ದಿನ ಭವಿಷ್ಯ, ಮಾರ್ಚ್ 20, 2026: ಹೊಸ ವರ್ಷದ ಆರಂಭ: ಈ ರಾಶಿಗೆ ಯಶಸ್ಸಿನ ಹೂಮಳೆ
Horoscope Today March 20: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವೀತಿಯ ತಿಥಿ, ರೇವತಿ ನಕ್ಷತ್ರದ ಮಾರ್ಚ್ 20ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು, ಮಾ. 20: ಪರಾಭವ ನಾಮ ಸಂವತ್ಸರದ. ಉತ್ತರಾಯಣ, ವಸಂತ ಋತು, ಚೈತ್ರ ಮಾಸೆ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ರೇವತಿ ನಕ್ಷತ್ರದ ಅಧಿಪತಿ ಬುಧ. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರದಲ್ಲಿ ಬೇರೆಯವರ ಸಹಕಾರ ನಿಮಗೆ ಸಿಗದೇ ಇರಬಹುದು. ಆದ್ದರಿಂದ ಯಾವುದೇ ಮುಖ್ಯ ನಿರ್ಧಾರವನ್ನು ಇಂದು ಮಾಡಲು ಹೋಗಬೇಡಿ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ನಿಮ್ಮ ಮಾತಿನಿಂದ ಎಲ್ಲರನ್ನೂ ನೀವು ಗೆಲ್ಲುತ್ತೀರಿ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಇಂದು ಸರಾಗವಾಗಿ ನಡೆಯಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅದೃಷ್ಟದ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ. ಮಾತಿನಿಂದಲೇ ಎಲ್ಲವನ್ನು ನೀವು ಗೆಲ್ಲುತ್ತೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಆದರೂ ಕೂಡ ನಾನಾ ರೀತಿಯ ಯೋಚನೆಗಳು ನಿಮ್ಮನ್ನು ಕಾಡಬಹುದು. ಹಿಂದಿನ ದಿನದಲ್ಲಿ ಇದ್ದ ಸಮಸ್ಯೆಗಳು ನಿವಾರಣೆಯಾದರೂ ಒತ್ತಡಗಳು ನಿಮ್ಮನ್ನು ಕಾಡಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರಗಳನ್ನು ಮಾಡಲು ಹೋಗಬೇಡಿ. ಕೆಲಸ ಕಾರ್ಯದಲ್ಲಿ ಅಡೆ-ತಡೆ ಉಂಟಾಗುವ ಸಾಧ್ಯತೆ ಇದೆ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಎಲ್ಲರಿಂದಲೂ ನಿಮಗೆ ಒಳಿತಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಶತ್ರುಗಳು ಹಿಮ್ಮೆಟ್ಟಬಹುದು. ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆದಲ್ಲ.
ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದರೂ ನಾನಾ ರೀತಿಯ ಯೋಚನೆಗಳು ನಿಮ್ಮನ್ನು ಕಾಡಬಹುದು. ಮಕ್ಕಳ ಜತೆ ನೀವು ಸಿಟ್ಟುಗೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ. ಆದರೂ ನಿಮ್ಮ ಪ್ರೀತಿಯ ವರ್ತನೆಗಳು ಮನೆಯವರಿಗೆ ಇಂದು ಬೇಕಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಅತೀ ಉತ್ತಮ ದಿನವಾಗಲಿದೆ. ಮಾಧ್ಯಮ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಲಿದೆ.
ಕುಂಭರಾಶಿ: ಈ ರಾಶಿಯವರ ವೈಯಕ್ತಿಕ ಜೀವನದಲ್ಲಿ ಬದಲಾವಣೆ ಕಂಡುಬರುವ ಜತೆಗೆ ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ. ಮನೆಯ ಕಡೆಗೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಕ್ಷೇಷ ದೂರವಾಗಲಿದೆ. ಅದೇ ರೀತಿ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ.