ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜೂನ್ 30, 2026: ಇಂದು ಅವಿವಾಹಿತರಿಗೆ ಶುಭದಿನ; ಹೊಸ ಸಂಬಂಧ ಕೂಡಿ ಬರಲಿದೆ

Horoscope Today June 30, 2026: ಇಂದು (ಜೂನ್‌ 30) ಆಷಾಢ ಮಾಸ ಆರಂಭ. ಉತ್ತರ ಭಾರತದ ಪಂಚಾಂಗದ ಪ್ರಕಾರ ಇದು ಆಷಾಢ ಶುಕ್ಲ ಪಕ್ಷದ ಮೊದಲ ದಿನ. ಆಷಾಢ ಮಾಸದೊಂದಿಗೆ ಚಾತುರ್ಮಾಸ ಆರಂಭವಾಗುತ್ತದೆ. ಇಂದಿನ ನಿಮ್ಮ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.

ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jun 30, 2026 6:00 AM

ಬೆಂಗಳೂರು: ಇಂದಿನಿಂದ (ಜೂನ್ 30) ಆಷಾಢ ಮಾಸ. ಆಷಾಢ ಮಾಸದೊಂದಿಗೆ ಚಾತುರ್ಮಾಸವೂ ಆರಂಭವಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ ಈ ಮಾಸದಲ್ಲಿ ಭಗವಾನ್ ವಿಷ್ಣು ಯೋಗನಿದ್ರೆಗೆ ಜಾರುತ್ತಾನೆ. ಇದರಿಂದ ಮುಂದಿನ 4 ತಿಂಗಳು ಮದುವೆ, ಗೃಹ ಪ್ರವೇಶ, ಹೊಸ ಉದ್ಯಮಗಳಂತಹ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆಷಾಢ ಮಾಸದ ಮೊದಲ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.

ಮೇಷ: ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಗೆ ಮೆಚ್ಚುಗೆ ಸಿಗಲಿದೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಸಂತಸದಿಂದ ಸಮಯ ಕಳೆಯುವಿರಿ.

ವೃಷಭ: ಆರ್ಥಿಕವಾಗಿ ಶುಭ ದಿನ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು. ಆರೋಗ್ಯದಲ್ಲಿ ಸಣ್ಣ ಏರುಪೇರುಗಳಿರಬಹುದು. ಅನಗತ್ಯ ಖರ್ಚು ನಿಯಂತ್ರಿಸಿದರೆ ಉತ್ತಮ.

ಮಿಥುನ: ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸೂಚನೆ ಇದೆ. ಸ್ನೇಹಿತರ ಸಹಕಾರ ದೊರೆಯಲಿದೆ. ಹೊಸ ಪರಿಚಯದಿಂದ ಅನುಕೂಲವಾಗಬಹುದು.

ಕರ್ಕಾಟಕ: ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ನಡೆದುಕೊಂಡರೆ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯದ ಕಡೆ ಗಮನ ಕೊಡಬೇಕು. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುವ ಸಾಧ್ಯತೆ ಇದೆ.

ಸಿಂಹ: ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆಗೆ ಅವಕಾಶ. ಪ್ರಮುಖ ನಿರ್ಧಾರಗಳನ್ನು ಆತ್ಮವಿಶ್ವಾಸದಿಂದ ತೆಗೆದುಕೊಳ್ಳಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಬಾಕಿ ಇದ್ದ ಕೆಲಸ ಪೂರ್ಣಗೊಳ್ಳಲಿದೆ.

ಕನ್ಯಾ: ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಸಮಾಧಾನ. ಆರೋಗ್ಯದ ಕಡೆ ಗಮನ ಕೊಡಿ.

ಸಾಲದ ಹೊರೆ, ಹಣದ ಸಮಸ್ಯೆ ಕಾಡುತ್ತಿದೆಯೇ? ಈ ಪರಿಹಾರಗಳಿಂದ ದೂರವಾಗಬಹುದು ಆರ್ಥಿಕ ಸಂಕಷ್ಟ

ತುಲಾ: ದಾಂಪತ್ಯ ಹಾಗೂ ಕುಟುಂಬ ಜೀವನದಲ್ಲಿ ಸಾಮರಸ್ಯ ಹೆಚ್ಚಲಿದೆ. ಹೊಸ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯುವುದು ಒಳಿತು. ಅವಿವಾಹಿತರಿಗೆ ಹೊಸ ಸಂಬಂಧ ಕೂಡಿ ಬರಲಿದೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚು.

ವೃಶ್ಚಿಕ: ಹಳೆಯ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಮಾತಿನಲ್ಲಿ ನಿಗಾ ವಹಿಸಿ. ಒತ್ತಡ ಹೆಚ್ಚು, ನಿರೀಕ್ಷಿತ ಫಲ ಸಿಗದೇ ನಿರಾಸೆ. ಅನಿರೀಕ್ಷಿತ ಖರ್ಚು ಕಂಡು ಬರಲಿದೆ.

ಧನು: ಪ್ರಯಾಣ ಸಾಧ್ಯತೆ. ವ್ಯಾಪಾರದಲ್ಲಿ ಲಾಭದ ಸೂಚನೆ. ಹೊಸ ಪರಿಚಯ ಭವಿಷ್ಯದಲ್ಲಿ ಉಪಯುಕ್ತವಾಗಬಹುದು. ವೃತ್ತಿಯಲ್ಲಿ ಪ್ರಗತಿ ಸಾಧ್ಯ. ಸಾಲ ಮಾಡಬೇಕಾದ ಸ್ಥಿತಿ ಬರಬಹುದು. ಹೂಡಿಕೆ ಮಾಡುವಾಗ ಎಚ್ಚರ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಕಂಡುಬರಲಿದೆ.

ಮಕರ: ಆದಾಯ ಹೆಚ್ಚಳವಾಗುವ ಸಾಧ್ಯತೆ. ಕುಟುಂಬದ ಹಿರಿಯರ ಸಲಹೆ ಸ್ವೀಕರಿಸಿ. ಆರೋಗ್ಯದಲ್ಲಿ ಸುಧಾರಣೆ. ಸಣ್ಣ ವಿಷಯಕ್ಕೆ ಜಗಳವಾಗುವ ಸಾಧ್ಯತೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಖರ್ಚಿನ ಮೇಲೆ ಹಿಡಿತ ಇರಲಿ.

ಕುಂಭ: ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ಒತ್ತಡವನ್ನು ಸಮತೋಲನದಿಂದ ನಿಭಾಯಿಸಿ. ಖರ್ಚು ನಿಯಂತ್ರಿಸಿ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಪ್ರೇಮಿಗಳಿಗೆ ಉತ್ತಮ ದಿನ.

ಮೀನ: ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಮನಸ್ಸಿಗೆ ನೆಮ್ಮದಿ ದೊರೆಯಲಿದ್ದು, ಕುಟುಂಬ ಮತ್ತು ಸ್ನೇಹಿತರಿಂದ ಉತ್ತಮ ಸಹಕಾರ ಸಿಗಲಿದೆ. ಧಾರ್ಮಿಕ ಚಟುವಟಿಕೆಯಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.

ಧಾರ್ಮಿಕ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.