Vastu Tips: ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ ಈ ಸಸ್ಯಗಳು
ಮನೆಯೊಳಗೆ ಅಲಂಕಾರಕ್ಕಾಗಿ ಸಸ್ಯಗಳನ್ನು ಸೇರಿಸುವುದು ಒಳ್ಳೆಯದು. ಯಾಕೆಂದರೆ ಇದು ಮನೆಗೆ ಸ್ವಲ್ಪ ಹಸಿರನ್ನು ಸೇರಿಸಲು ಉತ್ತಮ ಮಾರ್ಗವಾಗಿದೆ. ಇದರಿಂದ ಮನೆಯಲ್ಲಿ ಪ್ರಶಾಂತ ವಾತಾವರಣವನ್ನು ಸೃಷ್ಟಿಸಬಹುದು. ಅನೇಕ ಸಸ್ಯಗಳಿಂದ ಮನೆಗೆ, ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆದರೂ ಕೆಲವೊಂದು ಸಸ್ಯಗಳು ಮನೆಗೆ ಸೂಕ್ತವಲ್ಲ ಎನ್ನುತ್ತದೆ ವಾಸ್ತು (Vastu Tips) ಶಾಸ್ತ್ರ.


ಮನೆ ಸುಂದರವಾಗಿ ಕಾಣಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದಕ್ಕಾಗಿಯೇ ನಾನಾ ತೆರನಾದ ವಸ್ತುಗಳನ್ನು ತಂದು ಮನೆಯಲ್ಲಿ ಇರಿಸಿಕೊಳ್ಳುತ್ತೇವೆ. ಎಲ್ಲರೂ ಅವರವರ ಅಭಿರುಚಿಗೆ ತಕ್ಕುದಾದ ವಸ್ತುಗಳನ್ನು ಮನೆಯಲ್ಲಿ ಇರಿಸಿ ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಪರಿಸರ ಪ್ರಿಯರು ಮನೆಯೊಳಗೂ ಗಿಡ, ಮರಗಳು ಇರಬೇಕು ಎಂದು ಬಯಸುತ್ತಾರೆ. ಮನೆಯೊಳಗೆ ದೊಡ್ಡದೊಡ್ಡ ಗಿಡ, ಮರಗಳನ್ನು ಇರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸಣ್ಣಪುಟ್ಟ ಗಿಡಗಳು, ಗಿಡ್ಡ ಜಾತಿಯ ಸಸ್ಯಗಳನ್ನು ತಂದು ಇರಿಸಿಕೊಳ್ಳುತ್ತಾರೆ.
ಮನೆಯೊಳಗೆ ಅಲಂಕಾರಕ್ಕೆ ಎಂದು ನಾವು ಗಿಡ ಮರಗಳನ್ನು ತಂದು ಇಡುವ ಮುನ್ನ ಕೆಲವೊಂದು ವಾಸ್ತು ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಮನೆಯೊಳಗೆ ಅಲಂಕಾರಕ್ಕಾಗಿ ಸಸ್ಯಗಳನ್ನು ಸೇರಿಸುವುದು ಒಳ್ಳೆಯದು. ಯಾಕೆಂದರೆ ಇದು ಮನೆಗೆ ಸ್ವಲ್ಪ ಹಸಿರನ್ನು ಸೇರಿಸಲು ಉತ್ತಮ ಮಾರ್ಗವಾಗಿದೆ. ಇದರಿಂದ ಮನೆಯಲ್ಲಿ ಪ್ರಶಾಂತ ವಾತಾವರಣವನ್ನು ಸೃಷ್ಟಿಸಬಹುದು. ಅನೇಕ ಸಸ್ಯಗಳಿಂದ ಮನೆಗೆ, ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆದರೂ ಕೆಲವೊಂದು ಸಸ್ಯಗಳು ಮನೆಗೆ ಸೂಕ್ತವಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ಕೆಲವು ಸಸ್ಯಗಳು ವಿಷಕಾರಿ ಮತ್ತು ಮನೆಗೆ ದುರದೃಷ್ಟವನ್ನು ತರುತ್ತವೆ ಎನ್ನಲಾಗುತ್ತದೆ. ಇಂತಹ ಸಸ್ಯಗಳನ್ನು ಎಂದಿಗೂ ಮನೆಯಲ್ಲಿ ಇರಿಸಬಾರದು.
ವಾಸ್ತು ಶಾಸ್ತ್ರಜ್ಞರಾದ ದಿವ್ಯಾ ಛಾಬ್ರಾ ಅವರು ಐದು ಪ್ರಕಾರದ ಸಸ್ಯಗಳನ್ನು ಮನೆಯಲ್ಲಿ ಇಡಬಾರದು ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವು ಮನೆ ಮಂದಿಯಲ್ಲಿ ರೋಗಗಳನ್ನು ಉಂಟು ಮಾಡುತ್ತದೆ, ಕೆಲವೊಂದು ವಸ್ತುಗಳನ್ನು ಹಾಳು ಮಾಡಬಹುದು ಮತ್ತು ಮನೆಗೆ ನಕಾರಾತ್ಮಕತೆಯನ್ನು ತರಬಹುದು.
