Roopa Gururaj Column: ಗೀತಾ ಕರ್ಮಾಕರ್: ಟೀ ತೋಟಗಳ ದೀದಿ ಮೋನಿ
ಉತ್ತರ ಬಂಗಾಳದ ದೂರದ ಚಹಾ ತೋಟ ಗಳಲ್ಲಿ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ಮಾಡಿಸಿ ಕೊಳ್ಳುವು ದೆಂದರೆ ಜನರಿಗೆ ಹೆದರಿಕೆ. ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಮನೆಯ ಅಪಾಯಕಾರಿ ರೀತಿ ಯಲ್ಲಿ ಹೆರಿಗೆ ಮಾಡಿಸು ವುದು ಅಲ್ಲಿನ ವಾಡಿಕೆಯಾಗಿತ್ತು. ಈ ಭಯವನ್ನು ಹೊಡೆದೋಡಿಸಲು ಗೀತಾ ಅವರು ಪ್ರತಿದಿನ ತಮ್ಮ ಸೈಕಲ್ ಏರಿ 12ರಿಂದ 14 ಕಿಲೋಮೀಟರ್ ದೂರ ಪ್ರಯಾಣಿಸು ತ್ತಿದ್ದರು
-
ಒಂದೊಳ್ಳೆ ಮಾತು
ಕೆಲವರು ಇತಿಹಾಸದ ಪುಟಗಳಲ್ಲಿ ಜಾಗ ಪಡೆಯಲು ಕಾಯುತ್ತಾರೆ, ಆದರೆ ಇನ್ನು ಕೆಲವರು ಇತರರ ಜೀವ ಉಳಿಸುವ ಮೂಲಕ ತಾವೇ ಹೊಸ ಇತಿಹಾಸವನ್ನು ಸೃಷ್ಟಿಸುತ್ತಾರೆ. ಉತ್ತರ ಬಂಗಾಳದ ಹಸಿರು ಚಹಾ ತೋಟಗಳ ನಡುವೆ ಇಂತಹದ್ದೇ ಒಂದು ಅದ್ಭುತ ಪವಾಡ ವನ್ನು ಸೃಷ್ಟಿಸಿದವರು ಗೀತಾ ಕರ್ಮಾಕರ್. ಮೂಢನಂಬಿಕೆ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆಯಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 42 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಗೀತಾ, ಸಾವಿರಾರು ತಾಯಂದಿರು ಮತ್ತು ನವಜಾತ ಶಿಶುಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿಯಾಗಿದ್ದರು.
ಉತ್ತರ ಬಂಗಾಳದ ದೂರದ ಚಹಾ ತೋಟ ಗಳಲ್ಲಿ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ಮಾಡಿಸಿ ಕೊಳ್ಳುವು ದೆಂದರೆ ಜನರಿಗೆ ಹೆದರಿಕೆ. ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಮನೆಯ ಅಪಾಯಕಾರಿ ರೀತಿ ಯಲ್ಲಿ ಹೆರಿಗೆ ಮಾಡಿಸು ವುದು ಅಲ್ಲಿನ ವಾಡಿಕೆಯಾಗಿತ್ತು. ಈ ಭಯವನ್ನು ಹೊಡೆದೋ ಡಿಸಲು ಗೀತಾ ಅವರು ಪ್ರತಿದಿನ ತಮ್ಮ ಸೈಕಲ್ ಏರಿ 12ರಿಂದ 14 ಕಿಲೋಮೀಟರ್ ದೂರ ಪ್ರಯಾಣಿಸು ತ್ತಿದ್ದರು. ಅವರು ಮನೆ ಮನೆಗೆ ತೆರಳಿ ತಾಯಂದಿರಿಗೆ ಮತ್ತು ಅವರ ಕುಟುಂಬದವರಿಗೆ ಆಸ್ಪತ್ರೆಯ ಪ್ರಾಮುಖ್ಯತೆಯನ್ನು ತಿಳಿಸಿ ಹೇಳುತ್ತಿದ್ದರು.
