ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Astro Tips: ಮನೆಯಲ್ಲಿ ತುಳಸಿ ಗಿಡ ಇದ್ದರೆ ಈ ಕೆಲಸ ತಪ್ಪದೇ ಮಾಡಿ: ಲಕ್ಷ್ಮೀ ಕೃಪೆ ಖಚಿತ!

ತುಳಸಿ ಗಿಡವು ಜ್ಯೋತಿಷ್ಯದ ಪ್ರಕಾರ ದೋಷ ನಿವಾರಣೆ, ಸಂಪತ್ತು ಮತ್ತು ಮಾನಸಿಕ ಶಾಂತಿಗೆ ಸಹಾಯಕವಾಗುತ್ತದೆ. ತುಳಸಿಯ ಬೇರು, ಮಣ್ಣು ಮತ್ತು ಎಲೆಗಳಿಂದ ಸರಳ ಉಪಾಯಗಳನ್ನು ಅನುಸರಿಸಿದರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ದೋಷ ನಿವಾರಣೆಗೂ ಸಹಾಯಕವಾಗಿದೆ.

ಹಣಕಾಸಿನ ಕಷ್ಟವೇ ಇಲ್ಲದಂತೆ ಮಾಡುತ್ತದೆ ಪಾವನ ತುಳಸಿ!

ತುಳಸಿ -

Profile
Sushmitha Jain Mar 27, 2026 8:01 AM

ಬೆಂಗಳೂರು: ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಸಸ್ಯವಾಗಿ ಪರಿಗಣಿಸಲಾಗುತ್ತದೆ. ಇದು ವಿಷ್ಣುವಿಗೆ ಪ್ರಿಯವಾಗಿದ್ದು, ಲಕ್ಷ್ಮೀ ದೇವಿಯ ಸ್ವರೂಪವೆಂದು ನಂಬಲಾಗುತ್ತದೆ. ಮನೆಗೆ ತುಳಸಿ ಗಿಡವಿದ್ದರೆ ಆ ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ ತುಳಸಿಗೆ ಪೂಜೆ ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಜ್ಯೋತಿಷ್ಯದ ಪ್ರಕಾರ (Astro Tips), ತುಳಸಿ ಗಿಡವು ಕೇವಲ ಪವಿತ್ರ ಸಸ್ಯವಷ್ಟೇ ಅಲ್ಲ, ವ್ಯಕ್ತಿಯ ಜೀವನದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ನಂಬಲಾಗಿದೆ. ತುಳಸಿಯ ಸಣ್ಣ ಬೇರುದಿಂದ ಹಿಡಿದು ಅದರ ಮಣ್ಣಿನವರೆಗೂ ಶುಭಫಲ ನೀಡುವ ಗುಣವಿದೆ ಎನ್ನಲಾಗುತ್ತದೆ. ಆದ್ದರಿಂದ, ತುಳಸಿಗೆ ಸಂಬಂಧಿಸಿದ ಕೆಲವು ಪ್ರಮುಖ ಜ್ಯೋತಿಷ್ಯ ಪರಿಹಾರಗಳನ್ನು ತಿಳಿದುಕೊಳ್ಳೋಣ:

ತುಳಸಿ ಬೇರಿನಿಂದ ದೋಷ ನಿವಾರಣೆ

ಜಾತಕದಲ್ಲಿ ನವಗ್ರಹ ದೋಷ ಅಥವಾ ಶನಿ ದೋಷ ಇದ್ದರೆ, ತುಳಸಿಯ ಬೇರನ್ನು ತಾಯತದಲ್ಲಿ ಇಟ್ಟು ಕುತ್ತಿಗೆಗೆ ಧರಿಸುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಜೀವನದಲ್ಲಿ ಸ್ಥಿರತೆ ಬರುತ್ತದೆ.

ತುಳಸಿಗೆ ನೀರು ಅರ್ಪಿಸುವ ಮಹತ್ವ

ಪ್ರತಿದಿನ ಸ್ನಾನದ ನಂತರ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಲಕ್ಷ್ಮೀ ದೇವಿಯ ಕೃಪೆ ದೊರೆಯುತ್ತದೆ. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ನವಗ್ರಹ ದೋಷವೂ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

ಹಣಕಾಸಿನ ಸಮಸ್ಯೆಗೆ ತುಳಸಿ ಪರಿಹಾರ

ಹಣಕಾಸಿನ ತೊಂದರೆ ಎದುರಿಸುತ್ತಿರುವವರು ತುಳಸಿಯ ಬೇರನ್ನು ಬೆಳ್ಳಿಯ ತಾಯತದಲ್ಲಿ ಧರಿಸಿದರೆ, ಸಂಪತ್ತಿನ ಮಾರ್ಗದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಇದರ ಪರಿಣಾಮವಾಗಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ..

Astro Tips: ಕೇತು ದೋಷ ನಿವಾರಣೆಗೆ ಈ ರತ್ನ ಧರಿಸಿ; ನಿಮ್ಮ ಸಂಕಷ್ಟಗಳೆಲ್ಲಾ ಮಾಯವಾಗುತ್ತದೆ!

ತುಳಸಿ ಮಣ್ಣಿನ ತಿಲಕ

ಸ್ನಾನದ ನಂತರ ತುಳಸಿ ಗಿಡದ ಮಣ್ಣಿನಿಂದ ಹಣೆಯ ಮೇಲೆ ತಿಲಕ ಹಾಕುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಮತ್ತು ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚುತ್ತದೆ. ಇದು ದುರಾದೃಷ್ಟವನ್ನು ದೂರ ಮಾಡಿ, ಇತರರ ಮೇಲೆ ಉತ್ತಮ ಪ್ರಭಾವ ಬೀರುವಂತೆ ಮಾಡುತ್ತದೆ.

ವಾಸ್ತು ದೋಷ ನಿವಾರಣೆಗೆ ತುಳಸಿ ಬಳಕೆ

ಮನೆಯಲ್ಲಿ ವಾಸ್ತು ದೋಷ ಇದ್ದರೆ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಮತ್ತು ವಾಸ್ತು ದೋಷವೂ ಕಡಿಮೆಯಾಗುತ್ತದೆ.

ಪ್ರತಿದಿನ ಬೆಳಿಗ್ಗೆ 2–3 ತುಳಸಿ ಎಲೆಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ತುಳಸಿ ಪೂಜೆಯಲ್ಲಿ ಪಾಲಿಸಬೇಕಾದ ನಿಯಮಗಳು.

ಹಿಂದೂ ಪಂಚಾಂಗದ ಪ್ರಕಾರ ಏಕಾದಶಿ, ಭಾನುವಾರ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳುವುದು ಅಥವಾ ಗಿಡವನ್ನು ಹಾನಿ ಮಾಡುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಇದನ್ನು ಪಾಪಕೃತ್ಯವೆಂದು ಹೇಳಲಾಗುತ್ತದೆ.