Vastu Tips: ಮನೆಯಲ್ಲಿ ನೀವು ಹಣವಿಡುವ ಜಾಗ ಸರಿಯಾಗಿದೆಯೇ?
ಚಿನ್ನ, ಬೆಳ್ಳಿ, ಹಣ, ಆಸ್ತಿ ಪತ್ರಗಳು ಸಾಮಾನ್ಯವಾಗಿ ನಾವು ಮನೆಯಲ್ಲಿ ಭದ್ರವಾಗಿಡಲು ಬಯಸುವ ವಸ್ತುಗಳು. ಇವುಗಳನ್ನು ಎಲ್ಲೆಲ್ಲಿ ಇಟ್ಟರೆ ಕಳ್ಳರ ಪಾಲಾಗುವ ಆತಂಕ ಇರುತ್ತದೆ. ಆದರೆ ಇದೊಂದೇ ಮಾತ್ರವಲ್ಲ ವಾಸ್ತುದೋಷಕ್ಕೂ ಇದು ಕಾರಣವಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಗದು, ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು ಎನ್ನುತ್ತಾರೆ ವಾಸ್ತು (Vastu Tips) ತಜ್ಞರು. ಒಂದು ವೇಳೆ ಹೀಗೆ ಇಟ್ಟರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಮನೆಯ ಆರ್ಥಿಕ ಸಮೃದ್ಧಿಯ ಮೇಲೆ ದುಷ್ಟ ಪ್ರಭಾವ ಬೀರುವ ಸಾಧ್ಯತೆಯೂ ಇದೆ.


ಚಿನ್ನ, ಬೆಳ್ಳಿ, ಹಣ, ಆಸ್ತಿ ಪತ್ರಗಳು.. ಸಾಮಾನ್ಯವಾಗಿ ನಾವು ಮನೆಯಲ್ಲಿ ಭದ್ರವಾಗಿಡಲು ಬಯಸುವ ವಸ್ತುಗಳು. ಇವುಗಳನ್ನು ಎಲ್ಲೆಲ್ಲಿ ಇಟ್ಟರೆ ಕಳ್ಳರ ಪಾಲಾಗುವ ಆತಂಕ ಇರುತ್ತದೆ. ಆದರೆ ಇದೊಂದೇ ಮಾತ್ರವಲ್ಲ ವಾಸ್ತು (Vastu for money) ದೋಷಕ್ಕೂ (Vastushastra) ಇದು ಕಾರಣವಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಗದು, ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು ಎನ್ನುತ್ತಾರೆ ವಾಸ್ತು (Vastu tips) ತಜ್ಞರು. ಒಂದು ವೇಳೆ ಹೀಗೆ ಇಟ್ಟರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಮನೆಯ ಆರ್ಥಿಕ ಸಮೃದ್ಧಿಯ ಮೇಲೆ ದುಷ್ಟ ಪ್ರಭಾವ ಬೀರುವ ಸಾಧ್ಯತೆ ಇದೆ.
ಹಣ, ಬೆಲೆಬಾಳುವ ವಸ್ತುಗಳು, ಪ್ರಮುಖ ದಾಖಲೆ ಪತ್ರಗಳು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಮೂಲ್ಯವಾದ ಸಂಪತ್ತುಗಳು ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಇವುಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡುವಂತಿಲ್ಲ. ಹೀಗೆ ಇಟ್ಟರೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಮನೆಯಲ್ಲಿ ಅತ್ಯಮೂಲ್ಯವಾದ ಸಂಪತ್ತನ್ನು ಎಲ್ಲಿ ಇಡಬಾರದು ಎಂಬುದನ್ನು ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಅವರು ಹೇಳುವುದು ಹೀಗೆ..ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಂಪತ್ತನ್ನು ಸಂಗ್ರಹಿಸುವ ವಿಧಾನವು ಮನೆ ಮಂದಿಯ ಆರ್ಥಿಕ ಸಮೃದ್ಧಿಯ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಜನರು ತಮ್ಮ ಹಣವನ್ನು ಇಡುವ ಕೆಲವು ಸಾಮಾನ್ಯ ಸ್ಥಳಗಳು ವಾಸ್ತವವಾಗಿ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಬಹುದು. ಇದರಿಂದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
ಮನೆಯಲ್ಲಿ ಹಣ ಇಡಬಾರದ ಸ್ಥಳಗಳು
ಹಣವನ್ನು ಸುರಕ್ಷಿತವಾದ ಲಾಕರ್ ನೊಳಗೆ ಇಡುವುದು ವಾಡಿಕೆ. ಇದು ಕತ್ತಲೆಯಾಗಿರುವ ಸ್ಥಳದಲ್ಲಿದ್ದರೆ ಅಥವಾ ಲಾಕರ್ ತೆರೆದಾಗ, ಯಾವುದೇ ನೈಸರ್ಗಿಕ ಬೆಳಕು ಒಳಗೆ ತಲುಪದಿದ್ದರೆ ಅಂತಹ ಸ್ಥಳದಲ್ಲಿ ಹಣವನ್ನು ಇಡುವುದು ಸರಿಯಲ್ಲ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಕೆಟ್ಟದಾಗುತ್ತ ಹೋಗುತ್ತದೆ. ಕ್ರಮೇಣ ಹಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಲಾಕರ್ ಗೋಡೆಯ ಪಕ್ಕದಲ್ಲಿ ಶೌಚಾಲಯ ಅಥವಾ ಸ್ನಾನಗೃಹ ಇರಲೇಬಾರದು. ಇದರಿಂದಾಗಿ ಹಣ ಎಂದಿಗೂ ಕೈಯಲ್ಲಿ ಉಳಿಯುವುದಿಲ್ಲ. ಯಾವುದೋ ಕಾರಣಕ್ಕಾಗಿ ಹಣ ಅನಗತ್ಯ ಖರ್ಚಾಗುತ್ತಲೇ ಇರುತ್ತದೆ.

ಇದನ್ನೂ ಓದಿ: Vastu Tips: ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು?
ಇನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಹಣವನ್ನು ಇಡಬಾರದು. ಯಾಕೆಂದರೆ ಈ ದಿಕ್ಕು ಯಮನ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಇದರಿಂದ ಇದು ಅಶುಭದ ಸೂಚಕವಾಗಿದೆ. ಈ ದಿಕ್ಕಿನಲ್ಲಿ ಹಣವನ್ನು ಇಡುವುದರಿಂದ ಮನೆಯಲ್ಲಿ ಸದಾ ಹಣದ ಕೊರತೆ ಉಂಟಾಗುವುದು. ಅಲ್ಲದೇ ಮನೆಯ ಮೂಲೆಯಲ್ಲಿ ಹಣವನ್ನು ಇಡಕೂಡದು. ಲಾಕರ್, ಬೀರು, ಪರ್ಸ್ ಅಥವಾ ಹಣವನ್ನು ಇಡುವ ಯಾವುದೇ ಸ್ಥಳವು ಮೂಲೆಯಲ್ಲಿದ್ದರೆ ಕೂಡಲೇ ಅದನ್ನು ಬದಲಾಯಿಸಿ. ಯಾಕೆಂದರೆ ಹಣವನ್ನು ಇಡುವ ಸ್ಥಳ ಕೂಡ ಮನೆ ಮಂದಿಯ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.