ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ‘ಭಾಗ್ಯದ ಲಕ್ಷ್ಮೀ ಬಾರಮ್ಮ..!’ ಲಕ್ಷ್ಮೀ ನಿಮ್ಮ ಮನೆಗೆ ಬರಬೇಕು ಅಂದ್ರೆ ಹೀಗೆ ಮಾಡಿ

ಶುಕ್ರವಾರದಂದು ಲಕ್ಷ್ಮೀ ದೇವಿಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸುವುದರಿಂದ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹಾಗೇ ಇಂದು ಈ ವಸ್ತುಗಳನ್ನು ದಾನ ಮಾಡಿದರೆ ಶುಕ್ರ ಗ್ರಹವು ಬಲಗೊಳ್ಳುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಶುಕ್ರವಾದದಂದು ಯಾವ ನಿಯಮ ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ

ಶುಕ್ರವಾರದಂದು ಈ ಪರಿಹಾರ ಮಾಡಿದ್ರೆ ಅದೃಷ್ಟ ಗ್ಯಾರಂಟಿ

ಲಕ್ಷ್ಮೀ ದೇವಿ -

Profile
Sushmitha Jain Nov 21, 2025 7:20 AM

ಬೆಂಗಳೂರು: ಲಕ್ಷ್ಮೀ (Goddess Lakshmi) ಸಂಪತ್ತಿನ ಅಧಿದೇವತೆ, ನಾವೆಲ್ಲರೂ ಸುಖ ಸಂತೋಷದ ಜೀವನಕ್ಕಾಗಿ ಸನ್ಮಾರ್ಗದಲ್ಲಿ ಸಂಪತ್ತನ್ನು ಗಳಿಸಿಬೇಕೆಂದು ವಿವಿಧ ರೀತಿಯ ದುಡಿಮೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಆದರೆ ಎಲ್ಲರಿಗೂ ಲಕ್ಷ್ಮೀ ಕಟಾಕ್ಷ ಒಲಿಯುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಜ್ಯೋತಿ ಶಾಸ್ತ್ರ(Astro Tips) ಲಕ್ಷ್ಮೀ ದೇವಿಯನ್ನು ಸರಿಯಾದ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಪೂಜಿಸಿದರೆ ಆಕೆಯ ಕೃಪಾ ಕಟಾಕ್ಷ ನಮ್ಮ ಮೇಲಾಗಲು ಖಂಡಿತಾ ಸಾಧ್ಯವಿದೆ. ಲಕ್ಷ್ಮಿಯ ಕೃಪಾ ಕಟಾಕ್ಷಕ್ಕೆ ಒಳಗಾಗಲು ನಾವು ಮಾಡಬಹುದಾದ ಕೆಲವೊಂದು ಸಿಂಪಲ್ ವಿಧಾನಗಳನ್ನು ನಾವಿಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಲಕ್ಷ್ಮೀ ಪೂಜೆಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಯಾವ ದಿನಗಳಲ್ಲಿ, ಯಾವ್ಯಾವ ರೀತಿಯಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಆಕೆಯ ಕೃಪೆ ನಮ್ಮ ಮೇಲಾಗುತ್ತದೆ ಎಂದು ನೋಡೋದಾದ್ರೆ..

ಅಕ್ಕಿಯಲ್ಲಿ ಅಡಗಿದೆ ಲಕ್ಷ್ಮೀ ಕಟಾಕ್ಷದ ರಹಸ್ಯ!

