ಯುಗಾದಿ ವರ್ಷ ಭವಿಷ್ಯ: ಧನು ರಾಶಿಗೆ ಈ ವರ್ಷ ಪರಾಭವ ನಾಮ ಸಂವತ್ಸರ ಒಳಿತು ಮಾಡಲಿದೆಯೇ?
ಪರಾಭವ ನಾಮ ಸಂವತ್ಸರ ಆರಂಭ ಆಗಿದೆ. ಈ ವರ್ಷವೂ ಗ್ರಹಗತಿಗಳಲ್ಲಿ ಹಲವು ರೀತಿಯ ಬದಲಾವಣೆಯನ್ನು ಸೂಚಿಸುತ್ತದೆ. ಪ್ರತಿಯೊಂದು ರಾಶಿ- ಚಕ್ರಗಳಿಗೂ ಇದರ ಪರಿಣಾಮ ಇರುತ್ತದೆ.. ಧನು ರಾಶಿಗೆ ಈ ವರ್ಷ ಯಾವ ಫಲ ಇರಲಿದೆ? ಶುಭವೋ? ಅಶುಭವೋ ಎಂದು ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.
Pushpa Kumari
Mar 26, 2026 5:52 PM
ಬೆಂಗಳೂರು,ಮಾ.26: ಧನು ರಾಶಿಗೆ ಈ ವರ್ಷ ಮಿಶ್ರ ಫಲ ಇರಲಿದ್ದುಈ ವರ್ಷ ನಿಮಗೆ ಸುಖವೂ ಇರುತ್ತದೆ ಹಾಗೆಯೇ ನಷ್ಟವೂ ಇರುತ್ತದೆ. ಅದೇ ರೀತಿ ಅಭಿವೃದ್ಧಿಯ ಪಥದಲ್ಲಿ ಹಲವು ರೀತಿಯ ಅಡೆತಡೆಗಳು ಕೂಡ ಉಂಟಾಗುತ್ತವೆ. ಗುರು ಮಿಥುನ ರಾಶಿಯಲ್ಲಿ ಇರುವುದರಿಂದ ಆರಂಭದಲ್ಲಿ ಒಳ್ಳೆಯ ಫಲಗಳನ್ನೇ ಕಾಣುತ್ತೀರಿ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಉದ್ಯೋಗ, ಬಡ್ತಿ, ವೇತನ ಹೆಚ್ಚಳದ ಸಾಧ್ಯತೆ ಇದೆ.ಆದರೆ ವರ್ಷದ ಮಧ್ಯದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಬಹುದು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.