ಇದನ್ನೂ ಓದಿ: Roopa Gururaj Column: ವೃತಾಸುರ ವಧೆ: ದಧೀಚಿ ಮುನಿಗಳ ತ್ಯಾಗ ಮತ್ತು ಇಂದ್ರನ ಜಯ
ಹೆದರಿಕೆಯ ಜಾಗದಲ್ಲಿ ನಂಬಿಕೆಯ ದೀಪವನ್ನು ಬೆಳಗಿಸುವುದು ಅವರ ದಿನನಿತ್ಯದ ಕಾಯಕ ವಾಗಿತ್ತು. ಅವರ ಈ ನಿಸ್ವಾರ್ಥ ಸೇವಾ ಪಥದಲ್ಲಿ ವಿಧಿ ದೊಡ್ಡ ಸವಾಲೊಂದನ್ನು ಒಡ್ಡಿತು. ಭೀಕರ ಅಪಘಾತ ವೊಂದು ಗೀತಾ ಅವರಿಗೆ ಶೇಕಡಾ 40ರಷ್ಟು ಶಾರೀರಿಕ ಅಂಗವಿಕಲತೆಯನ್ನು ಉಂಟು ಮಾಡಿತು. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದರೂ, ಗೀತಾ ಅವರ ಮನಸ್ಸಿನಲ್ಲಿದ್ದ ಸೇವೆಯ ಕಿಚ್ಚು ಆರಲಿಲ್ಲ. ಅಪಘಾತದಿಂದ ಊನವಾಗಿ ಸೈಕಲ್ ತುಳಿಯಲು ಸಾಧ್ಯ ವಾಗದಿದ್ದಾಗ ಅವರು ಹತಾಶರಾಗಲಿಲ್ಲ; ಬದಲಿಗೆ, ಸೈಕಲ್ ರಿಕ್ಷಾವೊಂದನ್ನು ಬಾಡಿಗೆಗೆ ಪಡೆದು ಗರ್ಭಿಣಿಯರನ್ನು ತಲುಪುವ ತಮ್ಮ ಪಯಣವನ್ನು ಮುಂದುವರಿಸಿದರು!
ಯಾವುದೇ ದೈಹಿಕ ನೋವು ಅಥವಾ ಅಂಗವಿಕಲತೆ ಅವರ ಕರ್ತವ್ಯದ ಹಾದಿಗೆ ಅಡ್ಡ ಬರಲಿಲ್ಲ. ಅವರ ಈ ಸೇವಾ ಮನೋಭಾವ ಮತ್ತು ಸಮರ್ಪಣಾ ಭಾವನೆ ಇಡೀ ಪ್ರದೇಶದ ಆರೋಗ್ಯ ಕ್ಷೇತ್ರ ದಲ್ಲಿ ಕ್ರಾಂತಿಯನ್ನೇ ತಂದಿತು. ಯಾರೂ ಆಸ್ಪತ್ರೆಗೆ ಹೋಗಲು ಒಪ್ಪದಿದ್ದ ಕಾಲ ದಿಂದ, 2014ರ ವೇಳೆಗೆ ಆ ಪ್ರದೇಶದಲ್ಲಿ ಮನೆ ಯ ಹೆರಿಗೆಯಾಗುವ ಪ್ರಮಾಣ ತೀರಾ ಅಪರೂಪವೆನ್ನು ವಷ್ಟರ ಮಟ್ಟಿಗೆ ಬದಲಾ ಯಿತು. ನೂರಾರು ಹೆರಿಗೆಗಳನ್ನು ಸುರಕ್ಷಿತವಾಗಿ ಮಾಡಿಸಿ, ಹೆರಿಗೆಯ ಸಮಯದ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿದರು. ಆ ಭಾಗದ ಪ್ರತಿಯೊಂದು ಕುಟುಂಬವೂ ಅವರನ್ನು ಪ್ರೀತಿಯಿಂದ ಪೋಲಿಯೋ ದಿದಿಮೋನಿ ಎಂದು ಕರೆಯಲು ಪ್ರಾರಂಭಿಸಿತು.
ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಮಾಡಿದ ಈ ಅಭೂತಪೂರ್ವ ಸೇವೆಗೆ ಅತ್ಯುನ್ನತ ಗೌರವ ಒಲಿದುಬಂದಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೀತಾ ಕರ್ಮಾಕರ್ ಅವರಿಗೆ ‘ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2026’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಾವುಕರಾದ ಗೀತಾ, ನನಗೆ ಈ ಪ್ರಶಸ್ತಿ ಸಿಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದೆಲ್ಲವೂ ನನ್ನ ತಾಯಿಯ ಆಶೀರ್ವಾದ ಎಂದು ವಿನಮ್ರವಾಗಿ ನುಡಿದರು.
ಗೀತಾ ಕರ್ಮಾಕರ್ ಅವರು ಕೇವಲ ಒಬ್ಬ ದಾದಿ (ನರ್ಸ್) ಮಾತ್ರವಲ್ಲ; ಸಾವಿರಾರು ಮನೆ ಗಳ ಬೆಳಕಾಗಿದ್ದವರು, ತಾಯಂದಿರು ಸುರಕ್ಷಿತ ವಾಗಿ ತಮ್ಮ ಮಡಿಲ ಮಗುವಿನೊಂದಿಗೆ ಮನೆಗೆ ಮರಳಲು ಕಾರಣವಾದ ರಕ್ಷಕಿಯಾಗಿದ್ದರು. ನಿಸ್ವಾರ್ಥ ಸೇವೆ ಮತ್ತು ದೃಢ ಸಂಕಲ್ಪಕ್ಕೆ ಅವರ ಜೀವನವೇ ಶ್ರೇಷ್ಠ ಉದಾಹರಣೆ. ಸಮಾಜಕ್ಕೆ ಏನನ್ನಾದರೂ ಒಳಿತನ್ನು ಮಾಡ ಬೇಕು ಎಂದು ಪ್ರಾಮಾಣಿಕವಾಗಿ ಯೋಚಿಸಿ ದರೆ ಅದಕ್ಕೆ 100 ದಾರಿಗಳು ಹೊಳೆಯುತ್ತವೆ.
ಎಲ್ಲಕ್ಕೂ ಹಣದ ಅವಶ್ಯಕತೆ ಇರುವುದಿಲ್ಲ. ಬೇಕಾಗಿರು ವುದು ಒಂದೊಳ್ಳೆ ಮನಸ್ಥಿತಿ ಮಾತ್ರ. ಇಂತಹ ನೂರಾರು ಉದಾಹರಣೆಗಳು ನಮಗೆ ನಮ್ಮ ಸುತ್ತಮುತ್ತಲು ಸಿಗುತ್ತವೆ. ಇಂತಹವರನ್ನು ಅವರ ಜೀವನವನ್ನು ಪ್ರೇರಣೆಯಾಗಿ ತೆಗೆದು ಕೊಂಡು ಸಕಾರಾತ್ಮಕ ಬದುಕನ್ನು ಆಲಂಗಿಸೋಣ. ಸದಾ ನಮ್ಮ ಜೀವನದಲ್ಲಿರುವ ಕೊರತೆ ಗಳ ಬಗ್ಗೆ ಮಾತನಾಡುತ್ತಾ, ಇತರರನ್ನು ದೂಷಿಸುತ್ತಾ ಕಾಲ ಕಳೆಯುವ ಬದಲು ನಮ್ಮ ಜೀವನದಲ್ಲಿ ಇರುವ ಒಳಿತುಗಳನ್ನು ಗಮನಿಸಿಕೊಂಡು ಬೇರೆಯ ವರಿಗೂ ಕೈಲಾದಷ್ಟು ಸಹಾಯ ಮಾಡುವ ಪ್ರಯತ್ನ ಮಾಡೋಣ.