ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯೊಳಗೆ ಶೌಚಾಲಯ ನಿರ್ಮಾಣ; ಪಾಲಿಸಲೇಬೇಕು ಕೆಲವು ನಿಯಮ

ಒಂದು ಕಾಲದಲ್ಲಿ ಶೌಚಾಲಯಗಳು ಮನೆಯ ಹೊರಗಿದ್ದವು. ಆದರೆ ಈಗ ಎಲ್ಲವೂ ಸುಲಭವಾಗಬೇಕು ಎನ್ನುವ ಕಾರಣಕ್ಕೆ ಮನೆಯ ಒಳಗೆ ಅದರಲ್ಲೂ ಪ್ರತಿ ಬೆಡ್ ರೂಮ್ ನ ಒಳಗೆ ಶೌಚಾಯವನ್ನು ಕಟ್ಟಿಸುತ್ತೇವೆ. ಹೀಗೆ ಮಾಡುವುದು ನಮ್ಮ ಅನುಕೂಲಕ್ಕಾದರೂ ವಾಸ್ತು ಶಾಸ್ತ್ರದಲ್ಲಿ (Vastu Shastra) ಇದಕ್ಕೆ ಅನುಮತಿ ಇದೆಯೇ, ಇದ್ದರೆ ಪಾಲಿಸಬೇಕಾದ ನಿಯಮಗಳು ಏನು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಮನೆಯೊಳಗೆ  ಶೌಚಾಲಯ ಎಲ್ಲಿ ಇರಬಾರದು ಗೊತ್ತೇ?

ಒಂದು ಕಾಲದಲ್ಲಿ ಶೌಚಾಲಯಗಳು (vastu for toilet) ಮನೆಯ ( vastu for home) ಹೊರಗಿದ್ದವು. ಆದರೆ ಈಗ ಎಲ್ಲವೂ ಸುಲಭವಾಗಬೇಕು ಎನ್ನುವ ಕಾರಣಕ್ಕೆ ಮನೆಯ ಒಳಗೆ ಅದರಲ್ಲೂ ಪ್ರತಿ ಬೆಡ್ ರೂಮ್ ನ ಒಳಗೆ ಶೌಚಾಯವನ್ನು ಕಟ್ಟಿಸುತ್ತೇವೆ. ಹೀಗೆ ಮಾಡುವುದು ನಮ್ಮ ಅನುಕೂಲಕ್ಕಾದರೂ ವಾಸ್ತು ಶಾಸ್ತ್ರದಲ್ಲಿ (vastu Shastra) ಇದಕ್ಕೆ ಅನುಮತಿ ಇದೆಯೇ, ಇದ್ದರೆ ಪಾಲಿಸಬೇಕಾದ ನಿಯಮಗಳು (vastu tips) ಏನು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಮನೆಯೊಳಗೆ ಶೌಚಾಲಯ ನಿರ್ಮಿಸುವುದರಿಂದ ಮನೆಯಲ್ಲಿ ಸುಲಭವಾಗಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಪಡೆಯುತ್ತದೆ. ಹೀಗಾಗಿ ಮನೆಯೊಳಗೆ ಶೌಚಾಲಯ ನಿರ್ಮಿಸುವಾಗ ಕೆಲವೊಂದು ಅಂಶಗಳನ್ನು ಪರಿಗಣಿಸುವುದು ಬಹಳ ಮುಖ್ಯವಾಗಿದೆ.

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮತ್ತು ಸ್ಥಳವು ಬಹಳ ಮುಖ್ಯವಾಗಿದೆ. ಮನೆಯ ಪ್ರತಿಯೊಂದು ದಿಕ್ಕು ಕೂಡ ಒಂದೊಂದು ದೇವರಿಗೆ ಸೇರಿರುತ್ತದೆ. ಹೀಗಾಗಿ ಮನೆಯು ವಾಸ್ತು ಪ್ರಕಾರವಾಗಿದ್ದರೆ ಮತ್ತು ಮನೆಯಲ್ಲಿ ವಾಸ್ತು ಶಾಸ್ತ್ರವನ್ನು ಪಾಲಿಸಿದರೆ ಮಾತ್ರ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ. ಜೊತೆಗೆ ಮನೆ ಅಭಿವೃದ್ಧಿಯನ್ನೂ ಹೊಂದುತ್ತದೆ.

ಮನೆಯ ಯಾವುದೇ ಭಾಗವು ವಾಸ್ತುವಿಗೆ ವಿರುದ್ಧವಾಗಿದ್ದರೆ ಮನೆಯಲ್ಲಿ ನಕಾರಾತ್ಮಕತೆ ವೃದ್ಧಿಯಾಗುತ್ತದೆ. ಹೀಗಾಗಿ ಮನೆಯ ಪ್ರತಿಯೊಂದು ಸ್ಥಳವು ಮುಖ್ಯವೆಂದು ಪರಿಗಣಿಸಲ್ಪಟ್ಟಿದೆ. ಇನ್ನು ಮನೆಯ ಶೌಚಾಲಯವು ವಿಶೇಷ ಸ್ಥಾನವನ್ನು ಹೊಂದಿದೆ. ಯಾಕೆಂದರೆ ಇದು ನಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳ ಮೂಲ ಎಂದು ಪರಿಗಣಿಸಲಾಗಿದೆ.