ಮನೆಯಲ್ಲಿ ಹುಣಸೆ ಗಿಡಗಳನ್ನು ಇಡಬಾರದು. ಈ ಸಸ್ಯಗಳು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತವೆ. ಇದು ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಹೀಗಾಗಿ ಮನೆಯೊಳಗೆ ಮಾತ್ರವಲ್ಲ ಮನೆಯ ಸುತ್ತಮುತ್ತಲೂ ಇದನ್ನು ನೆಡಬಾರದು. ಈ ಸಸ್ಯವು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಬೋನ್ಸೈ ಸಸ್ಯಗಳು ನೋಡಲು ಸುಂದರವಾಗಿರುತ್ತದೆ. ಆದರೆ ಅವುಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಈ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ವೃತ್ತಿ ಮತ್ತು ವ್ಯವಹಾರಗಳಲ್ಲಿ ಅಡ್ಡಿಯುಂಟಾಗುತ್ತದೆ. ಮನೆ ಮಂದಿಯ ಪ್ರಗತಿಯಲ್ಲಿ ಇದು ನಕಾರಾತ್ಮಕತೆಯನ್ನು ಉಂಟು ಮಾಡುತ್ತದೆ. ಯಶಸ್ಸಿಗೆ ಅಡ್ಡಿಯಾಗುವುದು.
ಇದನ್ನೂ ಓದಿ: Vastu Tips: ಮನೆಯೊಳಗೆ ಶೌಚಾಲಯ ನಿರ್ಮಾಣ; ಪಾಲಿಸಲೇಬೇಕು ಕೆಲವು ನಿಯಮ
ಕಳ್ಳಿ ಗಿಡಗಳು ಮನೆಗಳಿಗೆ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಎಲೆಗಳ ಮೇಲಿನ ಚೂಪಾದ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ಈ ಸಸ್ಯವು ಕುಟುಂಬದಲ್ಲಿ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಕಳ್ಳಿ ಮತ್ತು ಇತರ ಮುಳ್ಳಿನ ಸಸ್ಯಗಳು ಮನೆಯಲ್ಲಿ ಅನಗತ್ಯ ಜಗಳಗಳನ್ನು ಉಂಟು ಮಾಡುತ್ತದೆ. ಇದು ಮನೆಯಲ್ಲಿ ಅವ್ಯವಸ್ಥೆಯನ್ನು ಬೆಳೆಸುತ್ತವೆ. ದಂಪತಿಯ ವೈವಾಹಿಕ ಜೀವನದಲ್ಲಿ ತೊಂದರೆಯನ್ನು ಉಂಟು ಮಾಡುತ್ತದೆ. ಇದರಿಂದ ಆರ್ಥಿಕ ತೊಂದರೆಗಳು ಎದುರಾಗುತ್ತದೆ. ಈ ಸಸ್ಯವನ್ನು ಲಿವಿಂಗ್ ರೂಮ್, ಬೆಡ್ ರೂಮ್ ಹಾಗೂ ಮನೆಯ ಮುಖ್ಯ ದ್ವಾರದ ಬಳಿ ಇರಿಸಲೇಬಾರದು.
ಮನೆಯಲ್ಲಿ ಹತ್ತಿ ಗಿಡಗಳನ್ನು ಅಲಂಕಾರಕ್ಕಾಗಿ ಇಡಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಶುಭ ಸಸ್ಯವಲ್ಲ. ಇವನ್ನು ಮನೆಯಲ್ಲಿ ಇಡುವುದು ಎಂದರೆ ಮನೆಗೆ ದುಃಖ ಮತ್ತು ದುರದೃಷ್ಟವನ್ನು ಆಹ್ವಾನಿಸುವುದು ಎಂದರ್ಥ.

ಮನೆಯ ಸೌಂದರ್ಯ ಹೆಚ್ಚಿಸಲು ಕೆಲವರು ಐವಿ (ಪೊದೆಗಳಂತಹ) ಗಿಡವನ್ನು ತರುತ್ತಾರೆ. ಐವಿ ಸಸ್ಯಗಳನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸಾಕುಪ್ರಾಣಿಗಳಿಗೂ ಒಳ್ಳೆಯದಲ್ಲ. ಈ ಗಿಡಗಳು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ.. ಅಲ್ಲದೇ ಇದನ್ನು ತಿನ್ನುವುದು ತುಂಬಾ ಅಪಾಯಕಾರಿಯಾಗಿದೆ.