ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಎಪ್ರಿಲ್ 12, 2026: ಚಂದ್ರನಿಂದ ಈ ರಾಶಿಗೆ ಇಂದು ವ್ಯವಹಾರದಲ್ಲಿ ಲಾಭ

Horoscope Today April 12: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ದಶಮಿ ತಿಥಿ, ಶ್ರವಣ ನಕ್ಷತ್ರದ ಎಪ್ರಿಲ್ 12ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಈ ರಾಶಿಗೆ ಇಂದು ಹಣಕಾಸಿನಲ್ಲಿ ಭಾರೀ ಲಾಭ

ಸಂಗ್ರಹ ಚಿತ್ರ -

Profile
Pushpa Kumari Apr 12, 2026 6:00 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಶ್ರವಣ ನಕ್ಷತ್ರ ಇದ್ದು ಅಧಿಪತಿ ಚಂದ್ರ ಆಗಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದ್ದು ಎಲ್ಲರೂ ನಿಮ್ಮ ಪರವಾಗಿ ಇರುತ್ತಾರೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಆದರೆ ತಾಯಿಯ ಅನುಗ್ರಹವನ್ನು ನೀವು ವಿಶೇಷವಾಗಿ ಪಡೆಯುವ ದಿನವಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ನಿಮ್ಮ ಪ್ರೀತಿ ಪಾತ್ರರಿಂದ ಕೂಡ ಯಾವುದೇ ಸಹಕಾರ ನಿಮಗೆ ಸಿಗದೇ ಇರಬಹುದು. ಪ್ರೇಮ, ಪ್ರೀತಿ ಪ್ರಕರಣದಲ್ಲಿ ನಿಮಗೆ ಸೋಲು ಉಂಟಾಗಬಹುದು‌.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಯಶಸ್ಸು ಸಿಗುತ್ತದೆ..ಹಣಕಾಸಿನ ವ್ಯವಹಾರದಲ್ಲಿ ಲಾಭ ಸಿಗಲಿದ್ದು ದಾಂಪತ್ಯದಲ್ಲೂ ನೆಮ್ಮದಿ ಸಿಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಶತ್ರುನಾಶ, ಶತ್ರು ಧ್ವಂಸ ಆಗಲಿದ್ದು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಪಡೆಯುತ್ತೀರಿ‌.

Vastu Tips: ಅಡುಗೆ ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ ದಾರಿದ್ರ್ಯ ಹೆಚ್ಚಾಗುತ್ತದೆ!

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು.ಅದೇ ರೀತಿ ವಿವಿಧ ಟೀಕೆಗಳು ಕೂಡ ಕೇಳಿಬರಬಹುದು‌

ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮನೆಯಲ್ಲೂ ಕೂಡ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ‌. ಕಾರ್ಯಕ್ಷೇತ್ರದಲ್ಲಿ ಕೂಡ ಸಮಸ್ಯೆ ಉಂಟಾಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಇರೋರಿಗೆ ಲಾಭದಾಯಕ ದಿನವಾಗಿದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಮನೆಯಲ್ಲಿ ಬಹಳ ಭಾವುಕತೆಯ ವಾತಾವರಣ ಇರುತ್ತದೆ‌. ಇತರರ ಜೊತೆ ನಿಮ್ಮ ಸಮಸ್ಯೆ ಹಂಚಿಕೊಳ್ಳುವ ದಿನ ನಿಮ್ಮದು ಆಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಚಂದ್ರ ನಿಮ್ಮ ರಾಶಿಗೆ ಪ್ರವೇಶ ಮಾಡಿರುವುದರಿಂದ ಎಲ್ಲ ಕೆಲಸದಲ್ಲಿ ಜಯ.. ಮುಂದಿನ ಕೆಲಸ ಕಾರ್ಯಕ್ಕೆ ಮಾರ್ಗದರ್ಶನ ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಯಾವುದೇ ನಿಮ್ಮ ಪರವಾಗಿ ಇಂದು ನಡೆಯುವುದಿಲ್ಲ.

ಮೀನ ರಾಶಿ: ಮೀನ ರಾಶಿಗೆ ಅತೀ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಆಗಮನವಾಗುತ್ತದೆ.