ಹೀಗಾಗಿ ಮನೆ ನಿರ್ಮಾಣದ ವೇಳೆ ಶೌಚಾಲಯಕ್ಕೆ ಸಂಬಂಧಿಸಿದ ವಾಸ್ತುವಿಗೆ ವಿಶೇಷ ಗಮನ ನೀಡಬೇಕು. ಅದರಲ್ಲೂ ಮುಖ್ಯವಾಗಿ ಮನೆಯ ಶೌಚಾಲಯದ ಸುತ್ತಲೂ ಏನು ಇರಬಾರದು ಎಂಬುದನ್ನು ತಿಳಿದುಕೊಂಡಿರಬೇಕು. ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಅವರು ಈ ಕುರಿತು ಹೇಳುವುದು ಹೀಗೆ..

tl1

ಪೂಜಾ ಸ್ಥಳ

ಶೌಚಾಲಯವನ್ನು ಅಶುದ್ಧ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನಕಾರಾತ್ಮಕ ಶಕ್ತಿಯ ನಿರ್ಮಾಣವಾಗುತ್ತದೆ. ಹೀಗಾಗಿ ಶೌಚಾಲಯದ ಬಳಿ ಎಂದಿಗೂ ದೇವರ ಕೋಣೆ ಇರಬಾರದು ಎನ್ನುತ್ತದೆ ವಾಸ್ತುಶಾಸ್ತ್ರ. ದೇವರ ಕೋಣೆಯನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನಿರ್ಮಿಸಿದರೆ ಶೌಚಾಲಯವನ್ನು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ಮಲಗುವ ಕೋಣೆ

ಮಲಗುವ ಕೋಣೆಯು ವೈವಾಹಿಕ ಜೀವನದ ಸುಖ, ಸಂತೋಷವನ್ನು ಪ್ರತಿನಿಧಿಸುತ್ತದೆ. ಈ ಕೋಣೆಯ ಬಳಿ ಶೌಚಾಲಯ ನಿರ್ಮಿಸುವುದರಿಂದ ದಾಂಪತ್ಯ ಜೀವನದಲ್ಲಿ ತೊಂದರೆಗಳು ಮತ್ತು ಉದ್ವಿಗ್ನತೆಗಳನ್ನು ಉಂಟುಮಾಡುತ್ತದೆ. ಶೌಚಾಲಯದಿಂದ ಉತ್ಪತ್ತಿಯಾಗುವ ನಕಾರಾತ್ಮಕ ಶಕ್ತಿಗಳು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ತರುತ್ತದೆ. ಪತಿ ಮತ್ತು ಪತ್ನಿಯ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Vastu Tips: ಉಪ್ಪು ನೀರಿನಿಂದ ಕೈ ತೊಳೆಯುವುದು ಸರಿಯೇ?

ಅಡುಗೆಮನೆ

ಅಡುಗೆ ಮನೆಯು ಮನೆಯ ಪ್ರಮುಖ ಭಾಗವಾಗಿದೆ. ಇಲ್ಲಿ ತಯಾರಿಸುವ ಆಹಾರವನ್ನು ಧಾರ್ಮಿಕ ದೃಷ್ಟಿಕೋನದಿಂದ ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ತಾಯಿ ಅನ್ನಪೂರ್ಣೆಯು ಇಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗುತ್ತದೆ. ಹೀಗಾಗಿ ಅಡುಗೆ ಮನೆಯು ಸಮೀಪದಲ್ಲಿ ಶೌಚಾಲಯ ಇರಬಾರದು. ಅಡುಗೆಮನೆ ಶೌಚಾಲಯದ ಬಳಿ ಇರುವುದರಿಂದ ಈ ಸ್ಥಳದ ಸಕಾರಾತ್ಮಕತೆ ನಾಶವಾಗುತ್ತದೆ.

ಅಧ್ಯಯನ ಕೊಠಡಿ

ಶೌಚಾಲಯದ ಬಳಿ ಅಧ್ಯಯನ ಕೊಠಡಿಯನ್ನು ಎಂದಿಗೂ ನಿರ್ಮಿಸಬಾರದು. ಯಾಕೆಂದರೆ ಇದು ಮಕ್ಕಳ ಅಧ್ಯಯನಕ್ಕೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕೊಠಡಿಯಲ್ಲಿ ಏಕಾಗ್ರತೆಯಿಂದ ಅಧ್ಯಯನ ಮಾಡುವವರಿಗೆ ತೊಂದರೆಗಳಾಗುತ್ತವೆ. ಶೌಚಾಲಯದಿಂದ ಉತ್ಪತ್ತಿಯಾಗುವ ನಕಾರಾತ್ಮಕ ಶಕ್ತಿಯು ಮಕ್ಕಳ ಯಶಸ್ಸಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ.