Vastu Tips: ಆರ್ಥಿಕ ಸಮೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ದೀಪ ಬೆಳಗಿಸಿ
ಆರ್ಥಿಕವಾಗಿ ಸದೃಢವಾಗಿದ್ದರೆ ಬಹುತೇಕ ಸಮಸ್ಯೆಗಳಿಂದ ನಾವು ದೂರವಿರಬಹುದು. ಇದಕ್ಕಾಗಿ ಮನೆಯಲ್ಲಿ ಕೆಲವೊಂದು ಅನುಷ್ಠಾನಗಳನ್ನು ಮಾಡಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಪ್ರತಿ ನಿತ್ಯ ಮನೆಯಲ್ಲಿ ದೀಪವನ್ನಿಡುವುದು ಆರ್ಥಿಕ ಸಮೃದ್ಧಿ ಹೆಚ್ಚಿಸುವ ಸುಲಭ ದಾರಿಯಾಗಿದೆ. ಆದರೆ ಇದರಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.

-

ಬೆಂಗಳೂರು: ಜೀವನದಲ್ಲಿ ಎದುರಾಗುವ ಬಹುತೇಕ ಸಮಸ್ಯೆಗಳನ್ನು ನಾವು ಆರ್ಥಿಕವಾಗಿ ಸದೃಢವಾಗಿದ್ದರೆ ಮಾತ್ರ ಎದುರಿಸಬಹುದು. ಇದಕ್ಕಾಗಿ ಕೇವಲ ದುಡಿಮೆಯೊಂದಿದ್ದರೆ ಸಾಲದು. ಮನೆಯ ವಾಸ್ತು (Vastu for home) ಕೂಡ ಉತ್ತಮವಾಗಿರಬೇಕು. ಹಣಕಾಸಿನಲ್ಲಿ ಪದೇ ಪದೆ ತೊಂದರೆಗಳು ಎದುರಾಗುತ್ತಿದ್ದರೆ ಮನೆಯಲ್ಲಿ ಕೆಲವೊಂದು ಅನುಷ್ಠಾನಗಳನ್ನು ಮಾಡಿ ಸರಿಪಡಿಸಿಕೊಳ್ಳಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಪ್ರತಿದಿನ ಮನೆಯಲ್ಲಿ ದೀಪ (Vastu for lighting) ಹಚ್ಚುವುದರಿಂದ ಹಣಕಾಸಿನ ತೊಂದರೆಗಳನ್ನು ದೂರ ಮಾಡಬಹುದು. ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಎನ್ನುತ್ತಾರೆ ವಾಸ್ತು (Vastu tips) ತಜ್ಞರು.
ದೀಪ ಹಚ್ಚುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಸಮೃದ್ಧಿ, ಶುದ್ಧತೆ ಮತ್ತು ದೈವಿಕ ಉಪಸ್ಥಿತಿಯ ಸಂಕೇತವಾಗಿದೆ. ದೀಪ ಬೆಳಗುವುದನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುವುದು. ಸರಿಯಾದ ದಿಕ್ಕಿನಲ್ಲಿ ಬೆಳಗುವ ದೀಪವು ಕೋಣೆಯನ್ನು ಮಾತ್ರ ಬೆಳಗಿಸುವುದಿಲ್ಲ ಅದು ಆರ್ಥಿಕ ಭವಿಷ್ಯವನ್ನು ಸಹ ಬೆಳಗಿಸುತ್ತದೆ.
ಸಾಮಾನ್ಯವಾಗಿ ದೀಪಗಳನ್ನು ಬೆಳಗಲು ಬೆಳ್ಳಿ, ಹಿತ್ತಾಳೆ ಅಥವಾ ಮಣ್ಣಿನ ಹಣತೆಗಳನ್ನು ಬಳಸಲಾಗುತ್ತದೆ. ಇದರಲ್ಲೂ ಮಣ್ಣಿನ ದೀಪಗಳು ಹೆಚ್ಚು ಪ್ರಶಸ್ತವಾಗಿವೆ. ಇದು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕತೆ, ಶಾಂತಿ ಮತ್ತು ಸಂಪತ್ತನ್ನು ಆಹ್ವಾನಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ದೀಪಗಳನ್ನು ಬೆಳಗಿದರೆ ಅದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಕೊಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಏನು ಲಾಭ ?
ಪ್ರತಿದಿನ ದೀಪ ಹಚ್ಚುವುದರಿಂದ ಇದು ಮನೆಯ ವಾತಾವರಣವನ್ನು ಶುದ್ದಿಗೊಳಿಸುತ್ತದೆ. ಸಕಾರಾತ್ಮಕತೆಯನ್ನು ವೃದ್ಧಿಸುತ್ತದೆ. ಸಮೃದ್ಧಿಯನ್ನು ಆಕರ್ಷಿಸುತ್ತದೆ. ಮನೆ ಮಂದಿಯ ಯೋಗ ಕ್ಷೇಮವನ್ನು ಸುಧಾರಿಸುತ್ತದೆ.
ಎಲ್ಲಿ ಇಡಬೇಕು?
ದೀಪವನ್ನು ಬೆಳಗಲು ಉತ್ತರ ದಿಕ್ಕು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಇದು ಸಂಪತ್ತಿನ ದೇವರಾದ ಕುಬೇರನ ದಿಕ್ಕು. ಇಲ್ಲಿ ದೀಪವನ್ನು ಬೆಳಗುವುದರಿಂದ ಆರ್ಥಿಕ ಸಮೃದ್ಧಿಯಾಗುವ ಜತೆಗೆ ಕುಬೇರನ ಆಶೀರ್ವಾದವೂ ದೊರೆಯುತ್ತದೆ.
ಎಲ್ಲಿ ಇಡಬಾರದು?
ಉರಿಯುವ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬಾರದು. ಈ ದಿಕ್ಕು ಸಾವಿನ ದೇವರು ಯಮರಾಜನಿಗೆ ಸೇರಿದೆ. ಇಲ್ಲಿ ದೀಪವನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಆರ್ಥಿಕ ತೊಂದರೆಗಳು, ಮಾನಸಿಕ ಅಶಾಂತಿ ಉಂಟಾಗುತ್ತದೆ.
ಇದನ್ನೂ ಓದಿ: Vastu Tips: ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ತಿಳಿಯುವುದು ಹೇಗೆ?
ಯಾವ ನಿಯಮ ಪಾಲಿಸಬೇಕು?
ದೀಪವನ್ನು ಹಚ್ಚಲು ಶುದ್ಧ ತುಪ್ಪ ಅಥವಾ ಎಳ್ಳೆಣ್ಣೆಯನ್ನೇ ಬಳಸಬೇಕು. ಪ್ರತಿ ನಿತ್ಯ ಮನೆಯ ದೇವಸ್ಥಾನ ಅಥವಾ ನಿರ್ಧಿಷ್ಟ ಪೂಜಾ ಸ್ಥಳದಲ್ಲಿ ದೀಪವನ್ನು ನಿಗದಿತ ಸಮಯದಲ್ಲಿ ಬೆಳಗಿಸಿ. ರಾತ್ರಿಯಿಡೀ ಉರಿಯುವ ದೀಪವನ್ನು ಗಮನಿಸುತ್ತಿರಬೇಕು. ದೀಪದ ಸುತ್ತ ಸ್ವಚ್ಛವಾಗಿ ಇರಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿದೆ.