ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ram Navami 2026 Wishes: ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿದೆ ಶುಭಾಶಯಗಳು, ಸ್ಟೇಟಸ್ ಹಾಗೂ ಸಂದೇಶಗಳು!

ರಾಮನವಮಿ ಸತ್ಯದ ಜಯ ಮತ್ತು ಕೆಡುಕಿನ ಸೋಲಿನ ಸಂಕೇತವಾಗಿದ್ದು, ಧರ್ಮ, ಸಹಾನುಭೂತಿ ಮತ್ತು ಸಾಮರಸ್ಯದ ಮೌಲ್ಯಗಳನ್ನು ಸಾರುತ್ತದೆ. ಈ ಸಂದರ್ಭದಲ್ಲಿ ಜನರು ತಮ್ಮ ಬಂಧು-ಬಳಗ ಮತ್ತು ಸ್ನೇಹಿತರಿಗೆ ಶುಭಾಶಯಗಳನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಗೆಳೆಯರಿಗೆ, ಪ್ರೀತಿ ಪಾತ್ರರಿಗೆ ಮತ್ತು ಬಂಧು ಬಳಗಕ್ಕೆ ಶುಭಾಶಯಗಳನ್ನು ಕಳುಹಿಸಲು ಬಯಸಿದರೆ ಈ ಶುಭಾಶಯಗಳನ್ನ ಹಂಚಿಕೊಳ್ಳಿ.

ಭಕ್ತಿ ಮತ್ತು ಧರ್ಮದ ಸಂದೇಶ ಸಾರುವ ಪವಿತ್ರ ಹಬ್ಬ

ಶ್ರೀರಾಮ ನವಮಿ -

Profile
Sushmitha Jain Mar 26, 2026 8:00 AM

ಬೆಂಗಳೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀರಾಮ ನವಮಿಯನ್ನು (Shree Ram Navami) ದೇಶಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುವ ಈ ಹಬ್ಬವು ಭಗವಾನ್ ಶ್ರೀರಾಮನ ಜನ್ಮದಿನದ ಸ್ಮರಣೆಯಾಗಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ಬಾರಿ ರಾಮನವಮಿ ಮಾರ್ಚ್ 17ರಂದು ಆಚರಿಸಲಾಗುತ್ತಿದೆ.

ಈ ವಿಶೇಷ ದಿನದಂದು ಭಕ್ತರು ಉಪವಾಸ ವ್ರತಗಳನ್ನು ಆಚರಿಸಿ, ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಹೋಮಗಳು ಮತ್ತು ಭಜನೆಗಳನ್ನು ನೆರವೇರಿಸುತ್ತಾರೆ. ಉತ್ತರ ಪ್ರದೇಶದ ಅಯೋಧ್ಯೆ ಸೇರಿದಂತೆ ತಮಿಳುನಾಡಿನ ರಾಮೇಶ್ವರಂ ಹಾಗೂ ದೇಶದ ವಿವಿಧ ರಾಮ ಮಂದಿರಗಳಲ್ಲಿ ಭವ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಭಕ್ತರು ರಾಮನ ದರ್ಶನಕ್ಕಾಗಿ ದೀರ್ಘ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಹಬ್ಬದ ಅಂಗವಾಗಿ ಅನೇಕ ಸ್ಥಳಗಳಲ್ಲಿ ಅನ್ನದಾನ, ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಣೆ ಮಾಡಲಾಗುತ್ತಿದೆ. ಇದು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಮಾನತೆಯ ಸಂದೇಶವನ್ನು ಸಾರುತ್ತದೆ. “ವಸುದೈವ ಕುಟುಂಬಕಂ” ಎಂಬ ಸಂದೇಶವನ್ನು ಪ್ರತಿಪಾದಿಸುವ ಈ ಹಬ್ಬವು ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಒಂದಾಗಿಸುತ್ತದೆ. ಶ್ರೀರಾಮನವಮಿ ಕೇವಲ ಧಾರ್ಮಿಕ ಆಚರಣೆಯಾಗಿ ಮಾತ್ರವಾಗಿ ಉಳಿಯದೇ, ಇದು ಸತ್ಯ, ಧರ್ಮ ಮತ್ತು ನ್ಯಾಯದ ಮೌಲ್ಯಗಳನ್ನು ನೆನಪಿಸುವ ದಿನವಾಗಿದೆ. ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಜೀವನವು ನಿಷ್ಠೆ, ಕರ್ತವ್ಯಪಾಲನೆ ಮತ್ತು ಮಾನವೀಯತೆಗಾಗಿ ಆದರ್ಶವಾಗಿದೆ.

Astro Tips: ಈ ರತ್ನಗಳನ್ನು ಮನೆಯಲ್ಲಿ, ಪರ್ಸ್‌ನಲ್ಲಿ ಇಟ್ಟರೆ ಹಣದ ಹರಿವು ಹೆಚ್ಚುತ್ತದೆ!

ರಾಮನವಮಿ ಕೇವಲ ಒಂದು ಹಬ್ಬವಲ್ಲ, ಅದು ಸತ್ಯದ ವಿಜಯ ಮತ್ತು ಕೆಡುಕಿನ ಮೇಲಿನ ಗೆಲುವಿನ ಸಂಕೇತವೂ ಆಗಿದೆ. ಈ ಪವಿತ್ರ ದಿನವು ಧರ್ಮದ ಮಾರ್ಗವನ್ನು ಅನುಸರಿಸುವ ಮಹತ್ವವನ್ನು ಹಾಗೂ ಸಹಾನುಭೂತಿ ಮತ್ತು ಸಾಮರಸ್ಯದ ಜೀವನವನ್ನು ನಡೆಸುವ ಸಂದೇಶವನ್ನು ಸಾರುತ್ತದೆ. ಈ ಸಂದರ್ಭದಲ್ಲಿ, ನೀವು ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಆತ್ಮೀಯರಿಗೆ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದಾಗಿದ್ದು, ನಿಮ್ಮ ಗೆಳೆಯರಿಗೆ, ಪ್ರೀತಿ ಪಾತ್ರರಿಗೆ ಮತ್ತು ಬಂಧು ಬಳಗಕ್ಕೆ ಶುಭಾಶಯಗಳನ್ನು ಕಳುಹಿಸಲು ಬಯಸಿದರೆ ಈ ಶುಭಾಶಯಗಳನ್ನ(Wishes) ಹಂಚಿಕೊಳ್ಳಿ.

ಶುಭಾಶಯ ಸಂದೇಶಗಳು

  • ಶ್ರೀರಾಮನ ಆಶೀರ್ವಾದಿಂದ ನಿಮ್ಮ ಜೀವನದಲ್ಲಿ ಸದಾ ಬೆಳಕು ತುಂಬಲಿ. ರಾಮನವಮಿ ಶುಭಾಶಯಗಳು.
  • ಧರ್ಮದ ಮಾರ್ಗದಲ್ಲಿ ನಡೆಯುವ ನಿಮಗೆ ಶಕ್ತಿ ಲಭಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮನವಮಿಯ ಹಾರ್ದಿಕ ಶುಭಾಶಯಗಳು.
  • ಶ್ರೀರಾಮನ ಕೃಪೆಯಿಂದ ನಿಮ್ಮ ಜೀವನ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿರಲಿ.
  • ಈ ಪವಿತ್ರ ದಿನವು ನಿಮ್ಮ ಜೀವನದಲ್ಲಿ ಹೊಸ ಆಶೆ ಮತ್ತು ಸಂತೋಷವನ್ನು ತರಲಿ.
  • ರಾಮನ ನಾಮವು ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಶಕ್ತಿ ನೀಡಲಿ. ರಾಮನವಮಿ ಶುಭಾಶಯಗಳು.
  • ನಿಮ್ಮ ಎಲ್ಲಾ ಕನಸುಗಳು ನೆರವೇರಲಿ ಎಂದು ಶ್ರೀರಾಮನ ಬಳಿ ಪ್ರಾರ್ಥನೆ ಮಾಡುತ್ತೇನೆ.
  • ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ಸದಾ ಮುಂದುವರಿಯಲು ಶ್ರೀರಾಮನ ಅನುಗ್ರಹ ಸಿಗಲಿ.
  • ನಿಮ್ಮ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಸಲಿ. ರಾಮನವಮಿ ಶುಭಾಶಯಗಳು.
  • ರಾಮನ ಕೃಪೆಯಿಂದ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗಲಿ.
  • ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀರಾಮನ ಅನುಗ್ರಹ ಸದಾ ದೊರಕಲಿ. ನಿಮ್ಮ ಎಲ್ಲಾ ಕಷ್ಟಗಳು ಕ್ಷಣಾರ್ಧದಲ್ಲೇ ನಿವಾರಣೆಯಾಗಲಿ. ಸರ್ವರಿಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು.
  • ಈ ರಾಮನವಮಿಯಂದು ನಿಮ್ಮ ಜೀವನದಲ್ಲಿ ಹೊಸ ಬೆಳಕು ಮತ್ತು ನಂಬಿಕೆ ಮೂಡಲಿ.
  • ''ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ”
  • ರಾಮನ ನಾಮಸ್ಮರಣೆಯ ಪುಣ್ಯದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ತುಂಬಿರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮನವಮಿಯ ಶುಭಾಶಯಗಳು.