತದೆ.
ಇದನ್ನು ಓದಿ:Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು!
ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿ ಅವರಿಗೆ ಭಾಗ್ಯೋದಯ ದಿನ ವಾಗಲಿದೆ. ಮನಸ್ಸಿಗೆ ನೆಮ್ಮದಿ, ದೊಡ್ಡವರ ಆಶೀರ್ವಾದ ಪ್ರಾಪ್ತಿ ಯಾಗಲಿದೆ. ಭಗವಂತನ ಧ್ಯಾನ ,ಶ್ಲೋಕ ಪಠಿಸುವುದರಿಂದ ಪೂರ್ಣ ಫಲಗಳು ಪ್ರಾಪ್ತಿ ಯಾಗುತ್ತದೆ...
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನವಾಗಲಿದೆ. ಇಂದು ಮುಖ್ಯವಾದ ವಿಚಾರಗಳ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಇವತ್ತು ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ಸ್ಪಂದನೆಗಳು ಸಿಗುವುದಿಲ್ಲ. ಧ್ಯಾನ ,ಶ್ಲೋಕ ಇತ್ಯಾದಿ ಪಠಿಸುವ ಮೂಲಕ ಸಮಯವನ್ನು ಕಳೆಯಿರಿ...ಯಾರೊಂದಿಗೂ ವಾದ ವಿವಾದಗಳಲ್ಲಿ ಪಾಲ್ಗೊಳ್ಳಬೇಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತ್ಯುತ್ತಮ ವಾದ ದಿನ ವಾಗಲಿದ್ದು ಎಲ್ಲ ಕಡೆಯಿಂದ ಸಹಕಾರ ಪ್ರಾಪ್ತಿ ಯಾಗುತ್ತದೆ. ದಾಂಪತ್ಯ, ಮಿತೃತ್ವಗಳಲ್ಲೂ ಕೂಡ ಬಹಳಷ್ಟು ಯಶಸ್ಸನ್ನು ಕಾಣಲಿದ್ದೀರಿ. ಇಂದು ಖುಷಿಯಿಂದ ಕಾಲ ಕಳೆಯುವಿರಿ.
ಧನಸ್ಸು: ಈ ರಾಶಿ ಅವರಿಗೆ ಇಂದು ಉತ್ತಮವಾದ ದಿನ ವಾಗಲಿದ್ದು ಯಶಸ್ಸನ್ನು ಕಾಣಲಿ ದ್ದೀರಿ. ಸಾಮಾಜಿಕ ಕೆಲಸಗಳಲ್ಲಿ ಪಾಲ್ಗೊಂಡು ಅಭಿವೃದ್ದಿ ಕಾಣಲಿದ್ದೀರಿ. ಯಾರು ನಿಮ್ಮ ವಿರುದ್ಧ ಮಾತನಾಡಿ ಗೆದ್ದು ಕೊಳ್ಳಲು ಇಂದು ಸಾಧ್ಯ ಆಗುವುದಿಲ್ಲ.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಸ್ವಲ್ಪ ಕ್ಷೇಷಕರವಾದ ದಿನವಾಗಲಿದೆ. ನಿಮ್ಮ ಬುದ್ದಿ ಶಕ್ತಿ, ವಿಚಾರ ಶಕ್ತಿ ತುಂಬಾನೇ ತೀಕ್ಷ್ಣವಾಗಿರುತ್ತದೆ. ಆದರೂ ಸಂಪೂರ್ಣ ಫಲವನ್ನು ನೀವು ಇಂದು ಪಡೆಯಬಹುದು.ಆದರೆ ಬೇರೆಯವರಿಂದ ಯಾವುದೇ ಪ್ರಶಂಸೆ ಗೌರವದ ಮಾತುಗಳು ಇಂದು ಕೇಳಿಬರುವುದಿಲ್ಲ. ಎರಡು ದಿನಗಳ ಬಳಿಕ ನಿಮ್ಮ ಕಾರ್ಯಕ್ಷೇತ್ರಗಳಿಗೆ ಪ್ರಶಂಸೆ ಹೊಗಳಿಕೆ ಕೇಳಿಬರಬಹುದು.
ಕುಂಭ ರಾಶಿ: ಕುಂಭರಾಶಿ ಅವರಿಗೆ ಆಸ್ತಿ ಪಾಸ್ತಿ ವಿಚಾರವಾದ ಡ್ಯಾಕುಮೆಂಟ್ಸ್ ಬಗ್ಗೆ ಎಚ್ಚರದಿಂದ ಇರಬೇಕು ಹಾಗೂ ತಾಯಿಯ ಆರೋಗ್ಯದ ಬಗ್ಗೆಯು ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಇರುವವರಿಗೆ ಶುಭವಾದ ದಿನವಾಗಿದೆ. ಆದರೆ ಅತೀ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರು ಇಂದು ಉತ್ತಮವಾದ ದಿನವಾಗಲಿದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಮಾತುಗಾರಿಗೆ, ಭಾಷಣಗಾರರಿಗೆ ಇಂದು ಉತ್ತಮವಾದ ದಿನವಾಗಲಿದ್ದು ಕೆಲಸದಲ್ಲಿ ಪ್ರಗತಿ ಕಾಣಲಿದೆ. ಆತ್ಮವಿಶ್ವಾಸವೂ ಚೆನ್ನಾಗಿ ಇರಲಿದ್ದು ಆರೋಗ್ಯವು ಸುಧಾರಣೆ ಕಂಡು ಬರುತ್ತದೆ. ದಿನ ನಿತ್ಯ ಭಗವದ್ಗೀತಾ ಶ್ಲೋಕ ಪಠಣ ಮಾಡುವ ಅಭ್ಯಾಸ ಮಾಡಿಕೊಳ್ಳಿ.