ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಸೆಪ್ಟೆಂಬರ್ 14, 2026: ಇಂದು ಗಣೇಶ ಚತುರ್ಥಿ! ಈ ರಾಶಿಯವರ ಜೀವನದಲ್ಲಿ ಮುಖ್ಯ ಬದಲಾವಣೆ ಸಾಧ್ಯ

Horoscope Today September 14th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ತೃತೀಯಾ ತಿಥಿಯ, ಚಿತ್ತಾ ನಕ್ಷತ್ರದ ಸೆಪ್ಟೆಂಬರ್‌ 14ನೇ ತಾರೀಖಿನ ಸೋಮವಾರದ ಈ ದಿನ ಗಣೇಶ ಚತುರ್ಥಿ ಯಾಗಿದೆ.ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.

ಈ ರಾಶಿಗೆ ಇಂದು ಗಣೇಶನ ಅನುಗ್ರಹ ಪ್ರಾಪ್ತಿ!

ಇಂಟರ್ ನೆಟ್ ಚಿತ್ರ -

Profile
Pushpa Kumari Sep 14, 2026 6:01 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಕೆಲಸದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಕೈಗೊಳ್ಳುವುದು ಅಗತ್ಯವಾಗಿ ಇರುತ್ತದೆ.

ವೃಷಭರಾಶಿ: ಮನೆಯಲ್ಲಿ ನೆಮ್ಮದಿ ಇದ್ದು ಜಮೀನು ಆಸ್ತಿ ಕೆಲಸಗಳು ಮುಂದೆ ಹೋಗುತ್ತವೆ. ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿದೆ.

ಮಿಥುನ ರಾಶಿ: ಹೊಸ ಯೋಜನೆಗಳನ್ನು ಆರಂಭಿಸಲು ಅನುಕೂಲಕರ ದಿನವಾಗಿದೆ. ಚಿಕ್ಕ ಪ್ರಯಾಣವು ಬಹಳಷ್ಟು ಲಾಭವನ್ನು ಇಂದು ತಂದುಕೊಡಬಹುದು.

ಕಟಕ ರಾಶಿ: ಈ ರಾಶಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು. ಹಾಗಾಗಿ ತಾಳ್ಮೆಯಿಂದ ಇದ್ದರೆ ಒಳ್ಳೆಯದು‌. ಕುಟುಂಬದವ ರೊಂದಿಗೆ ಇಂದು ಉತ್ತಮ ಸಮಯ ಕಳೆಯುವಿರಿ.

ಸಿಂಹ ರಾಶಿ: ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ಅಂದುಕೊಂಡ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ‌

Vastu Tips: ವಾಸ್ತು ಪ್ರಕಾರ ಮನೆಗೆ ಯಾವ ಬಣ್ಣ ಸೂಕ್ತ? ಜೀವನದಲ್ಲಿ ಬದಲಾವಣೆ ತರುವ ಬಣ್ಣಗಳು ಇವು!

ಕನ್ಯಾ ರಾಶಿ: ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ದೊರೆಯಬಹುದು. ಉದ್ಯೋಗ ಹುಡುಕುತ್ತಿದ್ದವರಿಗೆ ಹೊಸ ಅವಕಾಶ ಸಿಗಬಹುದು.

ತುಲಾ ರಾಶಿ: ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಉತ್ತಮ ಲಾಭ ತಂದು ಕೊಡಬಹುದು.

ವೃಶ್ಚಿಕ ರಾಶಿ: ಈ ರಾಶಿಯವರು ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಇಂದು ಜಾಗೃತಿ ವಹಿಸುವುದು ಅಗತ್ಯ.

ಧನು ರಾಶಿ: ಈ ರಾಶಿಗೆ ಪ್ರಯಾಣದ ಸಾಧ್ಯತೆ ಇದೆ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಕುಟುಂಬದವರ ಬೆಂಬಲ ಇಂದು ಹೆಚ್ಚಾಗುತ್ತದೆ.

ಮಕರ ರಾಶಿ: ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆದರೆ ಖರ್ಚು ನಿಯಂತ್ರಣ ಮಾಡಿದರೆ ಇಂದು ಉತ್ತಮ.ಆರೋಗ್ಯದಲ್ಲಿ ಜಾಗೃತಿ ಅಗತ್ಯ ಇರುತ್ತದೆ.

ಕುಂಭ ರಾಶಿ: ಈ ರಾಶಿಗೆ ಹೊಸ ವಿಚಾರಗಳು ಮತ್ತು ಯೋಜನೆ ಗಳು ಯಶಸ್ಸು ಕಾಣಬಹುದು. ಸ್ನೇಹಿತರ ನೆರವು ಕೂಡ ಸಿಗಲಿದೆ.

ಮೀನ ರಾಶಿ: ಮನಸ್ಸಿನಲ್ಲಿದ್ದ ಕೆಲವು ಗೊಂದಲಗಳು ನಿವಾರಣೆ ಯಾಗುತ್ತದೆ. ಕಷ್ಟಗಳು ದೂರವಾಗಿ ಹಣಕಾಸಿನಲ್ಲಿ ಸ್ಥಿರತೆಯನ್ನು ಕಾಣುತ್ತೀರಿ.