ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿ ಎಂದಿಗೂ ಇಡಬೇಡಿ

ಪ್ರತಿಯೊಬ್ಬರೂ ತಮ್ಮ ಜೇಬು ಖಾಲಿಯಾಗದಿರಲಿ ಎಂದು ಬಯಸುತ್ತಾರೆ. ಖಾಲಿ ಪರ್ಸ್ ನೋಡುವುದು ಎಲ್ಲರಿಗೂ ಬೇಸರವನ್ನುಂಟು ಮಾಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಹೆಣಗಾಡುತ್ತಾರೆ. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ಹಣ ಸಂಪಾದಿಸಿದರೂ ಹಣವೆಲ್ಲ ನೀರಿನಂತೆ ಖರ್ಚಾಗಿ ಹೋಗುತ್ತದೆ. ಇದಕ್ಕೆ ಸಾಕಷ್ಟು ಕಾರಣವೂ ಇದೆ. ಪರ್ಸ್ ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ವಾಸ್ತು ತಜ್ಞರು.

ಪರ್ಸ್‌ನಲ್ಲಿ ಇಡಲೇಬಾರದ ವಸ್ತುಗಳು ಯಾವುದು ಗೊತ್ತೇ?

ಮನೆಯೇನೋ ವಾಸ್ತು (Vastu Tips) ಪ್ರಕಾರ ನಿರ್ಮಿಸಿರುತ್ತೇವೆ. ಆದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಪ್ರತಿಯೊಂದು ವಿಚಾರದಲ್ಲೂ ವಾಸ್ತು ತತ್ತ್ವಗಳನ್ನು (vastu shastra) ಪಾಲಿಸುವುದು ಮುಖ್ಯವಾಗಿರುತ್ತದೆ. ಮನೆಯಲ್ಲಿ ವೈಯಕ್ತಿಕ ವಸ್ತುಗಳು ಮತ್ತು ಹಣಕಾಸುಗಳನ್ನು (vastu for money) ಹೇಗೆ ನಿರ್ವಹಿಸುತ್ತೇವೆ ಎಂಬುದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ವಾಸ್ತು ತತ್ತ್ವಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಆಹ್ವಾನಿಸಬಹುದು. ಇದಕ್ಕಾಗಿ ಹಣದ ಪರ್ಸ್ ಅನ್ನು ಹಿಡಿದುಕೊಳ್ಳುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಬಹುಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.

ಹಣದ ಪರ್ಸ್ ನಿರ್ವಹಣೆ ಮಾಡುವಾಗ ಕೆಲವು ಸಲಹೆಗಳನ್ನು ಅನುಸರಿಸುವುದರಿಂದ ಆರ್ಥಿಕ ತೊಂದರೆಗಳನ್ನು ದೂರ ಮಾಡಬಹುದು. ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪರ್ಸ್‌ನಲ್ಲಿ ಕೆಲವು ವಸ್ತುಗಳನ್ನು ಇಡಲೇಬಾರದು. ಯಾಕೆಂದರೆ ಕೆಲವು ವಸ್ತುಗಳು ಸಂಪತ್ತಿನ ಹರಿವನ್ನು ತಡೆಯುತ್ತದೆ. ಇದು ಶಕ್ತಿಯ ಅಸಮತೋಲನವನ್ನು ಉಂಟು ಮಾಡುತ್ತದೆ.

va1

ಸಾಮಾನ್ಯವಾಗಿ ಎಲ್ಲರೂ ತಮ್ಮ ಪರ್ಸ್ ಸದಾ ಹಣದಿಂದ ತುಂಬಿರಬೇಕೆಂದು ಬಯಸುತ್ತಾರೆ. ಸಾಮಾನ್ಯವಾಗಿ ಪ್ರತಿದಿನ ನಾವು ಒಯ್ಯುವ ವಸ್ತು ಅಡಗಿರುವುದರಿಂದ ಸಾಮಾನ್ಯವಾಗಿ ಅದರಲ್ಲಿ ಕೆಲವು ಅನಗತ್ಯ ವಸ್ತುಗಳನ್ನು ತುಂಬಿರುತ್ತೇವೆ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು.

ಹಳೆಯ ಬಿಲ್‌, ರಶೀದಿಗಳನ್ನು ಪರ್ಸ್‌ನಲ್ಲಿ ಎಂದಿಗೂ ಇಟ್ಟುಕೊಳ್ಳಬಾರದು. ಇದು ವೆಚ್ಚಗಳ ಅವಶೇಷಗಳೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ನಿಶ್ಚಲತೆ ಉಂಟಾಗುವುದು. ಅದೇ ರೀತಿ, ನಿಷ್ಪ್ರಯೋಜಕ ಕಾಗದದ ತುಣುಕುಗಳನ್ನು ಕೂಡ ಇಡಬಾರದು. ಯಾಕೆಂದರೆ ಅವು ಸಕಾರಾತ್ಮಕ ಶಕ್ತಿಯ ಹರಿವಿಗೆ ಅಡ್ಡಿ ಉಂಟು ಮಾಡುತ್ತದೆ.

va1a

ಇದನ್ನೂ ಓದಿ: Vastu Tips: ಅದೃಷ್ಟ ಹೊತ್ತು ತರುತ್ತಾನೆ ನಗುವ ಬುದ್ಧ

ಅಲ್ಲದೇ ಕಪ್ಪು ವಸ್ತುಗಳನ್ನು ಯಾವತ್ತೂ ಪರ್ಸ್‌ನಲ್ಲಿ ಇಡಬಾರದು. ಯಾಕೆಂದರೆ ಕಪ್ಪು ಬಣ್ಣವು ನಕಾರಾತ್ಮಕ ಶಕ್ತಿಯನ್ನು ಪಡೆದು ಅದನ್ನು ಹೆಚ್ಚಿಸುತ್ತದೆ. ಇದು ಹಣ ಬರುವುದನ್ನು ತಡೆಯುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಅದೇ ರೀತಿ ಚಾಕು, ಪಿನ್‌ ಅಥವಾ ಕೀಲಿಯಂತಹ ಚೂಪಾದ ವಸ್ತುಗಳನ್ನು ಸಹ ಪರ್ಸ್ ನಲ್ಲಿ ಇಡಬಾರದು. ಇವುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ವೆಚ್ಚಗಳು ಹೆಚ್ಚಾಗಿ ಜೀವನದಲ್ಲಿ ಆರ್ಥಿಕ ಅಸ್ಥಿರತೆಯನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.