ಯುಗಾದಿ ವರ್ಷ ಭವಿಷ್ಯ: ವೃಶ್ಚಿಕ ರಾಶಿಗೆ ಈ ವರ್ಷ ಪಂಚಮ ಶನಿಯಿಂದ ಏನು ಪರಿಣಾಮ ಬೀರಬಹುದು?
Vrishchika Rashi: 2026-27ನೇ ಸಾಲಿನ ಹಿಂದೂ ನೂತನ ಸಂವತ್ಸರವೇ ಪರಾಭವ ನಾಮ ಸಂವತ್ಸರ ಆಗಿದೆ. ಈ ವರ್ಷವೂ ಗ್ರಹಗತಿಗಳಲ್ಲಿ ಹಲವು ರೀತಿಯ ಬದಲಾವಣೆ ಕಂಡು ಬರಲಿದ್ದು ಕೆಲವು ರಾಶಿಚಕ್ರಗಳಿಗೆ ಗೆಲುವು ಸೂಚಿಸಿದರೆ ಇನ್ನು ಕೆಲವು ರಾಶಿಗೆ ತೊಡಕು ಉಂಟಾಗುವ ಸೂಚನೆ ಇದೆ. ವೃಶ್ಚಿಕ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆಯಾಗಬಹುದು ಎಂದು ಎಂದು ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.
Pushpa Kumari
Mar 25, 2026 1:29 PM
ಬೆಂಗಳೂರು,ಮಾ.25: ವೃಶ್ಚಿಕ ರಾಶಿಗೆ ಕುಜನ ಪ್ರಭಾವ ಬಹಳ ಪ್ರಮುಖವಾಗಿರಲಿದ್ದು ಈ ವರ್ಷ ಮಿಶ್ರ ಫಲ ಇರುತ್ತದೆ.. ನಿಮಗೆ ಪಂಚಮ ಶನಿ ನಡೆಯುತ್ತಿರುವುದರಿಂದ ಹಲವು ರೀತಿಯ ಸಮಸ್ಯೆ ಗಳು ಕಂಡುಬರಬಹುದು. ನಿಮ್ಮ ಕೆಲಸದಲ್ಲಿ ಅಡೆ-ತಡೆ ಉದ್ಯೋಗ ಸಮಸ್ಯೆ, ಸಂತಾನ ಭಾಗ್ಯ ಇಲ್ಲದಿರುವುದು ಹೀಗೆ ನಾನಾ ಸಮಸ್ಯೆ ಕಾಡಬಹುದು. ಹಾಗೆಯೇ ಈ ವರ್ಷ ಸ್ನೇಹ ಸಂಬಂಧಗಳಲ್ಲಿ ನಂಬಿಕೆಯನ್ನು ಇಟ್ಟು ಕೆಲಸ ಮಾಡುವ ಬಗ್ಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿ ಬರಬಹುದು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.