ಲಕ್ಷ್ಮೀ ದೇವಿ ಪ್ರಸನ್ನಳಾಗಿ ನಿಮಗೆ ಅನುಗ್ರಹ ಮಾಡಬೇಕಾದರೆ ಅಕ್ಕಿಯಿಂದ ಸಾಧ್ಯ! ಇದು ನಾವೆಲ್ಲರೂ ನಂಬಲೇಬೇಕಾದ ಸತ್ಯ. ಪ್ರತೀ ಹುಣ್ಣಿಮೆಯಂದು ಅಕ್ಕಿಯಿಂದ ಪಾಯಸವನ್ನು ತಯಾರಿಸಿ ಅದನ್ನು ಲಕ್ಷ್ಮೀ ದೇವಿ ಮತ್ತು ಚಂದ್ರ ದೇವರಿಗೆ ಅರ್ಪಿಸಿ ಬಳಿಕ ನಾವು ಪ್ರಸಾದ ರೂಪದಲ್ಲಿ ಸೇವಿಸಿದರೆ ನಮ್ಮನ್ನು ಕಾಡುತ್ತಿರುವ ಹಣಕಾಸಿನ ಸಮಸ್ಯೆಗಳು ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನು, ಶುಕ್ಲ ಪಕ್ಷದ ಮೊದಲ ಶುಕ್ರವಾರದಂದು 100 ಗ್ರಾಂನಷ್ಟು ಅಕ್ಕಿಯನ್ನು ಬಾಳೆ ಎಲೆಯಲ್ಲಿ ಇಟ್ಟು ಅದರ ಮೇಲೆ ಲಕ್ಷ್ಮೀ ದೇವಿಯ ಫೊಟೋ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಹೀಗೆ ಮಾಡುತ್ತಾ ಬಂದಲ್ಲಿ ಆ ಮನೆಯಲ್ಲಿ ಲಕ್ಷ್ಮೀ ಸದಾ ಸುಪ್ರಸನ್ನಳಾಗಿ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ.ಈ

ಸುದ್ದಿಯನ್ನು ಓದಿ: Vastu Tips: ಪರ್ಸ್ ನಲ್ಲಿಟ್ಟುಕೊಳ್ಳುವ ಈ ವಸ್ತುಗಳು ಅದೃಷ್ಟವನ್ನು ಆಕರ್ಷಿಸುತ್ತದೆ..! ಆ ವಸ್ತುಗಳು ಯಾವುವು ನೋಡಿ

ಇಷ್ಟು ಮಾತ್ರವಲ್ಲದೇ ಅಮವಾಸ್ಯೆಯ ದಿನದಂದು ಪಕ್ಷಿಗಳಿಗೆ ಅಕ್ಕಿಯನ್ನು ಆಹಾರವಾಗಿ ನೀಡಿದಲ್ಲಿ ಮತ್ತು ಪ್ರತೀ ತಿಂಗಳ ಮೊದಲ ಶುಕ್ರವಾರದಂದು ಕೇಸರಿ ಮತ್ತು ಪಂಚಮೇವದ ಖೀರನ್ನು ಲಕ್ಷ್ಮೀ ದೇವರಿಗೆ ನೈವೇದ್ಯವಾಗಿ ಅರ್ಪಿಸುವುದರಿಂದಲೂ ನಾವು ಧನ ದಾರಿದ್ರ್ಯದಿಂದ ಮುಕ್ತಿ ಹೊಂದಬಹುದಾಗಿದೆ.

ಶುಕ್ಲ ಪಕ್ಷದ ಪಾಡ್ಯ ತಿಥಿಯಂದು ಲಕ್ಷ್ಮೀ ದೇವಿಯ ವಿಗ್ರಹಕ್ಕೆ ಐದು ಅಕ್ಕಿ ಕಾಳನ್ನು ಸಮರ್ಪಿಸುವುದರಿಂದಲೂ ಸಹ ನಮ್ಮ ಆರ್ಥಿಕ ಸಂಕಷ್ಟದಿಂದ ಮುಕ್ತಿ ಹೊಂದಲು ಸಾಧ್ಯವಿದೆ. ಅಕ್ಕಿಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ. ಯಾವುದೇ ಪೂಜಾದಿಗಳಲ್ಲಿ ಅಕ್ಕಿ, ತೆಂಗಿನ ಕಾಯಿ, ವೀಳ್ಯದೆಲೆ, ಅಡಕೆ ಮೂಲಕ ಸ್ವಸ್ತಿಕವನ್ನು ಇರಿಸಿ ಅದರಲ್ಲಿ ದೈವಾಂಶವನ್ನು ಆವಾಹಿಸಿಕೊಳ್ಳುವ ಕ್ರಮವಿದೆ. ಅಕ್ಕಿಯನ್ನು ಲಕ್ಷ್ಮೀ ದೇವಿಯ ರೂಪವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಅಕ್ಕಿಯಿಂದ ಮಾಡಿದ ಯಾವುದೇ ನೈವೇದ್ಯವನ್ನು ದೇವರಿಗೆ ಸಮರ್ಪಿಸಿದಲ್ಲಿ ದೇವರ ಅನುಗ್ರಹ ನಮಗೆ ಸಿಗುವುದರಲ್ಲಿ ಸಂಶಯವಿಲ್ಲ.