ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 29, 2026: ಈ ರಾಶಿಯವರಿಗೆ ಇಂದು ಕೆಲಸ ಕಾರ್ಯದಲ್ಲಿ ಭಾರೀ ಯಶಸ್ಸು!

Horoscope Today March 29: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ಏಕದಾಶಿ ತಿಥಿ, ಆಶ್ಲೇಷಾ ನಕ್ಷತ್ರದ ಮಾರ್ಚ್ 29ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಯರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚು

ಇಂಟರ್ ನೆಟ್ ಚಿತ್ರ -

Profile
Pushpa Kumari Mar 29, 2026 6:56 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಆಶ್ಲೇಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಆಶ್ಲೇಷಾ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮನೆಯಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು‌. ಅದೇ ರೀತಿ ಮನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳು ಕೂಡ ಉಂಟಾಗಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಒಳ್ಳೆಯ ದಿನಗಳು ಬರುತ್ತಿವೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹಾಗೂ ಮಾತಿನ ಚಕಮಕಿಯಿಂದ ಎಲ್ಲವನ್ನು ಗೆಲ್ಲಬಹುದು.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ನಿಮ್ಮ ಸಂಸಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ‌ಮನೆಯವರ ಜೊತೆ ವಿನಯತೆಯಿಂದ ವರ್ತಿಸಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ನೀವು ಹೇಳಿದೆಲ್ಲವೂ ಇಂದು ನಡೆಯುತ್ತದೆ. ಉತ್ತಮ ಮಾರ್ಗ ದರ್ಶನಗಳು ಕೂಡ ಪ್ರಾಪ್ತಿಯಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಯಾವುದು ಕೂಡ ನಿಮ್ಮ ಪರವಾಗಿ ಇಂದು ನಡೆಯುವುದಿಲ್ಲ. ಅದೇ ರೀತಿ ಮಿತ್ರತ್ವದಲ್ಲಿ ಒಡಕು ಕಾಣುವ ಸಾಧ್ಯತೆಗಳು ಕೂಡ ಇರುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ‌ಸಿಗಲಿದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ಅದೇ ರೀತಿ ಧನ ಆಗಮನ ಕೂಡ ಪ್ರಾಪ್ತಿಯಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿ ತುಂಬಾನೇ ಜಾಸ್ತಿಯಾಗಿರುತ್ತದೆ. ಅದೇ ರೀತಿ ಯಶಸ್ಸು ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ.

Vastu Tips: ಅಡುಗೆಮನೆಯ ವಾಸ್ತು ನಿಯಮಗಳು: ಆರೋಗ್ಯ, ಸಮೃದ್ಧಿಗೆ ಈ ಸರಳ ಟಿಪ್ಸ್ ಪಾಲಿಸಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಆದರೆ ಭಗವಂತನ ಹಾಗೂ ಹಿರಿಯರ ಆಶೀರ್ವಾದ ಪಡೆಯುವುದನ್ನು ನೀವು ಮರೆಯಬೇಡಿ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಮನಸ್ಸಿಗೆ ನೆಮ್ಮದಿ ಇದ್ದು ಕಾರ್ಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ‌. ಆದರೂ ಕೂಡ ಪ್ರೀತಿ ಪಾತ್ರರ ಜೊತೆ ಬೇಸರ ಉಂಟಾಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಬಿಸೆನೆಸ್ ವ್ಯವಹಾರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಆರೋಗ್ಯದಲ್ಲಿ ಅತೀ ಹೆಚ್ಚಿನ ಸುಧಾರಣೆ ಕಂಡು ಬರುತ್ತದೆ. ಮನಸ್ಸಿಗೆ ಕೂಡ ನೆಮ್ಮದಿ ಪ್ರಾಪ್ತಿ ಯಾಗುತ್ತದೆ

ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಬುದ್ದಿವಂತಿಕೆಯಿಂದ ಎಲ್ಲವನ್ನು ಗೆಲ್ಲಬಹುದು.